ಆರೋಗ್ಯ

ಮೀನು ತಿನ್ನೋದ್ರಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲ ಲಾಭಗಳಿವೆ ಗೊತ್ತಾ..?

ಜಗತ್ತಿನಾದ್ಯಂತ ಮಾಂಸಾಹಾರಿಗಳಿಗೆ ಮೀನು ಫೇವರಿಟ್‌ ಎಂದರೆ ಅದು ತಪ್ಪಾಗಲಿಕ್ಕಿಲ್ಲ. ಮೀನು ಅಂದ್ರೆ ಎನ್ ಸುಮ್ನೆ ನಾ.. ಮೀನು ರುಚಿ ಮಾತ್ರವಲ್ಲ, ಇದು ಆರೋಗ್ಯಕ್ಕೂ ಉತ್ತಮ. ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮತ್ಸ್ಯ ಸೇವನೆಯಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಕರಾವಳಿ ಸೇರಿದಂತೆ ಜಗತ್ತಿನ ಹಲವು ಪ್ರದೇಶಗಳಲ್ಲಿ ಮೀನು ಪ್ರಮುಖ ಆಹಾರವಾಗಿದ್ದು, ಇದನ್ನು ಪ್ರತಿದಿನ ತಿನ್ನುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ.

ಪ್ರತಿದಿನ ಮೀನು ತಿನ್ನೋದು ಆರೋಗ್ಯಕ್ಕೆ ಒಳ್ಳೆಯದೇ, ದಿನಾ ಮೀನು ತಿನ್ನುವುದರಿಂದ ಏನಾಗುತ್ತೆ, ಇದರಿಂದ ದೇಹದ ಮೇಲೆ ಯಾವೆಲ್ಲಾ ರೀತಿಯ ಪರಿಣಾಮಗಳು ಬೀರುತ್ತವೆ ಎಂಬಿತ್ಯಾದಿ ವಿಷಯಗಳು ಇಲ್ಲಿವೆ.

ಬುದ್ಧಿವಂತಿಕೆಯನ್ನು ಬೆಳೆಸುತ್ತದೆ. ಮೀನುಗಳ ಸೇವನೆಯಿಂದ ನಮ್ಮ ಬುದ್ಧಿ ಚುರುಕಾಗುತ್ತದೆ ಮತ್ತು ಅನೇಕ ರೋಗ ಹಾಗೂ ಆರೋಗ್ಯ ಸಂಬಂಧಿತ ತೊಂದರೆಗಳನ್ನು ದೂರ ಇಡಬಹುದು. ಮೀನಿನಲ್ಲಿ ಅತ್ಯುತ್ತಮ ಗುಣಮಟ್ಟದ ಓಮೇಗಾ-3 ಕೊಬ್ಬಿನ ಆಮ್ಲವು ಹೇರಳವಾಗಿರುವುದರಿಂದ ಇದು ಮಕ್ಕಳ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಅದರ ಜೊತೆಗೆ ಕಣ್ಣಿನ ಕಾಂತಿಯನ್ನು ಕೂಡ ಹೆಚ್ಚಿಸುತ್ತದೆ.ಪ್ರತಿದಿನ ಮೀನು ತಿನ್ನುವುದರಿಂದ ರಕ್ತ ಹೆಪ್ಪುಗಟ್ಟುವ, ರಕ್ತನಾಳಗಳು ಕುಗ್ಗುವ, ರಕ್ತನಾಳಗಳು ಗಡಸುಗೊಳ್ಳುವ ತೊಂದರೆಗಳು ಕಾಣುವುದಿಲ್ಲ.

ಮೀನು ಸೇವನೆಯಿಂದ ದೇಹದಲ್ಲಿ ಕೊಬ್ಬಿನಾಂಶವು ಕೂಡ ಕಡಿಮೆಯಾಗುತ್ತದೆ. ಅದರ ಜೊತೆಗೆ ರಕ್ತನಾಳಗಳು ಮೃದುತ್ವಗೊಂಡು ಹೃದಯ ಸಂಬಂಧಿ ಕಾಯಿಲೆಯಿಂದ ನಾವು ದೂರ ಇರಬಹುದು.ಈಗಾಗಲೇ ಹೇಳಿದಂತೆ ಮೀನಿನಲ್ಲಿ ಓಮೆಗಾ -3 ಅಂಶ ಹೇರಳವಾಗಿದೆ ಕೊಬ್ಬಿನ ಆಮ್ಲಗಳು ಇರುವುದರಿಂದ ಕ್ಯಾನ್ಸರ್ನಂತಹ ರೋಗಗಳನ್ನು ತಡೆಯಬಲ್ಲವು. ಪ್ರಮುಖವಾಗಿ ಬಾಯಿ, ಅನ್ನನಾಳ, ಸಣ್ಣ ಕರುಳು, ಸ್ತನ ಹಾಗೂ ಗರ್ಭಾಶಯಗಳ ಕ್ಯಾನ್ಸರ್ನ್ನು ಶೇಕಡಾ 30 ರಿಂದ 50 ರಷ್ಟು ಕಡಿಮೆ ಮಾಡಬಲ್ಲವು.

ಗರ್ಭಿಣಿಯರು ಪ್ರತಿ ದಿನ ಮೀನು ತಿನ್ನುವುದರಿಂದ ಅವಧಿಗೆ ಮೊದಲು ಮಗುವಿಗೆ ಜನ್ಮ ನೀಡುವುದನ್ನು ತಡೆಯಬಹುದು ಹಾಗೂ ಎದೆಯ ಹಾಲು ಹೆಚ್ಚುವುದರ ಜೊತೆಗೆ ಮೂಳೆಗಳು ಸದೃಢವಾಗುತ್ತವೆ. ಇನ್ನು ಆಸ್ಟ್ರೇಲಿಯಾ ಪೋಷಣೆ ವಿಭಾಗ 2004ರಲ್ಲಿ ಹೇಳುವ ಪ್ರಕಾರ ಮಕ್ಕಳು ಹೆಚ್ಚು ಹೆಚ್ಚು ಮೀನನು ತಿನ್ನುವುದರಿಂದ ಅವರಲ್ಲಿ ಅಸ್ತಮಾ ಮಾದರಿಯ ರೋಗಗಳು ಕಂಡುಬರುವುದು ತುಂಬಾ ವಿರಳ ಎನ್ನಲಾಗುತ್ತದೆ.

✒️ ಬರಹ: ಮೊಹಮ್ಮದ್ ಶಫಿ ಸ್ಪೆಶಲ್ ಡೆಸ್ಕ್ tv8newskannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button