ಕ್ರೈಂ

5,900 ಕೋಟಿ ರೂ. ಮೌಲ್ಯದ ಬಿಟ್‌ ಕಾಯಿನ್ ನಾಪತ್ತೆ; ಮಾಜಿ ಗೆಳೆಯನಿಗಾಗಿ ಮರುಗಿದ ಮಹಿಳೆ ಜೀವ..!

ಮಹಿಳೆಯೊಬ್ಬಳು ತನ್ನ ಮಾಜಿ ಗೆಳೆಯನ ಬಿಟ್‌ಕಾಯಿನ್ ಸಂಪತ್ತಿನ ಕೀಲಿಯನ್ನು ಹೊಂದಿರುವ ಹಾರ್ಡ್ ಡ್ರೈವ್ ಅನ್ನು ಆಕಸ್ಮಿಕವಾಗಿ ಕಳೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಈಗ ಇದರ ಮೌಲ್ಯ ಬರೋಬ್ಬರಿ 5,900 ಕೋಟಿ (£569 ಮಿಲಿಯನ್) ರೂಪಾಯಿ.

ಹಾವೆಲ್ಸ್‌ ಎಂಬಾತನ ಇಬ್ಬರು ಹದಿಹರೆಯದ ಪುತ್ರರ ತಾಯಿಯಾದ ಹಾಲ್ಫಿನಾ ಎಡ್ಡಿ-ಇವಾನ್ಸ್, ‘ಸುಮಾರು ಒಂದು ದಶಕದ ಹಿಂದೆ ವೇಲ್ಸ್‌ನ ನ್ಯೂಪೋರ್ಟ್‌ನಲ್ಲಿರುವ ಲ್ಯಾಂಡ್‌ಫಿಲ್‌ಗೆ ಹಾರ್ಡ್ ಡ್ರೈವ್ ಅನ್ನು ತೆಗೆದುಕೊಂಡು ಹೋಗಿದ್ದೆ ಒಳಗೆ ಏನಿದೆ ಎಂದು ನನಗೆ ತಿಳಿದಿರಲಿಲ್ಲ, ಆಕಸ್ಮಿಕವಾಗಿ ನಾನು ಅದನ್ನು ಕಳೆದುಕೊಂಡಿರುವುದು ನನ್ನ ತಪ್ಪಲ್ಲ.’ ಎಂದಿದ್ದಾರೆ.

ಹಾವೆಲ್ಸ್ 2009 ರಲ್ಲಿ 8,000 ಬಿಟ್‌ಕಾಯಿನ್‌ಗಳನ್ನು ತೆಗೆದುಕೊಂಡಿದ್ದು, ಬಳಿಕ ಆ ವಿಷಯವನ್ನೇ ಮರೆತಿದ್ದರು. ಅವರ ಕ್ರಿಪ್ಟೋಕರೆನ್ಸಿ ಡಿಜಿಟಲ್ ಕೀಯನ್ನು ಹೊಂದಿರುವ ಹಾರ್ಡ್ ಡ್ರೈವ್ ಅನ್ನು ಸ್ವಚ್ಛಗೊಳಿಸುವ ಸಮಯದಲ್ಲಿ ಹಾಳಾಗಿದ್ದು, ಅದನ್ನು ಹಾಲ್ಫಿನಾ ಎಸೆದಿದ್ದರು. ಈಗ ನ್ಯೂಪೋರ್ಟ್ ಲ್ಯಾಂಡ್‌ಫಿಲ್‌ನಲ್ಲಿ 100,000 ಟನ್‌ಗಳಷ್ಟು ತ್ಯಾಜ್ಯವಿದೆ.

ಹೋವೆಲ್ಸ್, ನ್ಯೂಪೋರ್ಟ್ ಸಿಟಿ ಕೌನ್ಸಿಲ್‌ಗೆ ₹ 4,900 ಕೋಟಿ (£ 495 ಮಿಲಿಯನ್) ಗಾಗಿ ಮೊಕದ್ದಮೆ ಹೂಡುತ್ತಿದ್ದು, ಅವರು ಆ ಸ್ಥಳ ಪ್ರವೇಶಿಸಲು ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಹಾರ್ಡ್ ಡ್ರೈವ್ ಮರಳಿ ಪಡೆಯುವವರೆಗೂ ವಿರಮಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ನ್ಯೂಪೋರ್ಟ್ ಸಿಟಿ ಕೌನ್ಸಿಲ್‌, ಪರಿಸರ ಕಾಳಜಿ ಮತ್ತು ಅಸ್ತಿತ್ವದಲ್ಲಿರುವ ಪರವಾನಗಿಗಳ ಅಡಿಯಲ್ಲಿ ಉತ್ಖನನ ಮಾಡಲು ಬಿಡುತ್ತಿಲ್ಲ, ಅಲ್ಲದೇ ಅವರ ವಿನಂತಿಗಳನ್ನು ಸತತವಾಗಿ ನಿರಾಕರಿಸಿದೆ.

ಹಾವೆಲ್ಸ್‌ನ ಈ ಸ್ಥಿತಿಗೆ ಮರುಗಿರುವ ಮಾಜಿ ಪತ್ನಿ ಎಡ್ಡಿ-ಇವಾನ್ಸ್, “ಅವನು ಅದನ್ನು ಹುಡುಕುತ್ತಾನೆ ಎಂದು ನಾನು ಭಾವಿಸುತ್ತೇನೆ, ಅದರಲ್ಲಿ ನನಗೆ ಒಂದೇ ಒಂದು ಪೈಸೆ ಬೇಡ” ಎಂದಿದ್ದಾರೆ.

ಹಾರ್ಡ್ ಡ್ರೈವ್ ಅನ್ನು ಹಿಂಪಡೆಯುವಲ್ಲಿ ಯಶಸ್ವಿಯಾದರೆ ನ್ಯೂಪೋರ್ಟ್ ಅನ್ನು “ದುಬೈ ಅಥವಾ ಲಾಸ್ ವೇಗಾಸ್” ಆಗಿ ಪರಿವರ್ತಿಸಲು 10% ಹಣ ದಾನ ಮಾಡಲು ಹೋವೆಲ್ಸ್ ವಾಗ್ದಾನ ಮಾಡಿದ್ದಾರೆ. ಸದ್ಯಕ್ಕೆ ಅವರ ಕಾನೂನು ಹೋರಾಟ ಮುಂದುವರಿದಿದ್ದು, ಡಿಸೆಂಬರ್ ಆರಂಭಕ್ಕೆ ವಿಚಾರಣೆ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button