ರಾಜಕೀಯ

ಪ್ರಧಾನಿ ಮೋದಿಗೆ ಗೆ ಸಿನಿಮಾ ನೋಡಲು ಟೈಮ್‌ ಇದೆ, ನಿರುದ್ಯೋಗದ ಬಗ್ಗೆ ಮಾತನಾಡೋಕೆ ಟೈಮ್ ಇಲ್ಲ..!

ಪ್ರಧಾನಿ ನರೇಂದ್ರ ಮೋದಿ ತಮ್ಮ ಕೇಂದ್ರ ಬಿಜೆಪಿ ಸಚಿವರೊಂದಿಗೆ ದಿ ಸಬರಮತಿ ರಿಪೋರ್ಟ್‌ (The Sabarmati Report) ಸಿನಿಮಾವನ್ನು ವೀಕ್ಷಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದ್ದಾರೆ. ಮೋದಿಯವರು ನಿಸ್ಸಂದೇಹವಾಗಿ ದೇಶದ ಅತ್ಯುತ್ತಮ ಈವೆಂಟ್ ಮ್ಯಾನೇಜರ್ ಮತ್ತು “ಸ್ವಯಂ” ಸಮಾರಂಭಗಳ ಮಾಸ್ಟರ್ ಆಗಿದ್ದಾರೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಶ್ಮೀರ ಫೈಲ್ಸ್, ಸಬರಮತಿ ವರದಿ ಮುಂತಾದ ಚಲನಚಿತ್ರಗಳನ್ನು ವೀಕ್ಷಿಸಲು, ಶ್ಲಾಘಿಸಲು, ವಿಮರ್ಶಿಸಲು ಮತ್ತು ಪ್ರಚಾರ ಮಾಡಲು ಸಮಯವಿದೆ. ಆದರೆ ಸಂಸತ್ತನ್ನು ನಡೆಸಲು, ದೇಶದ ಆರ್ಥಿಕ ಸ್ಥಿತಿಯನ್ನು ವಿವರಿಸಲು, ನಿರುದ್ಯೋಗ ಸಮಸ್ಯೆಗಳನ್ನು ಪರಿಹರಿಸಲು ಅಥವಾ ಮಣಿಪುರಕ್ಕೆ ಭೇಟಿ ನೀಡಲು ಸಮಯವಿಲ್ಲ ಎಂದು ಪ್ರಿಯಾಂಕ್‌ ವ್ಯಂಗ್ಯವಾಡಿದ್ದಾರೆ. ಪ್ರಧಾನಮಂತ್ರಿಯವರು ನಿಜವಾದ ಮಣಿಪುರ ಫೈಲ್‌ಗಳನ್ನು ಯಾವಾಗ ಓದುತ್ತಾರೆ ಮತ್ತು ಭಾರತದ ಜನರಿಗೆ ನಿಜವಾದ ಮಣಿಪುರ ಕಥೆಯನ್ನು ಯಾವಾಗ ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ನಡೆದಿದ್ದ ಗೋದ್ರಾ ರೈಲು ದುರಂತದ ಹಿಂದಿನ ಕಥೆಯಾಧಾರಿತ ಸಾಬರಮತಿ ರಿಪೋರ್ಟ್‌ ಸಿನಿಮಾವನ್ನು ಸಂಸತ್‌ನ ಲೈಬ್ರರಿಯ ಸಭಾಂಗಣದಲ್ಲಿ ವೀಕ್ಷಿಸಿದರು. ಅಮಿತ್‌ ಶಾ, ನಿತಿನ್‌ ಗಡ್ಕರಿ, ರಾಜನಾಥ್‌ ಸಿಂಗ್‌, ಜೆ.ಪಿ.ನಡ್ಡಾ ಸೇರಿದಂತೆ ಬಿಜೆಪಿಯ ನಾಯಕರೊಂದಿಗೆ ಈ ಸಿನಿಮಾ ವೀಕ್ಷಿಸಿರುವ ಫೋಟೋಗಳನ್ನು ಮೋದಿ ಶೇರ್‌ ಮಾಡಿಕೊಂಡಿದ್ದಾರೆ. ಚಿತ್ರದ ನಿರ್ಮಾಪಕರನ್ನು ಹಾಗೂ ಚಿತ್ರ ತಂಡವನ್ನು ಮೋದಿ ಹಾಡಿ ಹೊಗಳಿದ್ದಾರೆ.

ನಟ ವಿಕ್ರಾಂತ್ ಮಾಸ್ಸೆ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 2002ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಗೋದ್ರಾ ರೈಲು ದುರಂತದ ಮೇಲೆ ಈ ಸಿನಿಮಾ ಬೆಳಕು ಚೆಲ್ಲಿದೆ. ಈ ಸಿನಿಮಾವನ್ನು ಶೋಭಾ ಕಪೂರ್, ಏಕ್ತಾ ಆರ್ ಕಪೂರ್ ಸೇರಿ ಹಲವರು ನಿರ್ಮಾಣ ಮಾಡಿದ್ದು, ಧೀರಜ್ ಸರ್ನಾ ಆಕ್ಷನ್‌ ಕಟ್‌ ಹೇಳಿದ್ದಾರೆ. ಸೌತ್‌ ನಟಿ ರಾಶಿ ಖನ್ನಾ ಕೂಡ ನಟಿಸಿದ್ದಾರೆ.ನಾನು ಪ್ರಧಾನ ಮಂತ್ರಿ ಮತ್ತು ಎಲ್ಲಾ ಕ್ಯಾಬಿನೆಟ್ ಮಂತ್ರಿಗಳು ಮತ್ತು ಅನೇಕ ಸಂಸದರೊಂದಿಗೆ ಚಲನಚಿತ್ರವನ್ನು ವೀಕ್ಷಿಸಿದ್ದೇನೆ. ಇದು ನನಗೆ ವಿಶೇಷ ಅನುಭವವಾಗಿದೆ. ನಾನು ಅದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಏಕೆಂದರೆ ನಾನು ತುಂಬಾ ಸಂತೋಷವಾಗಿದ್ದೇನೆ. ನಾನು ಪ್ರಧಾನಿಯವರೊಂದಿಗೆ ನನ್ನ ಸಿನಿಮಾ ವೀಕ್ಷಿಸಲು ಅವಕಾಶ ಸಿಕ್ಕಿದ್ದೇ ನನ್ನ ವೃತ್ತಿಜೀವನದ ಮರೆಯಲಾರದ ಸಂಗತಿ ಎಂದು ನಟ ವಿಕ್ರಾಂತ್ ಮಾಸ್ಸೆ ಹೇಳಿದ್ದಾರೆ.ನಾವು ಹಲವಾರು ಬಾರಿ ಚಲನಚಿತ್ರವನ್ನು ವೀಕ್ಷಿಸಿದ್ದೇವೆ. ಆದರೆ ಇಂದು ನಾವು ಅದನ್ನು ಪ್ರಧಾನ ಮಂತ್ರಿಯೊಂದಿಗೆ ವೀಕ್ಷಿಸಲು ಅವಕಾಶ ಸಿಕ್ಕಿದ್ದು ಬಹಳ ವಿಶೇಷವಾಗಿದೆ. ಇದೊಂದು ಖುಷಿಯ ವಿಚಾರ. ಇದು ನನ್ನ ವೃತ್ತಿಜೀವನದ ಉನ್ನತ ಕ್ಷಣಗಳು. ಈ ಸಿನಿಮಾಗೆ ಅನೇಕ ರಾಜ್ಯಗಳಲ್ಲಿ ತೆರಿಗೆ ಮುಕ್ತಗೊಳಿಸಲಾಗಿದೆ. ಇನ್ನೂ ಹಲವು ರಾಜ್ಯಗಳು ಇದನ್ನು ತೆರಿಗೆ ಮುಕ್ತಗೊಳಿಸುವ ಚಿಂತನೆಯಲ್ಲಿವೆ ಎಂದು ಭಾವಿಸಿದ್ದೇನೆ. ಇದರಿಂದ ಮತ್ತಷ್ಟು ಜನ ಈ ಸಿನಿಮಾ ವೀಕ್ಷಿಸಲಿದ್ದಾರೆ ಎಂದು ಚಿತ್ರದ ನಟಿ ರಾಶಿ ಖನ್ನಾ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button