ಇಂದಿನ ದಿನಗಳಲ್ಲಿ ಪುಸ್ತಕ ಗಳು ದಿವ್ಯ ಜ್ಞಾನವನ್ನು ನೀಡುತ್ತದೆ- ಡಾ. ಅವದೂತ ಮಹರ್ಷಿ ಸಿದ್ಧಾರ್ಥ ಸ್ವಾಮೀಜಿ

ಧಾರವಾಡ: ಇಂದಿನ ದಿನಗಳಲ್ಲಿ ಪುಸ್ತಕಗಳು ದಿವ್ಯಜ್ಞಾನ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹುಬ್ಬಳ್ಳಿ ತಾಲೂಕಿನ ಚನ್ನಾಪೂರ ಗ್ರಾಮದ ಶ್ರೀ ಗುರು ಅಧ್ಯಾತ್ಮ ಅಶ್ರಮದ ಡಾ. ಅವದೂತ ಮಹರ್ಷಿ ಸಿದ್ದಾರ್ಥ ಸ್ವಾಮಿಜಿ ಹೇಳಿದರು.
ರವಿವಾರ ಧಾರವಾಡ ರಂಗಾಯಣ ಸಭಾಭವನದಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ಕಡಲಬಾಳುವಿನ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರ, ಸಾಧಕರ ಶ್ರೀ ಮಾತಾ ಪ್ರಕಾಶನ ಸಂಸ್ಥೆಯಿಂದ ಡಾ.ದ.ರಾ.ಬೇಂದ್ರೆ ಸದ್ಭಾವನಾ ಸೇವಾ ರತ್ನ ಪ್ರಶಸ್ತಿ ಪ್ರದಾನ ಹಾಗೂ ಕವಿಗೋಷ್ಠಿ ಕಾಲಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು
ಪತ್ರಕರ್ತ, ಸಾಹಿತಿಗಳಾದ ಸಿ.ವಾಯ್.ಮೆಣಸಿನಕಾಯಿ ಅವರ ಮನದ ಮಾತು ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಪತ್ರಕರ್ತ ಸಿ.ವಾಯ್.ಮೆಣಸಿನಕಾಯಿ ಅವರು ಅನೇಕ ಕೃತಿಗಳನ್ನು ಹೊರ ತರುವ ಮೂಲಕ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ.ಇಂದಿನ ಯುವಕರು ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ಸಿ.ವಾಯ್.ಮೆಣಸಿನಕಾಯಿ ಅವರಿಗೆ ಡಾ.ದ.ರಾ.ಬೇಂದ್ರೇ ಸದ್ಭಾವಣಾ ಪ್ರಶಸ್ತಿ ನೀಡಿ ಗೌರವಿಸಿದರು.
ಇನ್ನು ಕಾರ್ಯಕ್ರಮದಲ್ಲಿ ವಿದ್ಯಾಪೀಠದ ಅಧ್ಯಕ್ಷ ಡಾ.ನಾಗರಾಜ ತಂಬ್ರಹಳ್ಳಿ,ಚಲನಚಿತ್ರ ನಿರ್ಮಾಪಕ ಡಾ. ರಾಜು ಮೋರೆ,ದಾಂಡೇಲಿಯ ನಗರಸಭೆ ಮಾಜಿ ಅಧ್ಯಕ್ಷ ಗೋವಿಂದ ಕಾಡಪ್ಪ ಮೇಲಗೇರಿ, ಶ್ರೀಮತಿ ಸುಮಾ ಬಸವರಾಜ ಹಡಪದ,
ವಾಯ್.ವಾಯ್.ಕೊಕ್ಕನವರ, ಡಾ. ಹೆಚ್.ಬಿ.ನಡುವಿನಕೇರಿ,
ಶ್ರೀಮತಿ ಕೆ. ಶಶಿಕಲಾ, ಚಿಗಟೇರಿ ಕೊಟ್ರೇಶ, ಎಸ್.ಬಿ. ನಾಯ್ಕ , ಡಾ. ಕುಮಾರ ಕಾಂಬಳೆ , ಡಾ. ಹನುಮಂತಪ್ಪ ಎಸ್.ಹರಿಜನ, ಇನ್ನಿತರರು ಇದ್ದರು.
ವರದಿ: C ಕೊಟ್ರೇಶ್ tv8newskannada ಧಾರವಾಡ