ದೇಶ

Delhi Air Pollution: ಮಿತಿ ಮೀರಿದ ವಾಯುಮಾಲಿನ್ಯ: ಉಸಿರಾಡುವ ಗಾಳಿ ಕೂಡ ವಿಷವಾಗುತ್ತಿದೆ,

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯಇನ್ನೂ ವಿಕೋಪಕ್ಕೆ ಹೋಗಿದ್ದು, ಸೋಮವಾರ ವಾಯುಗುಣಮಟ್ಟ ಸೂಚ್ಯಂಕ (ಎಕ್ಯುಐ) 978ಕ್ಕೆ ತಲುಪಿದೆ. ಹೀಗಾಗಿದೆಹಲಿಯಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯೂ ಮಲಿನಗಾಳಿಯನ್ನು ಉಸಿರಾಡುವ ಮೂಲಕ ದಿನಕ್ಕೆ 49 ಸಿಗರೆಟ್ಸೇವಿಸಿದಷ್ಟು ಹಾನಿಯನ್ನು ಶ್ವಾಸಕೋಶಕ್ಕೆ ಅನುಭವಿಸುತ್ತಿದ್ದಾರೆ.

ದೆಹಲಿಯಷ್ಟೇ ಅಲ್ಲ, ಅಕ್ಕಪಕ್ಕದ ರಾಜ್ಯಗಳಾದ ಹರ್ಯಾಣ,ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲೂ ವಾಯುಮಾಲಿನ್ಯತೀವ್ರಗೊಂಡಿದೆ. ಹರ್ಯಾಣದಲ್ಲಿ ಸೋಮವಾರ 631 ಎಕ್ಯುಐ,ಉತ್ತರ ಪ್ರದೇಶದಲ್ಲಿ 273 ಎಕ್ಯುಐ, ಪಂಜಾಬ್‌ನಲ್ಲಿ 233ಎಕ್ಯುಐ ದಾಖಲಾಗಿದೆ. 15 ವಿಮಾನ ವಿಳಂಬ:

ಸೋಮವಾರ ವಾಯುಮಾಲಿನ್ಯದ ಕಾರಣ ಗೋಚರತೆ ಕಡಿಮೆ ಆಗಿ ದಿಲ್ಲಿಯಲ್ಲಿ 14 ವಿಮಾನಗಳನ್ನು ಬೇರೆಡೆ ತಿರುಗಿಸಲಾಗಿದೆ. 100 ವಿಮಾನ ಹಾರಾಟ ವಿಳಂಬವಾಗಿವೆ.ಅಕ್ಟೋಬರ್ ಕೊನೆಯಿಂದ ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟ ದಿನೇದಿನೇ ಏರಿಕೆಯಾಗುತ್ತಿದೆ. ಚಳಿಗಾಲ, ನೆರೆ ರಾಜ್ಯಗಳಲ್ಲಿ ಭತ್ತದ ಹುಲ್ಲು ಸುಡುವುದು ಮುಂತಾದ ಸಂಗತಿಗಳು ಕಾರ್ಖಾನೆ ಹಾಗೂ ವಾಹನ ಮಾಲಿನ್ಯದ ಜೊತೆ ಸೇರಿ ಪ್ರತಿ ವರ್ಷ ಈ ಸಮಯದಲ್ಲಿ ರಾಷ್ಟ್ರ ರಾಜಧಾನಿಯ ವಾಯುಮಾಲಿನ್ಯ ಮಟ್ಟ ತೀವ್ರಗೊಳ್ಳುತ್ತದೆ.

Related Articles

Leave a Reply

Your email address will not be published. Required fields are marked *

Back to top button