ಜಸ್ಟ್ 58 ರೂ.! 2GB ಡೇಟಾ.. 30 ದಿನ ವ್ಯಾಲಿಡಿಟಿ.. 100ಕ್ಕಿಂತ ಕಡಿಮೆಗೆ 5 ಹೊಸ BSNL ಪ್ಲಾನ್; ಲಿಸ್ಟ್ ಇಲ್ಲಿದೆ

(BSNL) ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. 100 ರೂ.ಗಿಂತ ಕಡಿಮೆ ಬೆಲೆಗೆ ಐದು ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಹೌದು, ಖಾಸಗಿ ಟೆಲಿಕಾಂ ಕಂಪನಿಗಳು ನಿರಂತರವಾಗಿ ತಮ್ಮ ಪ್ರಿಪೇಯ್ಡ್ ಯೋಜನೆಗಳ ದರ ಏರಿಕೆ ಮಾಡುತ್ತಿವೆ. ಇತ್ತ, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಅತ್ಯಂತ ಕಡಿಮೆ ದರದಲ್ಲಿ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ.
ಇದೀಗ, ಹೊಸ ಪ್ಲಾನ್ ಬಿಡುಗಡೆ ಮಾಡಿ ಗ್ರಾಹಕರನ್ನು ಸೆಳೆಯುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಬಿಎಸ್‌ಎನ್‌ಎಲ್ ಹಲವು ಅಗ್ಗದ ಯೋಜನೆಗಳನ್ನು ನೀಡುವ ಏಕೈಕ ಕಂಪನಿಯಾಗಿದೆ. ಪ್ರಸ್ತುತ, ಬಿಎಸ್‌ಎನ್‌ಎಲ್ ಕ್ರಮೇಣ 4G ಕಡೆಗೆ ಮುಖ ಮಾಡಿದೆ. ಹೀಗಾಗಿ, ಗ್ರಾಹಕರು ಹೆಚ್ಚು ವೇಗದ ಡೇಟಾ ಪ್ರಯೋಜನ ಪಡೆಯುತ್ತಿದ್ದಾರೆ. ನೀವು, 100 ರೂ.ಗಳ ಒಳಗೆ ಪ್ರಿಪೇಯ್ಡ್ ಯೋಜನೆಯನ್ನು ಹುಡುಕುತ್ತಿದ್ದರೆ, ಬಿಎಸ್‌ಎನ್‌ಎಲ್ 5 ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಆ 5 ಪ್ರಿಪೇಯ್ಡ್ ಯೋಜನೆಗಳು ಯಾವುವು? ಯಾವೆಲ್ಲಾ ಸೌಲಭ್ಯಗಳನ್ನು ಪಡೆಯಬಹುದು ಎನ್ನುವುದನ್ನು ತಿಳಿಯೋಣ ಬನ್ನಿ.

100 ರೂ.ಗೆ ಲಭ್ಯವಿರುವ 5 ಪ್ರಿಪೇಯ್ಡ್ ಯೋಜನೆಗಳು
58 ರೂ. ಪ್ರಿಪೇಯ್ಡ್ ಯೋಜನೆ
ಐದು ಪ್ರಿಪೇಯ್ಡ್ ಯೋಜನೆಗಳಲ್ಲಿ 58 ರೂ. ಪ್ಲನ್ ಒಂದಾಗಿದೆ. ಈ ಪ್ಲಾನ್‌ನಲ್ಲಿ ಪ್ರತಿದಿನ 2GB ಡೇಟಾ ಲಭ್ಯವಿದೆ. ಈ ಯೋಜನೆಯು 7 ದಿನಗಳ ವ್ಯಾಲಿಡಿಟಿ ಹೊಂದಿದೆ. ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳಿಗೆ 200 ನಿಮಿಷಗಳ ಕರೆ ಸೌಲಭ್ಯ ನೀಡಲಾಗಿದೆ. 2GB ಡೇಟಾ ಮಿತಿ ಮುಗಿದ ಬಳಿಕ, ಇಂಟರ್ನೆಟ್ 40kbps ವೇಗದಲ್ಲಿ ವರ್ಕ್ ಆಗುತ್ತದೆ.

87 ರೂ. ಪ್ರಿಪೇಯ್ಡ್ ಪ್ಲಾನ್
ಬಿಎಸ್‌ಎನ್‌ಎಲ್‌ನ 87 ರೂ. ಯೋಜನೆಯಲ್ಲಿ ಪ್ರತಿದಿನ 1GB ಡೇಟಾ ಸಿಗುತ್ತದೆ. ಇದರಲ್ಲಿ ಒಟ್ಟು 14GB ಡೇಟಾ ಲಭ್ಯವಿದೆ. ಈ ಪ್ಲಾನ್ 14 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಯೋಜನೆಯಲ್ಲಿ ಅನ್ಲಿಮಿಟೆಡ್ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳು ಲಭ್ಯವಿದೆ. ದೈನಂದಿನ ಡೇಟಾ ಮಿತಿ ಮುಗಿದ ಬಳಿಕ, ಇಂಟರ್ನೆಟ್ 40kbps ವೇಗದಲ್ಲಿ ವರ್ಕ್ ಆಗುತ್ತದೆ. ಈ ಯೋಜನೆಯಲ್ಲಿ ಹಾರ್ಡಿ ಮೊಬೈಲ್ ಗೇಮ್ಸ್ ಸೇವೆ ಲಭ್ಯವಿದೆ.
94 ರೂ. ಪ್ರಿಪೇಯ್ಡ್ ಯೋಜನೆ
ಬಿಎಸ್‌ಎನ್‌ಎಲ್‌ನ 94 ರೂ. ಯೋಜನೆಯಲ್ಲಿ 3GB ಡೇಟಾ ಲಭ್ಯವಿದೆ. ಈ ಪ್ಲಾನ್ 30 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದೆ. ಯೋಜನೆಯಲ್ಲಿ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳಿಗೆ 200 ನಿಮಿಷಗಳ ಕರೆ ಸೌಲಭ್ಯ ನೀಡಲಾಗುತ್ತದೆ.
97 ರೂ. ಪ್ರಿಪೇಯ್ಡ್ ಪ್ಲಾನ್ಬಿಎಸ್‌ಎನ್‌ಎಲ್‌ನ 97 ರೂ. ಪ್ಲಾನ್‌ನಲ್ಲಿ ಪ್ರತಿದಿನ 2GB ಡೇಟಾ ಸಿಗುತ್ತದೆ. ಇದರಲ್ಲಿ ಒಟ್ಟು 30GB ಡೇಟಾ ಬರುತ್ತದೆ. ಈ ಪ್ಲಾನ್ 15 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಯೋಜನೆಯಲ್ಲಿ ಅನ್ಲಿಮಿಟೆಡ್ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ಕರೆಗಳನ್ನು ಒಳಗೊಂಡಿದೆ. ದೈನಂದಿನ ಡೇಟಾ ಮಿತಿ ಮುಗಿದ ಬಳಿಕ, ಇಂಟರ್ನೆಟ್ 40kbps ವೇಗದಲ್ಲಿ ವರ್ಕ್ ಆಗುತ್ತದೆ. ಈ ಯೋಜನೆ ದೆಹಲಿ ಮತ್ತು ಮುಂಬೈ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ.98 ರೂ. ಪ್ರಿಪೇಯ್ಡ್ ಯೋಜನೆಬಿಎಸ್‌ಎನ್‌ಎಲ್‌ನ 98 ರೂ. ಯೋಜನೆಯಲ್ಲಿ ದಿನಕ್ಕೆ 2GB ಡೇಟಾ ಲಭ್ಯವಿದೆ. ಈ ಪ್ಲಾನ್ 18 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆ ಸೌಲಭ್ಯ ನೀಡಲಾಗುತ್ತದೆ. ದೈನಂದಿನ ಡೇಟಾ ಮಿತಿ ಮುಗಿದ ಬಳಿಕ, ಇಂಟರ್ನೆಟ್ 40kbps ವೇಗದಲ್ಲಿ ವರ್ಕ ಆಗುತ್ತೆ.