ಇತ್ತೀಚಿನ ಸುದ್ದಿ

ಶ್ರೀ ಭುವನೇಶ್ವರಿ ಆಟೋ ಮಾಲೀಕರು ಚಾಲಕರ ಸಂಘದಿಂದ 26ನೇ ವರ್ಷದ ಕನ್ನಡ ರಾಜ್ಯೋತ್ಸವ ಶ್ಲಾಘನೀಯ: ಕೆ.ಎಚ್.ಮುನಿಯಪ್ಪ

ದೇವನಹಳ್ಳಿ : ಪಟ್ಟಣದ ಹಳೇಬಸ್ ನಿಲ್ದಾಣದಲ್ಲಿ ಜೈ ಶ್ರೀ ಭುವನೇಶ್ವರಿ ಆಟೋ ಮಾಲೀಕರು ಹಾಗೂ ಚಾಲಕರ ಸಂಘದಿಂದ 26ನೇ ವರ್ಷದ ಕನ್ನಡ ರಾಜ್ಯೋತ್ಸವ ಏರ್ಪಡಿಸಲಾಗಿತ್ತು ಹಾಗೂ ಪ್ರತಿಯೊಂದು ಆಟೋಗಳಿಗೂ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.
ಈ ಸಮಯದಲ್ಲಿ ಧ್ವಜಾರೋಹಣ ನೆರವೇರಿಸಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದ ಮಾಜಿ ಸಚಿವ ಕೆಎಚ್. ಮುನಿಯಪ್ಪ ಮಾತನಾಡಿ ಆಟೋ ಚಾಲಕರು ಕಷ್ಠಪಟ್ಟು ದುಡಿಮೆ ಮಾಡುತ್ತಾರೆ, ನಮ್ಮ ನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಯಾರಾದರೂ ಫಲಾಪೇಕ್ಷೆ ಇಲ್ಲದೇ ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ ಎಂದರೆ ಅವರು ಆಟೋ ಚಾಲಕರು, ತಮ್ಮ ಆಟೋಗಳಲ್ಲಿ ಕನ್ನಡವನ್ನು ನೆನಪಿಸುವ ಚಿತ್ರಗಳನ್ನು ಹಾಕಿ ಕನ್ನಡತನವನ್ನು ಮೆರೆಯುವಂತೆ ಮಾಡುತ್ತಾರೆ ನಿರಂತರವಾಗಿ 26 ವರ್ಷಗಳಿಂದಲೂ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಾ ಬಂದಿರುವುದು ಶ್ಲಾಘನೀಯ, ಆಟೋ ಮಾಲಿಕರು ಚಾಲಕರ ಸಂಘದಿಂದ ಬಡಜನರಿಗೆ ಹಾಗು ಅಂಗವಿಕಲರಿಗೆ ವೃದ್ಧರಿಗೆ ಬಟ್ಟೆ, ರಗ್ಗು, ಶಾಲಾ ಮಕ್ಕಳಿಗೆ ಪುಸ್ತಕ, ಅನ್ನಸಂತರ್ಪಣೆ ಹಾಗೂ ಅವರಿಗೆ ಅನುಕೂಲವಾಗುವ ವಸ್ತುಗಳನ್ನು ನೀಡುತ್ತಾ ಬಂದಿದ್ದಾರೆ ನಾವು ಸಹ ನಿಮ್ಮೊಂದಿಗೆ ಇರುತ್ತೆವೆ ಸರ್ಕಾರದಿಂದ ನಿಮಗೆ ಸಿಗಬೆಕಾದ ಸೌಲಭ್ಯ ಹಾಗೂ ನಿಮ್ಮ ಬೇಡಿಕೆಗಳಿದ್ದರೆ ತಿಳಿಸಿ ನಾನು ಅದನ್ನು ಮಾಡಿಕೊಡುತ್ತೆನೆ ಎಂದರು.

ಸಂಘದ ಅಧ್ಯಕ್ಷ ಎನ್.ಕೃಷ್ಣಮೂರ್ತಿ ಮಾತನಾಡಿ ನಮ್ಮ ನಾಡಿಗೆ ಕರ್ನಾಟಕ ಎಂದು ಹೆಸರು ಬಂದು 50 ವರ್ಷ ತುಂಬಿದ್ದು ಕನ್ನಡಿಗರಾದ ನಾವೆಲ್ಲಾ ಹೆಮ್ಮೆ ಪಡಬೇಕು, ನಮ್ಮ ಜನ ಇಂಗ್ಲೀಷ್ ವ್ಯಾಮೋಹವನ್ನು ಬಿಟ್ಟು ಕನ್ನಡ ಕಲಿಯಬೇಕು, ಬೇರೆ ರಾಜ್ಯಗಳಿಗೆ ಹೋದರೆ ಅವರು ತಮ್ಮ ಬಾಷೆಯಲ್ಲಿಯೇ ಉತ್ತರ ನೀಡುತ್ತಾರೆ ನಮ್ಮ ಕನ್ನಡ ಜನ ಬೇರೆ ರಾಜ್ಯದವರ ಭಾಷೆ ಮಾತನಾಡುತ್ತಾರೆ ಅದನ್ನು ಬಿಟ್ಟು ಕನ್ನಡದಲ್ಲಿಯೇ ಅವರಿಗೆ ಉತ್ತರ ನೀಡಿ ಕನ್ನಡ ಕಲಿಸುವಂತಾಗಬೇಕು, ಕನ್ನಡದಲ್ಲಿ ವ್ಯವಹರಿಸಿ ನಾಡಿನ ಪರಂಪರೆಯನ್ನು ಉಳಿಸಿ ಬೆಳೆಸಿ ಎಂದರು.

ಮುಖಂಡರುಗಳಾದ ಈ ವೇಳೆ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಬಿಜೆಪಿಮುಖಂಡ ಓಬದೇನಹಳ್ಳಿ ಮುನಿಯಪ್ಪ, ತಾಲೂಕು ಗ್ಯಾರಂಟಿ ಯೋಜನೆಗಳ ಅದ್ಯಕ್ಷ ಸಿ.ಜಗನ್ನಾಥ್, ಪುರಸಭಾ ಸದಸ್ಯರಾದ ಜಿ.ಎ.ರವೀಂದ್ರ, ವೇಣುಗೋಪಾಲ್ , ಎಸ್.ಸಿ ಚಂದ್ರಪ್ಪ, ಎ.ಚಿನ್ನಪ್ಪ, ಶ್ರೀಧರಮೂರ್ತಿ, ಮಾಜಿ ಸದಸ್ಯ ನಿಲೇರಿ ನಾರಾಯಣಸ್ವಾಮಿ, ಕೆ.ವೆಂಕಟೇಶ್, ಬೇಕರಿ ಮಂಜುನಾಥ್, ಶಿಕ್ಷಕ ಪುಟ್ಟಸ್ವಾಮಿ, ಸಂಘದ ಗೌ||ಅಧ್ಯಕ್ಷ ಬಿ.ದೇವರಾಜು, ಸೈಕಲ್ ರೇಸ್ ರವಿಕುಮಾರ್, ಅಧ್ಯಕ್ಷ ಕೃಷ್ಣಮೂರ್ತಿ ಉಪಾಧ್ಯಕ್ಷರಾದ ಎಲ್. ನಾಗೇಂದ್ರರಾವ್ ಶಿವಶಂಕರಪ್ಪ, ಮುನಿಯಲ್ಲಪ್ಪ, ಪ್ರ.ಕಾರ್ಯದರ್ಶಿ ಮುನಿಕೃಷ್ಣ, ಸಹಕಾರ್ಯದರ್ಶಿ ಕೆ. ವೇಣು, ಖಜಾಂಚಿ ಸೋಮಶೇಖರ್, ಸಂ.ಕಾರ್ಯದರ್ಶಿ ಎನ್. ಮುರಳಿ, ಸದಸ್ಯರಾದ ಮುನಿಯಪ್ಪ, ಗಂಗಾಧರ್,ಸಿ, ಹನುಮಂತಪ್ಪ, ಎನ್.ಮಂಜುನಾಥ್, ಎಂ. ನಾರಾಯಣಸ್ವಾಮಿ, ಎನ್. ನರಸಿಂಹಮೂರ್ತಿ , ಎನ್.ನಾಗೇಶಬಾಬು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related Articles

Leave a Reply

Your email address will not be published. Required fields are marked *

Back to top button