ಜುಬಿಲೆಂಟ್ ಕಾರ್ಖಾನೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

ನಂಜನಗೂಡು : ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲೆಂಟ್ ಕಾರ್ಖಾನೆಯಲ್ಲಿ ಕಾರ್ಮಿಕರ ಸಂಘ ಹಾಗೂ ಜುಬಿಲೆಂಟ್ ಫಾರ್ಮೋವ ನಿಯಮಿತ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಗೀತೆ ರಚನಕಾರ ಹಾಗೂ ಖ್ಯಾತ ಗಾಯಕ ಆರ್. ರವಿಕುಮಾರ್ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸ, ಪುರಂದರದಾಸ, ಬಸವಣ್ಣ, ಅಕ್ಕಮಹಾದೇವಿ ಮುಂತಾದ ಮಹನೀಯರು ಸೇರಿದಂತೆ ನಮ್ಮ ಜನಪದರ ಕಾವ್ಯ ಗುಣಗಳಿಂದ ಸಂವೃದ್ಧವಾದ ಭಾಷೆ ಕನ್ನಡ, ಮಾತನಾಡಿದಂತೆ ಬರೆಯುವ, ಓದಿಸಿಕೊಳ್ಳುವ ಭಾಷೆ ಕನ್ನಡ ಮಾತ್ರ ಎಂಬುಂದು ಕನ್ನಡ ಭಾಷೆಯ ಹೆಗ್ಗಳಿಕೆ. ದೇಶದ ಎಲ್ಲ ಭಾಷೆ, ಸಂಸ್ಕೃತಿಯ ಜನರನ್ನು ನಮ್ಮವರಂತೆ ಒಪ್ಪಿಕೊಳ್ಳುವ, ಒಳಗೊಳ್ಳುವ ವಿಶಾಲ ಹೃದಯಿಗಳು ಕನ್ನಡಿಗರು, ಕನ್ನಡ ಭಾಷೆ, ಸಾಹಿತ್ಯ ಕ್ಷೇತ್ರಕ್ಕೆ ಇತರ ಸಹೋದರ ಭಾಷೆಯ ಜನರ ಕೊಡುಗೆಯು ಅಪಾರವಾಗಿದೆ, ಪ್ರಸಿದ್ದ ಚಲನಚಿತ್ರ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯ ನಾನು ಬರೆದ ಹಾಡನ್ನು ಕನ್ನಡದಲ್ಲಿ ಬರೆದುಕೊಂಡು, ಸಾಹಿತ್ಯ ತಪ್ಪಗಿದ್ದರೆ ತಿದ್ದುವಷ್ಟು ಕನ್ನಡ ಭಾಷೆಯಲ್ಲಿ ಪ್ರಾವಿಣ್ಯತೆ ಹೊಂದಿದ್ದರು, ಮುಂದಿನ ಜನ್ಮದಲ್ಲಿ ಕನ್ನಡ ನಾಡಿನಲ್ಲಿ ಕನ್ನಡಿಗನಾಗಿ ಹುಟ್ಟುವ ತಮ್ಮ ಅಭಿಲಾಷೆಯನ್ನು ಹೇಳಿಕೊಂಡಿದ್ದರು ಎಂದರು. ಹೆಚ್ಚು ಅಂಕ ಗಳಿಸಿದ ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಖಾನೆಯ ಮಾನವ ಸಂಪನ್ಮೂಲ ಅಧಿಕಾರಿ ಸುಬ್ರಹ್ಮಣ್ಯ, ಕಾರ್ಖಾನೆಯ ವ್ಯವಸ್ಥಾಪಕ ಪ್ರಣೇಶ್, ಪ್ರಭಾಕರ್ ಹೊನ್ನವಾಡ್, ಹಿರಿಯ ಪತ್ರಕರ್ತ ರಂಗನಾಥ್, ಹಿರಿಯ ಅಧಿಕಾರಿ ಪ್ರದೀಪ್, ವಿನೋದ್ ಜೈನ್ಸ್, ದೀಪಕ್, ಪ್ರದೀಪ್, ಕಾರ್ಮಿಕ ಸಂಘದ ಅಧ್ಯಕ್ಷ ಬಸವರಾಜು, ಲೋಕೇಶ್ ಸೇರಿದಂತೆ ಕಾರ್ಮಿಕರು ಭಾಗವಹಿಸಿದ್ದರು.