ಇತ್ತೀಚಿನ ಸುದ್ದಿ

ಕನ್ನಡವನ್ನು ಆದಷ್ಟೂ ಬಳಸಿ ಬೆಳಸಿ ಉಳಿಸಿ: ನ್ಯಾಯಾಧೀಶರು ಬಿರಾದಾರ ದೇವೀಂದ್ರಪ್ಪ .ಎನ್

ದೇವನಹಳ್ಳಿ ಪಟ್ಟಣದ ನ್ಯಾಯಾಲಯದ ಸಂಕೀರ್ಣದಲ್ಲಿ ವಕೀಲರ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವದ ಸಂಭ್ರಮ

ದೇವನಹಳ್ಳಿ: ತಮ್ಮ ದಿನನಿತ್ಯ ಜೀವನದಲ್ಲಿ ಕನ್ನಡವನ್ನು ಆದಷ್ಟೂ ಬಳಸಿ ಬೆಳಸಿ ಉಳಿಸಿ ಕನ್ನಡವನ್ನು ಪ್ರತಿಯೊಬ್ಬರೂ ವಿದ್ಯಾರ್ಥಿಯಂತೆ ಕಲಿಯುವುದು ತುಂಬಾ ಇದೆ ಎಂದು 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬಿರಾದಾರ ದೇವೀಂದ್ರಪ್ಪ ಹೇಳಿದರು. ಪಟ್ಟಣದ ನ್ಯಾಯಾಲಯದ ಸಂಕೀರ್ಣದಲ್ಲಿ ನಡೆದ ವಕೀಲರ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಮಾತಾನಾಡಿದರು.

17(1)B ಖಾಯಿದೆಯ ಪ್ರಕಾರ ಅನ್ಯ ಭಾಷೆಯೊಂದಿಗೆ ಮಾತೃಭಾಷೆಯ ಕನ್ನಡಕ್ಕೂ ಪ್ರಾಮುಖ್ಯತೆ ನೀಡಬೇಕು, ಒಂದು ವೃತ್ತಿಪರತೆಯನ್ನು ಗುರುತಿಸುವ ಪ್ರೋತ್ಸಾಹಿಸುವ ಸಲುವಾಗಿ ವಕೀಲರ ದಿನದಂತಹ ಆಚರಣೆಗಳು ಹಚ್ಚಾಗಿ ಮಾಡಬೇಕು ಎಂದರು.ಕಿಮ್ಸ್ ಮೆಡಿಕಲ್ ಕಾಲೇಜು ಅಧ್ಯಕ್ಷ ಡಾ.ಆಂಜಿನಪ್ಪ ಮಾತನಾಡಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ, ನಿಮ್ಮ ಉತ್ತಮ ಆಹಾರಶೈಲಿ ಆರೋಗ್ಯಯುತ ಜೀವನವನ್ನು ನಿರ್ಧರಿಸುತ್ತದೆ,ಬೆಂಗಳೂರು ನಗರದಲ್ಲಿ 30% ಕನ್ನಡಿಗರು ಇದ್ದಾರೆ ಬೇರೆ ಭಾಷೆಯನ್ನು ಗೌರವಿಸಬೇಕು ನಮ್ಮ ಭಾಷೆಯ ಮೇಲೆ ಹೆಮ್ಮೆಯಿರಬೇಕು ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಮುನಿರಾಜು ಮಾತನಾಡಿ ತಮ್ಮ ವೃತ್ತಿ ಪವಿತ್ರತೆಯನ್ನು ಕಾಪಾಡಿಕೊಂಡು,ಕಕ್ಷಿದಾರರ ವಿಶ್ವಾಸವನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡಿದರೆ ಭವಿಷ್ಯದಲ್ಲಿ ಉತ್ತಮ ಸ್ಥಾನಕ್ಕೇರಲು ಸಹಕಾರಿಯಾಗುತ್ತದೆ ಹಾಗೂ ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಕಿರಿಯ ವಕೀಲರು ವೃತ್ತಿಯನ್ನು ವ್ಯವಸ್ಥಿತವಾಗಿ ನಡೆಸಬೇಕು ಅವರ ಸಲಹೆ ಸೂಚನೆಗಳನ್ನು ಪಾಲಿಸುವ ಮೂಲಕ ವೃತ್ತಿಯಲ್ಲಿ ನೈಪುಣ್ಯತೆ ಹೆಚ್ಚಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು. ಕಾರ್ಯಕ್ರಮದಲ್ಲಿ ಟಿವಿ ಹರಟೆ ಕಲಾವಿದ ಉಪನ್ಯಾಸಕ ಉಮೇಶ್ .ಡಿ ಗೌಡ ರಿಂದ ನಗೆ ಭಾಷಣ ನಡೆಸಿ ನೆರದಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು.ಇದೇ ಸಂದರ್ಭದಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ್. ಜಿ ,1ನೇ ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರವೀಣ್ ನಾಯಕ್, 2ನೇ ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಲೋಕೇಶ್ .ಎಂ ಜಿ ,ಪ್ರಧಾನ ಸಿವಿಲ್ ಮತ್ತು ಜೆ ಎಂ ಎಸ್ ಸಿ ನ್ಯಾಯಾಧೀಶ ಪ್ರತಾಪ್ ಕುಮಾರ್ , ಸಿವಿಲ್ ನ್ಯಾಯಾಧೀಶೆ ಸುಕನ್ಯಾ ಸಿ ಎಸ್ ,2ನೇ ಅಪರ ಸಿವಿಲ್ ನ್ಯಾಯಾಧೀಶ ಕೆಂಚನಗೌಡ ಪಾಟೀಲ್, ವಕೀಲರ ಸಂಘದ ಉಪಾಧ್ಯಕ್ಷ ಕೇಶವಮೂರ್ತಿ .ಆರ್, ಪ್ರಧಾನ ಕಾರ್ಯದರ್ಶಿ ಕೃಷ್ಣ .ಜಿ .ರಾವ್, ಜಂಟಿ ಕಾರ್ಯದರ್ಶಿ ಮುನೇಗೌಡ ,ಖಜಾಂಚಿ ಮಾರೇಗೌಡ ,ಕಾರ್ಯಕಾರಿ ಮಂಡಳಿ ಪದಾಧಿಕಾರಿಗಳಾದ ರಾಜಣ್ಣ ,ಮುನಿಯಪ್ಪ, ಶಿವರಾಜ್ ಕುಮಾರ್, ಲೋಕೇಶ್ ,ನಂದೀಶ್, ಸುನಿಲ್, ಮಂಜುನಾಥ್ ,ನಾಗರಾಜ್ ,ರಾಜಣ್ಣ ,ದಿನೇಶ್ ಕುಮಾರ್, ನಾಗೇಶ್ ,ಭಾಗ್ಯಮ್ಮ ಸೇರಿದಂತೆ ವಕೀಲರು ಭಾಗಿಯಾಗಿದ್ದರು.

ವರದಿ : ಮಧು tv8newskannada ದೇವನಹಳ್ಳಿ

Related Articles

Leave a Reply

Your email address will not be published. Required fields are marked *

Back to top button