ರಾಯರೆಡ್ಡಿ ಜನಮೆಚ್ಚುಗೆ ಪಡೆದ ಜನನಾಯಕ: ಪಿ.ಜಿ.ಆರ್.ಸಿಂಧ್ಯಾ

ನಿವೇಶನ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾಜಿ ಸಚಿವಈ ಕ್ಷೇತ್ರದ ಶಾಸಕ ಬಸವರಾಜ್ ರಾಯರೆಡ್ಡಿ ಬರೀ ತಾಲೂಕಿಗೆ ಸೀಮಿತವಾದ ರಾಜಕಾರಣಿ ಯಲ್ಲ. ಈ ರಾಜ್ಯದ ಜನತೆ ಮೆಚ್ಚಿದ ಅಭಿವೃದ್ಧಿ ಜನನಾಯಕರಾಗಿದ್ದಾರೆ ಎಂದು ಮಾಜಿ ಸಚಿವ ಪಿ.ಜಿ. ಆರ್. ಸಿಂಧ್ಯಾ ಹೇಳಿದರು.
ಯಲಬುರ್ಗಾ : ಪಟ್ಟಣದ ಬೈಲು ರಂಗಮಂದಿರದ ಆವರಣದಲ್ಲಿ ಯಲಬುರ್ಗಾ ಕುಕನೂರು ತಾಲೂಕ್ ಆಡಳಿತ ಮತ್ತು ಯಲಬುರ್ಗಾ ವಿಧಾನಸಭಾ ಶಾಸಕರ ಕಾರ್ಯಾಲಯದ ಸಂಯೋಗದಲ್ಲಿ ನಾನಾ ಗ್ರಾಮಗಳ ಫಲಾನುಭವಿಗಳಿಗೆ . ನಿವೇಶನ ಹಕ್ಕು ಪತ್ರ. ಜಮೀನುಗಳ ಪಹಣಿ ಪತ್ರಿಕೆ ಹಾಗೂ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ. ಯಲಬುರ್ಗಾ ತಾಲೂಕು ಅಭಿವೃದ್ಧಿ ಸುವರ್ಣ ಯುಗ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ರಾಜ್ಯದ ಶಾಸಕರು. ಸಚಿವರು ಬಸವರಾಜ್ ರಾಯರೆಡ್ಡಿ ಅವರು ಜನಪರ ಅಭಿವೃದ್ಧಿ ನೋಡಿ ಕಲಿಯಬೇಕಾಗಿದ್ದು ಬಹಳಷ್ಟಿದೆ ಎಂದರು.
ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡುವ ಮುಖ್ಯಮಂತ್ರಿಯಾಗಿದ್ದಾರೆ. ಅವರ ಸಂಪುಟದಲ್ಲಿ ರಾಯರೆಡ್ಡಿ ಸಚಿವರಾಗಬೇಕಾಗಿತ್ತು. ಆದರೂ ಎದೆಗುಂದದೆ ಅಭಿವೃದ್ಧಿ ಚಿಂತನೆಗಟ್ಟು ಕೊಂಡು ಜೀವನ ದುಃಖ ರಾಜ್ಯದಲ್ಲಿಯೇ ಜನ ಮೆಚ್ಚುಗೆ ಪಡೆದುಕೊಂಡು ರಾಜಕಾರಣಿಯಲ್ಲಿ ಒಬ್ಬರಾಗಿದ್ದಾರೆ. ಇನ್ನೂ ರಾಯರೆಡ್ಡಿ ಹೋರಾಟಗಾರರು ಹಿಡಿದ ಕೆಲಸವನ್ನು ಮಾಡದೆ ಬಿಡಲಾರದ ಹಠವಾದಿ. ಈ ಕ್ಷೇತ್ರದಲ್ಲಿ ಆರು ಬಾರಿ ಶಾಸಕನಾಗಿ. ಒಮ್ಮೆ ಸಂಸದನಾಗಿ ಮಾಡಿದ ಕಾರ್ಯ ನಿಜಕ್ಕೂ ಶ್ಲಾಘನೀಯ. ಯಾವುದರಲ್ಲೂ ಕಡಿಮೆ ಇಲ್ಲದ ನೇರ ವ್ಯಕ್ತಿತ್ವ ಹೊಂದಿದ ರಾಯರೆಡ್ಡಿ ಅವರು ಒಂದೊಂದು ದಿನ ಈ ರಾಜ್ಯದ ಮುಖ್ಯಮಂತ್ರಿ ಆಗು ಬೇಕೆನ್ನುವುದು ನನ್ನಾಸಿಯಾಗಿದೆ ಎಂದರು.
ನಿವೃತ್ತ ಡಿಜಿಪಿ ಹಾಗೂ ವೀರಶೈವ ಮಹಾಸಭಾದ ಅಧ್ಯಕ್ಷ ಶಂಕರ್ ಬಿದರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ. ನೀರಾವರಿ ವಿಷಯದಲ್ಲಿ ರಾಯರೆಡ್ಡಿ ಅವರಿಗೆ ಸಾಕಷ್ಟು ಜ್ಞಾನವಿದೆ. ಆದರೂ ನೇತೃತ್ವದ ವಹಿಸಿಕೊಂಡು ಉತ್ತರ ಕರ್ನಾಟಕದ ನೀರಾವರಿ ಷ ವ್ಯಾಜ್ಯಗಳನ್ನು ಪರಿಹರಿಸಬೇಕು. ಕೊಪ್ಪಳ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ, ಈ ಭಾಗವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಬೇಕು. ರೈತರ ಹಿತ ಕಾಪಾಡುವ ಶಕ್ತಿ ಸಾಮರ್ಥ್ಯ ಅವರು ಹೊಂದಿದ್ದಾರೆ ಎಂದರು.
ಸಿಎಂ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ್ ರಾಯರೆಡ್ಡಿ ಮಾತನಾಡಿ. ಈ ಕ್ಷೇತ್ರ ಜನತೆ ನನ್ನ ಮೇಲೆ ಬಿಟ್ಟಿರುವ ಅಪಾರಾನ ಪ್ರೀತಿ ವಿಶ್ವಾಸ. ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ ನಾನು ೧೯೮೫ ರಿಂದ ಮೊದಲು ಶಾಸಕನಾಗಿದ್ದಾಗಿನಿಂದಲೂ ಇಲ್ಲಿ ತನಕ ಶಾಸಕ. ಸಚಿವ ಸಂಸದನಾಗಿ ಏನು ಅಭಿವೃದ್ಧಿ ಮಾಡಿದ್ದೇನೆ ಎನ್ನುವುದನ್ನು. ಈ ಸುವರ್ಣ ಯುಗ ಎಂಬ ಪುಸ್ತಕದಲ್ಲಿ ನೀಡಲಾಗಿದೆ. ತಾಲೂಕಿನಲ್ಲಿ 53 ಸಾವಿರ ಮನೆಗಳಿಗೆ ಈ ಪುಸ್ತಕಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಅಧ್ಯಕ್ಷತೆ ಮಾತನಾಡಿದರು. ಬೆಳಗಾವಿ ಭೂ ದಾಖಲೆಗಳ ಜಂಟಿ ನಿರ್ದೇಶಕಿ ನಜ್ಮ. ಎಸ್ ಪಿ ಡಾಕ್ಟರ್ ರಾಮ್ ಅರಶಿದ್ದಿ ಉಪವಿಭಾಗಾಧಿಕಾರಿ ಕ್ಯಾ ಮಹೇಶ್ ಮಾಲಗಿತ್ತಿ. ಶ್ರೀನಿವಾಸ ರೆಡ್ಡಿ. ಡಿ ವೈ ಎಸ್ ಪಿ ಮುತ್ತಣ್ಣ ಸವರ ಗೋಳು . ತಹಶೀಲ್ದಾರ್ ಬಸವರಾಜ್ ತೆನ್ನಳ್ಳಿ ಪ್ರಾಣೇಶ್ ಇಒ ಸಂತೋಷ್ ಪಾಟೀಲ್ ಸಿ ಪಿ ಐ ಮೌನೇಶ್ ಪಾಟೀಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಉಳ್ಳಾಗಡ್ಡಿ. ಹನುಮಂತಗೌಡ ಚಂಡೂರ್. ಮತ್ತೆ ತರರು ಇದ್ದರು
ವರದಿ: ದೊಡ್ಡಬಸಪ್ಪ ಹಕಾರಿ tv8newskannada ಯಲಬುರ್ಗಾ