ಇತ್ತೀಚಿನ ಸುದ್ದಿ

ಸಾವಕನಹಳ್ಳಿ ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಹಾಗೂ ನಿರ್ಗಮನ ಕಲ್ಪಿಸುವಂತೆ ಅಗ್ರಹ

ಸಾವಕನಹಳ್ಳಿ ಹಾಗೂ ಬಿದಲೂರು ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ

ದೇವನಹಳ್ಳಿ : ತಾಲೂಕಿನ ಸಾವಕನಹಳ್ಳಿ ಗ್ರಾಮದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 207ಕ್ಕೆ ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ಸಂಪರ್ಕ ಹಾಗೂ ನಿರ್ಗಮನ ವ್ಯವಸ್ಥೆ ಕಲ್ಪಿಸಬೇಕು ಮತ್ತು ಹೆದ್ದಾರಿಯಿಂದ ಮುಚ್ಚಿರುವ ರಾಜಕಾಲುವೆಯನ್ನು ಅಭಿವೃದ್ಧಿ ಪಡಿಸಿ ಮಳೆ ನೀರು ಕೆರೆಗೆ ಸೇರುವಂತೆ ಮಾಡಬೇಕು ಎಂದು ಬಿದಲೂರು ಗ್ರಾಮಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಸ್.ಪಿ.ಮುನಿರಾಜು ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಸಾವಕನಹಳ್ಳಿ ರಾಷ್ಟ್ರೀಯ ಹೆದ್ದಾರಿ ವೀಕ್ಷಣೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಆಗಮಿಸಿದ ಸಮಯದಲ್ಲಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ಸಾವಕನಹಳ್ಳಿ ಗ್ರಾಮದಲ್ಲಿ ಹೆದ್ದಾರಿ ಹಾದು ಹೋಗಿವುರುದರಿಂದ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಸ್ಥಳಿಯ ರೈತರ ಸಮಸ್ಯೆಯನ್ನು ಆಲಿಸಬೇಕು., ಹೆದ್ದಾರಿಗಾಗಿ ರಾಜಕಾಲುವೆಯನ್ನು ಮುಚ್ಚಿದ್ದಾರೆ ಇದರಿಂದ ಅನೇಕ ರೈತರ ಜಮೀನುಗಳಿಗೆ ಮಳೆ ನೀರು ನುಗ್ಗಿ ಬೆಳೆ ಹಾನಿಯಾಗುತ್ತಿದೆ. ಇದರ ಬಗ್ಗೆ ಈಗಾಗಲೇ ಸಚಿವರು, ಜಿಲ್ಲಾಧಿಕಾರಿಗಳು, ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದವರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶಿವಶಂಕರ್ ಮನವಿ ಸ್ವೀಕರಿಸಿ ಮಾತನಾಡಿ ಗ್ರಾಮಾಂತರ ಜಿಲ್ಲೆಯಲ್ಲಿ ಎಸ್.ಟಿ.ಆರ್.ಆರ್ ಕಾಮಗಾರಿ ದಾಬಸ್‌ಪೇಟೆಯಿಂದ ಹೊಸಕೋಟೆವರೆಗೆ 80 ಕಿ.ಮೀ ವ್ಯಾಪ್ತಿಯಲ್ಲಿ ಕಾಮಗಾರಿ ಮುಗಿದಿದ್ದು ಲೋಕಾರ್ಪಣೆಯಾಗಿದೆ. ಕೆಲ ಬಾಗಗಳಲ್ಲಿ ಅಪಘಾತಗಳು ಸಂಬವಿಸುತ್ತಿವೆ. ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ, ಸೇರಿದಂತೆ ಎಲ್ಲಾ ಅಧಿಕಾರಿಗಳ ಜೊತೆಗೂಡಿ ಹೊಸಕೋಟೆಯಿಂದ ದಾಬಸಪೇಟೆವರೆಗೆ ಅಪಘಾತಗಳಾಗುವ ಸ್ಥಳಗಳನ್ನು ಸಮೀಕ್ಷೆ ಮಾಡುತ್ತಿದ್ದೇವೆ. ಎಲ್ಲಿ ಅಪಘಾತಗಳಾಗುತ್ತಿವೆ ಅದನ್ನು ತಡೆಗಟ್ಟುವ ಬಗ್ಗೆ ಚರ್ಚಿಸುತ್ತಿದ್ದೇವೆ. ಕೆಲ ಗ್ರಾಮಗಳ ಬಳಿ ಹೆದ್ದಾರಿಗೆ ಸಂಪರ್ಕ ಹಾಗೂ ನಿರ್ಗಮನ ಸಮಸ್ಯೆಯಿದ್ದು 80 ಕಿ.ಮೀ ಪೂರ್ತಿ ಪರಿಶೀಲನೆ ಮಾಡುತ್ತಿದ್ದೇವೆ. ವಾಹನಗಳ ವೇಗಮಿತಿ ಕಡಿಮೆ ಮಾಡಲಿಕ್ಕೆ ಬೇಕಾದ ಪಿ.ಎನ್.ಆರ್.ಐ ಕ್ಯಾಮಗಳನ್ನು ಅಳವಡಿಸಿದರೆ ವಾಹನಗಳು ವೇಗವಾಗಿ ಚಲಿಸಿದರೆ ವಾಹನಗಳಿಗೆ ದಂಡ ಬೀಳಲಿದೆ. ಕ್ಯಾಮರ ಅಳವಡಿಸಲು ಈಗಾಗಲೇ ಟೆಂಡರ್ ಮುಗಿದೆ. ಸಾವಕನಹಳ್ಳಿಗೆ ತೆರಳಲು ಸುತ್ತಿಕೊಂಡು ಹೆದ್ದಾರಿಗೆ ಬರಬೇಕೆಂದು ಗ್ರಾಮಸ್ಥರು ತಿಳಿಸುತ್ತಿದ್ದಾರೆ. ಎಲ್ಲಾ ಸಮಸ್ಯೆಗಳನ್ನು ಪರಿಶೀಲನೆ ಮಾಡಿ ರೋಡ್ ಸೇಪ್ಟಿ ಕಮಿಟಿ ಅವರಿಗೆ ರೆಕಮಂಡ್ ಮಾಡುತ್ತೇವೆ. ಅವರು ಬಂದು ಸ್ಥಳ ಪರಿಶೀಲನೆ ಮಾಡಲಿದ್ದಾರೆ. ರಸ್ತೆ ದಾಟುವಾಗಿ ಬಹಳಷ್ಟು ಅಪಘಾತಗಳು ಸಂಭವಿಸುತ್ತಿವೆ. 80ಕಿ.ಮೀ ವ್ಯಾಪ್ತಿಯಲ್ಲಿ 18 ಕಡೆ ಪುಟ್ ಓವರ್ ಬ್ರಿಡ್ಜ್ ಮಾಡಲಿಕ್ಕೆ ಈಗಾಗಲೇ ಟೆಂಡರ್ ಆಗಿದೆ. ಜನವರಿ ಅಂತ್ಯಕ್ಕೆ ಕಾಮಗಾರಿ ಪ್ರಾರಂಭವಾಗಲಿದೆ. ಮೊದಲು ವೇಗ ಮಿತಿ ಕಡಿಮೆ ಮಾಡಲಿಕ್ಕೆ ಬೇಕಾದ ಕ್ರಮ ಹಾಗೂ ರಸ್ತೆ ದಾಟಲು ಬ್ರಿಡ್ಜ್ಗಳ ನಿರ್ಮಾಣ ಮಾಡಿದರೆ ಅಪಘಾತಗಳನ್ನು ತಪ್ಪಿಸಬಹುದು, ಎಲ್ಲಾ ಕಾಮಗಾರಿಗಳು ಏಪ್ರಿಲ್ ತಿಂಗಳಲ್ಲಿ ಮುಗಿಯಲಿದೆ ಎಂದರು.

ಇದೆ ವೇಳೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಯಕುಮಾರ್, ಪುರಸಭಾ ಸದಸ್ಯ ನಾಗೇಶ್, ಬಿದಲೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಿದ್ದರಾಜು, ಮುಖಂಡರಾದ ಕೋಡಿಮಂಚೇನಹಳ್ಳಿ ರಮೇಶ್, ಉಮೇಶ್ ವಿವಿಧ ಇಲಾಖೆಯ ಅಧಿಕಾರಿಗಳು ಸಾವಕನಹಳ್ಳಿ ಗ್ರಾಪಂ ಅಧ್ಯಕ್ಷರು,ಸದಸ್ಯರು ಗ್ರಾಮಸ್ಥರು ರೈತರು ಇದ್ದರು

Related Articles

Leave a Reply

Your email address will not be published. Required fields are marked *

Back to top button