ಇತ್ತೀಚಿನ ಸುದ್ದಿ

ಡಿ.5 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಸಿ ಸ್ವಾಭಿಮಾನಿ ಸಮಾವೇಶ

ಚಾಮರಾಜನಗರ,ನ.28: ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಬೆಂಬಲಿಸಿ ಹಾಸನದಲ್ಲಿ ನಡೆಯುವ ಸ್ವಾಭಿಮಾನಿ ಸಮಾವೇಶಕ್ಕೆ ಚಾಮರಾಜನಗರ ತಾಲೂಕು ಕುರುಬರ ಸಂಘದ ಕಚೇರಿಯ ಆವರಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಕುರುಬರ ಸಂಘದ ಮಾಜಿ ರಾಜ್ಯಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಧೀರ್ಘವಾಗಿ 45 ವರ್ಷಗಳ ಕಾಲ ನಿಷ್ಕಳಂಕ ವ್ಯಕ್ತಿಯಾಗಿ ಆಡಳಿತ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲ ರಾಜಕೀಯ ದುಷ್ಟ ಶಕ್ತಿಗಳು ಸಾಮಾನ್ಯ ವರ್ಗದವರನ್ನು ಹಿಂದಿಕ್ಕಲು ಷಡ್ಯಂತರ ನಡೆಸುತ್ತಿವೆ ಆದ್ದರಿಂದ ಸ್ವಾಭಿಮಾನಿ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಬೆಂಬಲ ಸೂಚಿಸಲು ಹಾಸನದಲ್ಲಿ ನಡೆಯುವ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ನಂಜೇಗೌಡ,ಉಪಾಧ್ಯಕ್ಷ ನಟರಾಜು, ಚಾಮರಾಜನಗರ ತಾಲೂಕು ಕುರುಬರ ಸಂಘದ ಅಧ್ಯಕ್ಷ ಉಮೇಶ್, ಸಿದ್ದರಾಮಯ್ಯ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷರು ಹಾಗೂ ಚಾಮರಾಜನಗರ ತಾಲೂಕು ಕುರುಬರ ಸಂಘದ ಗೌರವ ಅಧ್ಯಕ್ಷ ಬೆಳ್ಳೇಗೌಡ, ಕುರುಬರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಲಿಂಗೇಗೌಡ, ರಾಷ್ಟ್ರೀಯ ಅಹಿಂದ ಸಂಘಟನೆಯ ಜಿಲ್ಲಾ ಅಧ್ಯಕ್ಷ ಕೆರೆಹಳ್ಳಿ ಕೆ.ಎಸ್.ರೇವಣ್ಣ, ಸ್ವತ್ತನಹುಂಡಿ ಸೋಮಣ್ಣ, ಸಿದ್ದರಾಮಯ್ಯ ಅಭಿಮಾನಿ ಬಳಗದ ವಿ.ಸಿ.ಬಸವಣ್ಣ, ಗೌಡಹಳ್ಳಿಕೊಂಡೇಗೌಡ,ಯಳಂದೂರು ಮಲ್ಲು, ಹಾಲುಮತ ಸಭಾದ ವೆಂಕಟೇಶ್ ಮೂರ್ತಿ, ವಕೀಲ ಕಿಳಲೀಪುರ ಮಹೇಶ್, ಎಸ್‌.ಮಹೇಶ್, ಎಲ್. ಸುರೇಶ್,ನರೇಂದ್ರ, ಬೀರೇಶ್ ಜಾಲಹಳ್ಳಿ ಹುಂಡಿ, ಕೊಳ್ಳೇಗಾಲ ಚಿಕ್ಕಬಸವಯ್ಯ, ಸೋಮಣ್ಣ, ನಂಜುಂಡೇಗೌಡ, ಮಹೇಶ್ ಹಳೇಪುರ, ಗೌಡಹಳ್ಳಿ ಸುನಿಲ್, ಬಸವಣ್ಣ‌ಪಿ,ಸ್ವಾಮಿ ಮಸಗಾಪುರ ಚೆನ್ನೇಗೌಡ, ಮಹದೇವಸ್ವಾಮಿ ಇದ್ದರು.


ವರದಿ:ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ

Related Articles

Leave a Reply

Your email address will not be published. Required fields are marked *

Back to top button