ದೇಶ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಬೆಳಗ್ಗೆಯೇ ತಮ್ಮ ಹಕ್ಕು ಚಲಾಯಿಸಿ ಮತದಾನಕ್ಕೆ ಕರೆ ಕೊಟ್ಟ ಸೆಲೆಬ್ರಿಟಿಗಳು! Maharashtra Assembly Polls

ಮಹಾರಾಷ್ಟ್ರ ವಿಧಾನಸಭೆಯ ( Maharashtra Assembly Polls ) 288 ಕ್ಷೇತ್ರಗಳ ಜತೆಗೆ ಎರಡನೇ ಹಂತದಲ್ಲಿ ಜಾರ್ಖಂಡ್​ ವಿಧಾನಸಭೆಯ 38 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಮತದಾನ ಬಿರುಸು ಪಡೆದುಕೊಂಡಿದ್ದು, ಮುಂಬೈನಲ್ಲಿ ಸೆಲೆಬ್ರಿಟಿಗಳು ಉತ್ಸಾಹದಿಂದ ಬಂದು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.

ಕ್ರಿಕೆಟ್​​ ದಂತಕತೆ ಸಚಿನ್ ತೆಂಡೂಲ್ಕರ್, ನಟರಾದ ಅಕ್ಷಯ್ ಕುಮಾರ್ ಮತ್ತು ರಾಜ್‌ಕುಮಾರ್ ರಾವ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಬೆಳಗ್ಗೆಯೇ ಮತ ಚಲಾಯಿಸಿದ್ದಾರೆ.

ಮುಂಬೈನ ಮತಗಟ್ಟೆಯಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಪತ್ನಿ ಅಂಜಲಿ ಮತ್ತು ಮಗಳು ಸಾರಾ ಅವರೊಂದಿಗೆ ಮತದಾನ ಮಾಡಿದರು. ಬಳಿಕ ಮೂವರು ಮಾಧ್ಯಮದವರಿಗೆ ಶಾಯಿ ಹಚ್ಚಿದ ಬೆರಳನ್ನು ಪ್ರದರ್ಶಿಸಿದರು. ಬಳಿಕ ಮಾತನಾಡಿದ ಸಚಿನ್​, ನಾನು ಸ್ವಲ್ಪ ಸಮಯದಿಂದ ಭಾರತೀಯ ಚುನಾವಣಾ ಆಯೋಗದ ಐಕಾನ್ ಆಗಿದ್ದೇನೆ. ಎಲ್ಲರು ಮತದಾನ ಮಾಡಿ ಎಂಬುದು ನಾನು ನೀಡುತ್ತಿರುವ ಸಂದೇಶವಾಗಿದೆ. ಇದು ನಮ್ಮ ಜವಾಬ್ದಾರಿಯೂ ಹೌದು. ಹೀಗಾಗಿ ಎಲ್ಲರೂ ಮತ ಚಲಾಯಿಸುವಂತೆ ನಾನು ವಿನಂತಿಸುತ್ತೇನೆ ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button