ಸಿನಿಮಾ

ನಟ ಶರತ್ ಲೋಹಿತಾಶ್ವ ಅಭಿನಯಿಸಿದ “ಪಿದಾಯಿ” ತುಳು ಚಿತ್ರ ; ಕೊಲ್ಕತ್ತಾ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್‌ʼಗೆ!

ಕೊಲ್ಕತ್ತಾ : ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಗೆ ಅಧಿಕೃತವಾಗಿ ತುಳು ಸಿನಿಮಾ ಪಿದಾಯಿ ಆಯ್ಕೆಯಾಗಿದೆ. ನಮ್ಮ ಕನಸು ಬ್ಯಾನರಿನ ಕೆ. ಸುರೇಶ್ ನಿರ್ಮಾಣದಲ್ಲಿ ರಮೇಶ್ ಶೆಟ್ಟಿಗಾರ್ ಬರೆದು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರಾದ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಡಿಸೆಂಬರ್‌ 8 & 9ರಂದು ಕೊಲ್ಕತ್ತಾ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ವಿಶೇಷವಾಗಿದೆ.

ಮಹಾಮಾಯಿ ಪಾತ್ರಿಯಾಗಿ ಖ್ಯಾತ ಕನ್ನಡ ನಟರಾದ ಶರತ್ ಲೋಹಿತಾಶ್ವ ರವರು ಅಭಿನಯಿಸಿದ್ದು,ಇವರ ಜೊತೆಗೆ ರೂಪ ವರ್ಕಾಡಿ, ಇಳ ವಿಟ್ಲ, ದೇವಿ ನಾಯರ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್, ಪ್ರೀತೇಶ್, ಅನಿಲ್ ರಾಜ್ ಉಪ್ಪಳ, ರವಿ ವರ್ಕಾಡಿ, ಹಾಗೂ ಬಾಲ ಪ್ರತಿಭೆಗಳಾದ ಮೋನಿಶ್, ತ್ರಿಷ, ದ್ರುವ, ನಿಹಾ, ಖುಷಿ ಡಿಬಿಸಿ ಶೇಖರ್, ಅನಿತಾ ಚಂದ್ರಶೇಖರ್ ಮುಂತಾದವರು ಅಭಿನಯಿಸಿದ್ದಾರೆ. ಈ ಸಿನಿಮಾದ ಛಾಯಾಗ್ರಾಹಣವನ್ನು ಉಣ್ಣಿ ಮಾಡವೂರ್‌ರವರು ನಿಭಾಯಿಸಿದ್ದಾರೆ. ಸಂಭಾಷಣೆಯನ್ನು ರಮೇಶ್‌ ಶೆಟ್ಟಿಗಾರ್‌ ಹಾಗೂ ಡಿ.ಬಿ.ಸಿ ಶೇಖರ್‌ ಬರೆದಿದ್ದಾರೆ. ಚಿತ್ರವನ್ನು ದ.ಕ ಜಿಲ್ಲೆಯ ಮುಡಿಪು ಹಾಗೂ ಮಂಜೇಶ್ವರದ ಗಡಿಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.ಪದ್ಮಶ್ರೀ ಕೈತಪ್ರಮ್ ದಾಮೋದರನ್ ನಂಬೂದಿರಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಸುಧೀರ್ ಅತ್ತಾವರ, ತುಳು ಅಕಾಡೆಮಿ ಪ್ರಶಸ್ತಿ ವಿಜೇತರಾದ ಕುಶಾಲಾಕ್ಷಿ ಕಣ್ವತೀರ್ಥರವರ ಸಾಹಿತ್ಯವಿದ್ದು ಅಜಯ್ ನಂಬೂದಿರಿಯವರು ಸಂಗೀತ ನೀಡಿದ್ದಾರೆ. ಪ್ರಸಿದ್ದ ಹಾಡುಗಾರರಾದ ಸಂಗೀತ ವಿದ್ಯಾನಿಧಿ ಡಾಕ್ಟರ್ ವಿದ್ಯಾಭೂಷಣ್ ಪ್ರಪ್ರಥಮವಾಗಿ ಸಿನಿಮಾದಲ್ಲಿ ಹಾಡಿದ್ದಾರೆ ಎಂಬುದು ಇನ್ನೊಂದು ವಿಶೇಷತೆ. ಜೊತೆಗೆ ಹಿನ್ನಲೆ ಗಾಯಕರಾದ ಮೇಧ ವಿದ್ಯಾಭೂಷಣ್, ವಿಜೇಶ್ ಗೋಪಾಲ್ ಮುಂತಾದವರು ಕಂಠದಾನ ಮಾಡಿದ್ದಾರೆ.

ಹಿನ್ನಲೆ ಸಂಗೀತವನ್ನು ಕೇರಳ ರಾಜ್ಯ ಪ್ರಶಸ್ತಿ ವಿಜೇತ ಸಂಗೀತಕಾರರಾದ ದೀಪಾಂಕುರನ್ ವಿಶೇಷ ಹಿನ್ನೆಲೆಯ ಸಂಗೀತವನ್ನು ನೀಡಿದ್ದಾರೆ. ಎರಡು ಸಲ ರಾಷ್ಟ್ರ ಪ್ರಶಸ್ತಿ ವಿಜೇತ, ಅತೀ ಹೆಚ್ಚು ಸಿನಿಮಾ ಸಂಕಲನಕಾರಾದ ಶ್ರೀ ಸುರೇಶ್ ಅರಸ್ ಪಿದಾಯಿ ಸಿನಿಮಾದ ಸಂಕಲನಕಾರರಾಗಿದ್ದಾರೆ. ಚಿತ್ರದ ಕಲಾ ನಿರ್ದೇಶಕರಾಗಿ ರಾಜೇಶ್ ಬಂದ್ಯೋಡು, ವಸ್ತ್ರ ವಿನ್ಯಾಸಕಾರರಾಗಿ ಮೀರ ಸಂತೋಷ್, ಮೇಕ್‌ಅಪ್ ಮ್ಯಾನ್‌ ಆಗಿ ಬಿನೋಯ್ ಕೊಲ್ಲಮ್, ಮುಖ್ಯ ಸಹ ನಿರ್ದೇಶಕರಾಗಿ ವಿಗ್ನೇಶ್ ಕುಲಾಲ್, ಸಹ ನಿರ್ದೇಶಕರಾಗಿ ಗಿರೀಶ್ ಆಚಾರ್ ಸುಳ್ಯ, ಪ್ರದೀಪ್ ರಾವ್, ವಿಶ್ವ ಮಂಗಲ್ಪಾಡಿ, ತಂಡದ ಮ್ಯಾನೇಜರ್ ಆಗಿ ರವಿ ವರ್ಕಾಡಿ ಹಾಗೂ ನಿಶ್ಚಲ ಛಾಯಾಗ್ರಾಹಕರಾಗಿ ದೀಪಕ್‌ ಉಪ್ಪಳ ನಿರ್ವಹಿಸಿದ್ದಾರೆ.

ತುಳುನಾಡಿನ ವಿಶೇಷತೆಯಾದ ಕುಣಿತ ಭಜನೆಯನ್ನು ಮೊದಲ ಬಾರಿಗೆ ಈ ಸಿನಿಮಾದಲ್ಲಿ ಪ್ರಯೋಗಿಸಲಾಗಿದೆ. ಸಂದೀಪ್ ಬಲ್ಲಾಳ್ ಸಂಗೀತ ನೀಡಿದ ಕುಣಿತಭಜನೆಗೆ ಸಾಹಿತ್ಯ ಬರೆದವರು ಯೋಗೀಶ್ ಅಡಕಳಕಟ್ಟೆ. ಖ್ಯಾತ ಕವಿ ಅಡ್ವೋಕೇಟ್ ಶಶಿರಾಜ್ ಕಾವೂರವರು ಬರೆದ ಇನ್ನೊಂದು ಕುಣಿತ ಭಜನೆಗೆ ಶಿನೋಯ್ ಜೋಸೆಫ್ ಸಂಗೀತ ನೀಡಿದ್ದಾರೆ. ಒಟ್ಟಾರೆಯಾಗಿ ಈ ಸಿನಿಮಾ ಕೊಲ್ಕತ್ತಾ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಗೆ ಆಯ್ಕೆಯಾಗಿರುವುದು ವಿಶೇಷವಾಗಿದೆ.

ಬರಹ : ಪುಣ್ಯ ಗೌಡ ಫಿಲಂ ಬ್ಯೂರೋ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button