ಕ್ರೈಂ

BREAKING NEWS : ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ​​​ಗೆ ನಿರಾಸೆ. ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ​

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ನಟ ದರ್ಶನ್​ ಸಲ್ಲಿಸಿದ್ದ ನಿಯಮಿತ ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಿದ ಕರ್ನಾಟಕ ಹೈಕೋರ್ಟ್ ನ.28ಕ್ಕೆ ಮುಂದೂಡಿ ಆದೇಶ ನೀಡಿದೆ.

ನ್ಯಾ.ಎಸ್‌.ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿದ್ದು, ದರ್ಶನ್​​ ಪರ ಹಿರಿಯ ವಕೀಲರಾದ ಸಿ.ವಿ.ನಾಗೇಶ್ ಅವರು ವಾದ ಮಂಡಿಸಿದರು.

ರೇಣುಕಾಸ್ವಾಮಿ ಕೊಲೆ, ಅಪಹರಣದಲ್ಲಿ ದರ್ಶನ್ ಪಾತ್ರವಿಲ್ಲ. ಅವರ ವಿರುದ್ಧ ವಿನಾಕಾರಣ IPC ಸೆಕ್ಷನ್‌ 364 & 302 ಜಾಮೀನುರಹಿತ ಆಪಾದನೆಗಳನ್ನು ಹೊರಿಸಲಾಗಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹತ್ಯೆ ಮಾಡಲೇಬೇಕು ಎಂಬ ಉದ್ದೇಶದಿಂದ ಕಿಡ್ಯ್ನಾಪ್​ ಮಾಡಿಲ್ಲ. ಸಾಕ್ಷ್ಯ ನಾಶವಾಗಲಿ, ಕೊಲೆ, ಹಲ್ಲೆ, ಸುಳ್ಳು ಆರೋಪವನ್ನು ದರ್ಶನ್‌ ವಿರುದ್ಧ ಮಾಡಲಾಗಿದೆ. ಒಂದು ಕಡೆಯಿಂದ ಮತ್ತೊಂದು ಕಡೆ ಸ್ಥಳಾಂತರಿಸುವುದು ಸಾಕ್ಷ್ಯ ನಾಶವಾಗುವುದಿಲ್ಲ. ಮೃತದೇಹವನ್ನು ಸುಡುವುದು ಸಾಕ್ಷ್ಯ ನಾಶವಾಗುತ್ತದೆ. ಇನ್ನು ಮಹಜರು, ಸಾಕ್ಷ್ಯಾ ಸಂಗ್ರಹದಲ್ಲಿ ವಿಳಂಬ ಎಂದು ತನಿಖೆಯ ಹಂತದ ಲೋಪದೋಷಗಳನ್ನು ಉಲ್ಲೇಖಿಸಿ ಅವರು ವಾದಿಸಿದರು.

ಆರೋಪಿ ಪ್ರದೂಶ್​​​ ಕೊಲೆ ಮಾಡಿರುವವರನ್ನು ಸರೆಂಡರ್​​​ ಮಾಡಿಸುತ್ತಾನೆ. ಆದರೆ ಕೊಲೆ ಮಾಡಿರುವುದು ದರ್ಶನ್​ ಅಭಿಮಾನಿಗಳ ಅಧ್ಯಕ್ಷ. FSL ರಿಪೋರ್ಟ್​​​ನಲ್ಲಿ ದರ್ಶನ್​​​​​ನ 1 ಶೂನಲ್ಲಿ ರಕ್ತದ ಕಲೆ ಇರುವುದು ಪತ್ತೆಯಾಗಿದೆ. ರೇಣುಕಾಸ್ವಾಮಿ ರಕ್ತವನ್ನು ಸಂಗ್ರಹಿಸಿ FSLಗೆ ಕಳಿಹಿಸಿರುವ ಬಗ್ಗೆ ಅನುಮಾನವಿದೆ. ಒಂದೆಡೆ ಪಂಚನಾಮೆಯಲ್ಲಿ ರಕ್ತದ ಕಲೆಗಳು ಪತ್ತೆಯಾದ ಬಗ್ಗೆ ಉಲ್ಲೇಖಿಸಿಲ್ಲ. ಇನ್ನು ಶೂಗೆ ಒಂದು ಹನಿ ರಕ್ತ ಹಾಕಿರುವು ಸಾಧ್ಯತೆ ತಳ್ಳಿಹಾಕುವಂತಿಲ್ಲ.

ದರ್ಶನ್‌ ಅವರಿಂದ 37,40 ಲಕ್ಷ ರೂಪಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೂ.8ರಂದು ಕೊಲೆ ನಡೆದ ಪ್ರಕರಣಕ್ಕೂ ಈ ಹಣಕ್ಕೂ ಏನು ಸಂಬಂಧವಿದೆ. ಮೋಹನ್​​​​ ರಾಜ್​​​​​ ಎಂಬುವವರು ಆಲ್ಬಂ ವಿಚಾರವಾಗಿ ದರ್ಶನ್ ಬಳಿ ಹಣ ಪಡೆದುಕೊಂಡಿದ್ದರು. ಆ ಹಣವನ್ನು ಮೇ ಮೊದಲ ವಾರದಲ್ಲಿ ದರ್ಶನ್​​​​​ಗೆ ಹಣ ಹಿಂದಿರುಗಿಸಿದ್ದರು. ಆ ಹಣವನ್ನು ದರ್ಶನ್​​​ ಮನೆಯಿಂದ ಸೀಜ್ ಮಾಡಲಾಗಿದೆ. ಸಾಕ್ಷ್ಯಾ ನಾಶಕ್ಕೆ ಹಣ ಇಟ್ಟಿದ್ದರು ಎಂದು ಸುಳ್ಳು ಹೇಳಬಾರದು. ಹಣ ಹೊರಗಡೆ ಕೊಂಡೊಯ್ಯುವಾಗ ಜಪ್ತಿ ಮಾಡಿದ್ದರೆ ಅದನ್ನು ಒಪ್ಪಬಹುದಿತ್ತು. ಇಲ್ಲಿ ಹಾಗೆ ಆಗಿಲ್ಲ. ಕೊಲೆ ನಡೆಯುತ್ತದೆ ಅಂತಾ ಮೇನಲ್ಲಿ ತಿಳಿದಿರೋಕೆ ಆಗುತ್ತಾ? ಸುಳ್ಳು ಹೇಕೋಕು ಮಿತಿ ಇರಬೇಕು. ಪಿತೂರಿ ಮಾಡಿ ದರ್ಶನ್​​ರನ್ನು ಸಿಲುಕಿಸಲಾಗಿದೆ ಎಂದು ಪೊಲೀಸರು ದರ್ಶನ್​​​ರಿಂದ ಪಡೆದ ಸ್ವ ಇಚ್ಚಾ ಹೇಳಿಕೆಯನ್ನು ಪೀಠದ ಗಮನಕ್ಕೆ ತಂದರು.

ದರ್ಶನ್​​​​ ಬಳ್ಳಾರಿ ಜೈಲಿನಲ್ಲಿದ್ದಾಗ ಅವರಿಗೆ ತೀವ್ರ ಬೆನ್ನು ನೋವಿನ ಸಮಸ್ಯೆಯಾಗಿದೆ. ಅವರಿಗೆ ಸರ್ಜರಿ ಅಗತ್ಯವಿದೆ ಎಂದು ನಾಗೇಶ್​​ ಅವರು ಈ ಹಿಂದೆ ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ದರ್ಶನ್​​ಗೆ ಹೈಕೋರ್ಟ್​​​​ 6 ವಾರಗಳಕಾಲ ಷರತ್ತುಬದ್ಧ ಮಧ್ಯಂತರ ಜಾಮೀನುನನ್ನು ಅ.30ರಂದು ಮಂಜೂರು ಮಾಡಿತ್ತು. ಹೀಗಾಗಿ ಸದ್ಯ ದರ್ಶನ್​​ ಕೆಂಗೇರಿಯ ಬಿಜಿಎಸ್​​ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ.

ವರದಿ : ಮಹಮ್ಮದ್ ಶಫಿ ಸ್ಪೆಶಲ್ ಡೆಸ್ಕ್ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button