ರಾಜ್ಯಸುದ್ದಿ

ಮಮತಾ ಬ್ಯಾನರ್ಜಿ ಹೊಗಳಿದ ಗೋವಾ ಶಾಸಕ: ದೇಶದ ಸಣ್ಣ- ಪುಟ್ಟ ರಾಜ್ಯಗಳತ್ತ ಟಿಎಂಸಿ ಚಿತ್ತ..!

Goa: ಗೋವಾದ ಪಕ್ಷೇತರ ಶಾಸಕ ಪ್ರಸಾದ್ ಗಾಂವ್ಕರ್ (Prasad Gaonkar) ಬುಧವಾರ ಮಾಧ್ಯಮಗಳ ಎದುರು ಮಾತನಾಡುತ್ತಾ, ತೃಣಮೂಲ ಕಾಂಗ್ರೆಸ್ ಪಕ್ಷವನ್ನು (ಟಿಎಂಸಿ) ಶ್ಲಾಘಿಸಿದರು ಮತ್ತು ಪಶ್ಚಿಮ ಬಂಗಾಳ (West Bengal) ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಿದ ಧೀರ ಹಾಗೂ ಅತ್ಯಂತ ಚಾಣಾಕ್ಷ ಮಹಿಳೆ ಮಮತಾ ಬ್ಯಾನರ್ಜಿ Mamata Banerjee   ಹೇಳಿದರು.

ಟಿಎಂಸಿ ಸಂಸದ ಡೆರೆಕ್ ಒ’ಬ್ರೇನ್ ಸಮ್ಮುಖದಲ್ಲಿ ಗೋವಾದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗಾಂವ್ಕರ್, ಸದ್ಯಕ್ಕೆ ತಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
“ಗೋವಾಕ್ಕೆ ಬದಲಾವಣೆಯ ಅಗತ್ಯವಿದೆ ಮತ್ತು ಅದಕ್ಕಾಗಿಯೇ ನಾನು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದ್ದೇನೆ” ಎಂದು ಸಂಗುಯೆಮ್ (Sanguem) ಎಂಎಲ್‌ಎ ಹೇಳಿದರು.

ಮುಂದಿನ ಫೆಬ್ರವರಿಯಲ್ಲಿ ಗೋವಾದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಎಂಸಿ ನಿರ್ಧರಿಸಿದೆ.

ಗಾಂವ್ಕರ್ ಆರಂಭದಲ್ಲಿ 2017 ರ ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಮನೋಹರ್ ಪರಿಕ್ಕರ್ (Manohar Parrikar) ನೇತೃತ್ವದ ಸರ್ಕಾರವನ್ನು ಬೆಂಬಲಿಸಿದ್ದರು, ನಂತರ ಅವರು ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡರು.

Related Articles

Leave a Reply

Your email address will not be published. Required fields are marked *

Back to top button