
ನ್ಯೂಯಾರ್ಕ್ ನವೆಂಬರ್ 21: ಅಮೆರಿಕದಲ್ಲಿ ಗೌತಮ್ ಅದಾನಿ ವಿರುದ್ಧ ವಂಚನೆ ಮತ್ತು ಲಂಚದ ಆರೋಪಗಳನ್ನು ಹೊರಿಸಲಾಗಿದೆ. ಅಮೆರಿಕದಲ್ಲಿರುವ ತಮ್ಮ ಕಂಪನಿಯೊಂದಕ್ಕೆ ಗುತ್ತಿಗೆ ಪಡೆಯಲು 250 ಮಿಲಿಯನ್ ಡಾಲರ್ ಲಂಚ ನೀಡಿ ವಿಷಯವನ್ನು ಮರೆಮಾಚಿದ್ದಾರೆ ಎಂದು ಯುಎಸ್ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.
ಶ್ರೀಮಂತ ಉದ್ಯಮಿ ಗೌತಮ್ ಅದಾನಿ (Gowtham adani) ವಿರುದ್ಧ ಅಮೆರಿಕಾ ಕೋರ್ಟ್ (America court) ಅರೆಸ್ಟ್ ವಾರೆಂಟ್ (Arrest warrant) ನೀಡಿ ಆದೇಶ ಹೊರಡಿಸಿದೆ.
ಸೌರ ವಿದ್ಯುತ್ ಗುತ್ತಿಗೆಯ ವಿಚಾರದಲ್ಲಿ ಗೌತಮ್ ಅದಾನಿ ಲಂಚ (Bribe) ಪಡೆದು ವಂಚಿನೆ ಮಾಡಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಸುಮಾರು 2,237 ಕೋಟಿ ಲಂಚ ಪಡೆದ ಆರೋಪ ಅದಾನಿ ಮೇಲಿದೆ.ಈ ಹಿನ್ನಲೆ ಅಮೆರಿಕಾ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.ಅಮೆರಿಕಾ ಕೋರ್ಟ್ ಆದೇಶ ಹೊರಡಿಸ್ತಿದ್ದಂತೆ ಅದಾನಿ ಎಂಟರ್ ಪ್ರೈಸಸ್ ಶೇರು ಶೇಕಡಾ 23 ರಷ್ಟು, ಅದಾನಿ ಪವರ್ ಶೇರು ಶೇಕಡಾ 15 ರಷ್ಟು ಕುಸಿತವಾಗಿದೆ.