ಸಂವಿಧಾನ ಸಮರ್ಪಣ ದಿನದ ಅಂಗವಾಗಿ ಸಂವಿಧಾನ ಆಶಯಗಳು ಮತ್ತು ಸಮಸಮಾಜದ ಕನಸುಗಳು ವಿಚಾರ ಸಂಕಿರಣ ಉದ್ಘಾಟಿಸಿದ ಶಾಸಕ ದರ್ಶನ್ ಧ್ರುವನಾರಾಯಣ್

ನಂಜನಗೂಡು: ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ನಂಜನಗೂಡು ತಾಲ್ಲೂಕು ಘಟಕದ ವತಿಯಿಂದ ಯ ಏರ್ಪಡಿಸಲಾಗಿದ್ದ ಸಂವಿಧಾನ ಸಮರ್ಪಣ ದಿನದ ಅಂಗವಾಗಿ ‘ಸಂವಿಧಾನದ ಆಶಯಗಳು ಮತ್ತು ಸಮ ಸಮಾಜದ ಕನಸುಗಳು’ ವಿಚಾರ ಸಂಕಿರಣವನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನದ ಪಿಠೀಕೆ ಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಭಾರತದ ಸಂವಿಧಾನವನ್ನು ರಚಿಸಿ ದೇಶಕ್ಕೆ ಸಮರ್ಪಣೆ ಮಾಡಿದ ದಿನವಾಗಿದೆ. ಹಾಗಾಗಿ ಈ ದಿನ ಭಾರತೀಯರಾದ ನಮ್ಮೆಲ್ಲರ ಜನ್ಮದಿನವಾಗಿದೆ. ವಿಭಿನ್ನತೆಯಲ್ಲಿ ಏಕತೆಯನ್ನು ಸಾಧಿಸುವ ಸಂವಿಧಾನ ನೀಡಿದ ಹೆಗ್ಗಳಿಕೆ ನಮ್ಮ ಅಂಬೇಡ್ಕರರದ್ದಾಗಿದೆ ಎಂದರು. ನಾನು ಶಾಸಕನಾಗಲು, ಸಿದ್ದರಾಮಯ್ಯ ನವರು ಮುಖ್ಯಮಂತ್ರಿಗಳಾಗಲುಮೋದಿ ಪ್ರಧಾನಿಯಾಗಲು ಸಂವಿಧಾನವೇ ಕಾರಣ ಎಂಬುದನ್ನು ನಾವೆಲ್ಲರೂ ನೆನಪಿಡಲೇ ಬೇಕು. ಇಂತಹ ಸಂವಿಧಾನ ವನ್ನು ನಾವೆಲ್ಲ ಉಳಿಸಿಕೊಳ್ಳಬೇಕು ಎಂದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ, ಅಂಬೇಡ್ಕರ್ ತಮ್ಮ ಜೀವನಲ್ಲಿ ನಡೆಸಿದ ಹೋರಾಟದ ಪ್ರತಿಫಲವೇ ಸಂವಿಧಾನವಾಗಿದೆ ಎಂದರು. ಸಂವಿಧಾನ ಬದಲಾಯಿಸಿ ಎನ್ನುವರನ್ನು ರಾಷ್ಟ್ರದ್ರೋಹಿಗಳು ಕರೆಯಬೇಕಾಗುತ್ತದೆ. ಹಿಂದೂಗಳ ಪರವಿರುವ ಪಕ್ಷವನ್ನು ಬೆಂಬಲಿಸಿ ಎಂದ ಉಡುಪಿಯಮಠಾಧೀಶರ ಹೇಳಿಕೆಯನ್ನು ಖಂಡಿಸಿದರು. ಮಠಾಧೀಶರೇ ನೀವು ಮೊದಲು ಹಿಂದೂ ಧರ್ಮದೊಳಗಿನ ನ್ಯೂನತೆಗಳನ್ನು ಸರಿಪಡಿಸಿ ನಂತರ ಮಾತನಾಡಿ ಎಂದರು.
ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಸುರೇಶ ಶಂಕರಪುರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ದಸಂಸ ಜಿಲ್ಲಾ ಸಂಚಾಲಕ ಮಲ್ಲೇಶ್ ಚುಂಚನಹಳ್ಳಿ, ಜಿಲ್ಲಾ ಖಜಾಂಚಿ ಪುಟ್ಟಸ್ವಾಮಿ, ಶ್ರೀನಿವಾಸ ಮೂರ್ತಿ, ಹಗಿನವಾಳು ಚಿಕ್ಕಣ್ಣ, ಮರಿಸ್ವಾಮಿ, ಯಶವಂತ್ ಕುಮಾರ್, ನವೀನ್, ರವಿ, ಅನಿಲ್, ನಟರಾಜು, ನಾರಾಯಣ, ಪ್ರಕಾಶ್, ಶಿವಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.