ನಮ್ಮ ಜಿಲ್ಲೆ ಅದ್ಭುತ ಪ್ರವಾಸಿ ತಾಣಗಳನ್ನು ಹೊಂದಿದೆ. ನಮ್ಮ ಊರಿನ ಬಗ್ಗೆ ಎಲ್ಲರಿಗೆ ತಿಳಿಯಬೇಕು ಎಂಬುದು ನನ್ನ ಆಶಯವಾಗಿದೆ. ನಮ್ಮ ಊರಷ್ಟೇ ಅಲ್ಲ, ಇಡೀ ರಾಜ್ಯ ಹಾಗೂ ದೇಶ ಬೆಳೆಯಬೇಕು ಎಂದು ಅವರು ಹೇಳಿದ್ದರು
ಕಳೆದ ವರ್ಷ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಚೆಲುವ ಚಾಮರಾಜನಗರದ ರಾಯಭಾರಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಂದೇಶ ಇರುವ ” ಹುಲಿಗಳ ನಾಡು ” ಚಾಮರಾಜನಗರ ಎಂಬ ಪ್ರಮೋಷನ್ ವಿಡಿಯೋವೊಂದನ್ನು (Promotion Video) ಜಿಲ್ಲಾಡಳಿತ ಸಿದ್ದಪಡಿಸಿ ಬಿಡುಗಡೆ ಮಾಡಿತ್ತು.
ಜಿಲ್ಲೆಯ ಪರಿಸರ , ಧಾರ್ಮಿಕ, ಆಧ್ಯಾತ್ಮ ,ಪ್ರವಾಸೋದ್ಯಮ, ಸಾಹಸ ಹಾಗೂ ಪಾರಂಪರಿಕ ಪ್ರವಾಸಿ ತಾಣಗಳ ಸೌಂದರ್ಯ ಅನಾವರಣಗೊಳಿಸುವ ಈ ವಿಡಿಯೋದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಯಾವುದೇ ರೀತಿಯ ಸಂಭಾವನೆ ಪಡೆಯದೆ ಸಂದೇಶ ನೀಡುವ ಮೂಲಕ ತವರು ಜಿಲ್ಲೆಯ ಅಭಿವೃದ್ಧಿಗೆ ಸಾಥ್ ನೀಡಿದ್ದರು.