
ಹೊಸಕೋಟೆ : ಸುಮಾರು 20 ಲಕ್ಷಕ್ಕೂ ಅಧಿಕ ಮೊತ್ತದ ಕಾರ್ಮಿಕ ಇಲಾಖೆಗೆ ಸಂಭಂದಿಸಿದ ಕಿಟ್ ಹೊಸಕೋಟೆ ತಾಲ್ಲೂಕಿನ ಕಾರ್ಮಿಕರಿಗೆ ವಿತರಣೆ ಮಾಡಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದ್ದಾರೆ.
ಹೊಸಕೋಟೆ ತಾಲ್ಲೂಕಿನ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕಿನಾ ಎಲ್ಲಾ ಕಟ್ಟಡ ಕಾರ್ಮಿಕರ ಸಹಯೋಗದೊಂದಿಗೆ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆರ್ ಪಿ ಎಲ್ ಕಿಟ್ ವಿತರಣೆ ಹಾಗೂ ಜೈ ಮಹಾನಾಯಕ ಕಟ್ಟಡ ಕಾರ್ಮಿಕರ ಕ್ಷೇಮಭಿವೃದ್ಧಿ ಸಂಘದ ಕಛೇರಿ ಹಾಗೂ ನೂತನ ಘಟಕ ಉದ್ಘಾಟನೆ ಮಾಡಿ ನಂತರ ಮಾತನಾಡಿದ ಅವರು,
ಕಾರ್ಮಿಕ ಇಲಾಖೆವತಿಯಿಂದ ಈಗಾಗಲೇ ಅನೇಕ ರೀತಿಯಲ್ಲಿ ಕಿಟ್ ವಿತರಣೆ ಮಾಡಿ ಅನುಕೂಲ ಕಲ್ಪಿಸುತ್ತಿದ್ದಾರೆ ಅದರಂತೆ ನಮ್ಮ ತಾಲೂಕಿಗೆ ಸಹ ಹೆಚ್ಚಿನ ಸೌಲಭ್ಯ ಕಲ್ಪಿಸಿದ್ದು. ವೆಲ್ಡಿಂಗ್ ಕಿಟ್ ಅತೀ ಹೆಚ್ಚು ಪಡೆದ ಕೀರ್ತಿ ನಮಗಿದೆ. ಇನ್ನೂ ಕಾರ್ಮಿಕರಿಗೆ ದೊರೆಯುವ ಸರಕಾರದ ಸೌಲಭ್ಯ ಅರ್ಹರಿಗೆ ತಲುಪಿಸುವಲ್ಲಿ ಶ್ರಮವಹಿಸಬೇಕು ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಜೈ ಮಹಾನಾಯಕ ಕಟ್ಟಡ ಕಾರ್ಮಿಕರ ಕ್ಷೇಮಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ವೆಂಕಟೇಶ್ ಮಾತನಾಡಿ, ಕೂಲಿ ಕೆಲಸ ಮಾಡಿ ಕಾರ್ಮಿಕ ಇಲಾಖೆಯಿಂದ ಕಾರ್ಡ್ ಪಡೆದು ಸೌಲಭ್ಯ ಪಡೆಯುವ ಪಲಾನುಭವಿಗಳಿಗೆ ವಂಚನೆ ನಡೆಯುತ್ತಿದ್ದು ಅರ್ಹರಿಗೆ ಸೌಲಭ್ಯ ದೊರೆಯುತ್ತಿಲ್ಲ ಮದ್ಯವರ್ತಿಗಳ ಅವಳಿಯಿಂದ ಬೋಗಸ್ ಕಾರ್ಡ್ ಸೃಷ್ಟಿಯಾಗಿದೆ ಈ ನಿಟ್ಟಿನಲ್ಲಿ ನಮ್ಮ ನೂತನ ಸಂಘ ಪ್ರಾರಂಭಿಸಿದ್ದು ಇದರಿಂದ ಉಚಿತ ಕಾರ್ಡ್ ಮಾಡಿಸಿ ಅರ್ಹರಿಗೆ ಸೌಲಭ್ಯ ಕಲ್ಪಿಸುತ್ತೇವೆ ಎಂದರು.