ನ.23 ರಿಂದ 26 ರವರೆಗೆ ಬೇಲದಕುಪ್ಪ ಮಹದೇಶ್ವರ ಜಾತ್ರೆ

ಸರಗೂರು : ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಅರಣ್ಯ ವ್ಯಾಪ್ತಿಯ ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನದಲ್ಲಿ ಕಡೆ ಕಾರ್ತಿಕ ಮಾಸದಂದು ನಡೆಯಲಿರುವ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ನಿಯಮ ಅನುಸಾರವಾಗಿ ಎಂದಿನoತೆ ಆಚರಿಸಲು ನಿರ್ಧರಿಸಲಾಯಿತು.
ತಾಲೂಕಿನ ಸಮೀಪದ ಹೆಡಿಯಾಲ ವಲಯ ಅರಣ್ಯ ಕಚೇರಿ ಮುಂಭಾಗದಲ್ಲಿ ಶನಿವಾರ ದಂದು ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಶಾಸಕ ಅನಿಲ್ ಚಿಕ್ಕಮಾದು ರವರು ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯಲ್ಲಿ ನ.23ರಿಂದ 26 ವರೆಗೆ ನಾಲ್ಕು ದಿನಗಳು ಗ್ರಾಮೀಣ ಹಾಗೂ ಧಾರ್ಮಿಕ ಸಂಪ್ರದಾಯದoತೆ ಜಾತ್ರೆ ನಡೆಯಲಿದೆ.
ಇದಕ್ಕೆ ಸಾರ್ವಜನಿಕರು, ಇಲಾಖಾಧಿಕಾರಿಗಳು ಸಹಕಾರ ನೀಡಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಖಾಸಗಿ ಮತ್ತು ಜಾನುವಾರು ಗಳಿಗೆ ಭಕ್ತಾಧಿಗಳಿಗೆ ಪ್ರಸಾದ . ನಾಲ್ಕೈದು ಗ್ರಾಮಗಳಿಂದ ಆಲಹರವಿಗಳು.ಬವಸಗಳು ಹತ್ತರಿಂದ ಇಪ್ಪತ್ತು ಜನರು ಬರುತ್ತವೆ.ಅವರಿಗೆ ಕಂದಾಯ . ಅರಣ್ಯ ಇಲಾಖೆ ಅಧಿಕಾರಿಗಳು ಪಾಸ್ ನೀಡಿ ಒಳಗಡೆಗೆ ಬಿಡಬೇಕು.ಅದರ ಜೊತೆಯಲ್ಲಿ ಮಠದ ಸ್ವಾಮೀಜಿಗಳು ಕಾರ್ಯಕ್ರಮಕ್ಕೆ ಅಡಚಣೆ ಮಾಡಬಾರದು ಅಧಿಕಾರಿಗಳಿಗೆ ತಿಳಿಸಿದರು.
ದೇವಸ್ಥಾನದ ಸುತ್ತ ದೀಪಾಲಂಕಾರ ಹಾಗೂ ಬರುವ ಭಕ್ತರಿಗೆ ಕುಡಿಯುವ ನೀರು.ಮಂಗಳವಾದ್ಯ.ಇನ್ನೂ ಕಾರ್ಯಕ್ರಮಕ್ಕೆ ಅವಕಾಶ ನೀಡಬೇಕು.ನಾನು ಯಾವುದೇ ಕಾರ್ಯಕ್ರಮಗಳು ಇದ್ದರೂ ಅವುಗಳನ್ನು ಮುಂದೆಕ್ಕೆ ಮುಂದುಡಿ ಭಾನುವಾರ ಮತ್ತು ಸೋಮವಾರ ನಿಮ್ಮ ಜೊತೆಯಲ್ಲಿ ಇದ್ದು ಧಾರ್ಮಿಕ ಕಾರ್ಯಕ್ರಮಗಳು ಮುಗಿಸಿಕೊಂಡು ಹೋಗುತ್ತಾನೆ ಎಂದು ಸಾರ್ವಜನಿಕರ ಮುಂದೆ ಹೇಳಿದರು. ಎಂದು ಆಪ್ತ ಕಾರ್ಯದರ್ಶಿ ತಿಳಿಸಿದರು.
ಕಳೆದ ವರ್ಷ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ಇಲಾಖೆ ವತಿಯಿಂದ 100 ಬಸ್ ವ್ಯವಸ್ಥೆ ಕಲ್ಪಿಸಿ ಬೇಕು ಎಂದು ಹೇಳಿದರು.ಅದರೆ ಇಲಾಖೆಯವರು ಬರಿ 45 ಬಸ್ ವ್ಯವಸ್ಥೆ ಮಾಡಲಾಗಿತ್ತು.ಈ ಸಲ ಮರುಕಳಿಸಬಾರದು ನಾಲ್ಕು ದಿನಗಳ ಕಾಲ ಜಾತ್ರಾ ಮಹೋತ್ಸವದಲ್ಲಿ ಬಸ್ ವ್ಯವಸ್ಥೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು.ಸ್ಥಳದಲ್ಲೇ ಜಿಲ್ಲಾ ಬಸ್ ವ್ಯವಸ್ಥಾಪಕರಿಗೆ ಕರೆ ಮಾಡಿ 100 ಬಸ್ ವ್ಯವಸ್ಥೆ ಮಾಡಬೇಕು ಎಚ್ ಡಿ ಕೋಟೆ ಮತ್ತು ಸರಗೂರು.ನಂಜನಗೂಡು. ಗುಂಡ್ಲುಪೇಟೆ ತಾಲೂಕಿನಿಂದ ಡಿಪೋ ಗಳಿಂದ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ದೇವಸ್ಥಾನದ ಅರ್ಚಕರಿಗೆ ದಿನನಿತ್ಯ ದೇವರಿಗೆ ಪೂಜೆ ಪುನಸ್ಕಾರ ಮಾಡಲು ಹಾಗೂ ಅವರು ಉಳಿದುಕೊಳ್ಳಲು ಅವಕಾಶ ನೀಡಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಊಟ, ತಿಂಡಿ ವ್ಯವಸ್ಥೆಗೆ ಅವಕಾಶವಿಲ್ಲ. ಎತ್ತಿನಗಾಡಿ, ಖಾಸಗಿ ವಾಹನಗಳಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಸಭೆಯಲ್ಲಿ ನಿರ್ಧರಿಸಿದರು.
ಬೇಲದಕುಪ್ಪೆ ಮಹದೇಶ್ವರ ಸಮಿತಿ ಅಧ್ಯಕ್ಷ ನಿಂಗರಾಜು ಮಾತನಾಡಿ ಈ ಬಾರಿ ಮುಜರಾಯಿ ಇಲಾಖೆ ಗೆ ದೇವಸ್ಥಾನ ಸೇರಿಕೊಂಡಿದೆ . ಆದ್ದರಿಂದ ವಿಜೃಂಭಣೆಯಿಂದ ಆಚರಿಸುವ ನಂಬಿಕೆ ಇದೆ. ಎಲ್ಲ ಇಲಾಖೆ ಸೇರಿಕೊಂಡು ಜಾತ್ರಾ ಮಹೋತ್ಸವ ಮಾಡಬೇಕು.
ಮುಖಂಡ ಶಂಭುಲಿಂಗನಾಯಕ ಮಾತನಾಡಿ ನಮ್ಮ ಪರಂಪರೆಯಿಂದ ಜಾತ್ರಾ ಮಹೋತ್ಸವನ್ನು ಮಾಡಿಕೊಂಡು ಬರುತ್ತಿದ್ದೇವೆ. ಅರಣ್ಯ ಇಲಾಖೆ ಅಧಿಕಾರಿಗಳು ಜಾತ್ರೆ ಮಾಡಬೇಕು.ನಾವು ನಿಮ್ಮನ್ನು ಏನು ಕೇಳುವುದಿಲ್ಲ.ಕಾನೂನು ಚೌಕಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮಾಡುತ್ತೇವೆ.
ಶಾಸಕರು ಬಳಿ ಪರವಾನಗಿ ಪಡೆದು ಜಾತ್ರೆಯನ್ನು ಮಾಡಬೇಕು. ಭಕ್ತಾಧಿಗಳ ರಕ್ಷಣೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆಯಬೇಕು.
ಜಾತ್ರೆ ಮುಗಿಯುವ ತನಕ ಪೊಲೀಸ್ ಬಂದೂಬಸ್ತು, ತಾತ್ಕಾಲಿಕ ಪೊಲೀಸ್ ಠಾಣೆ ಸ್ಥಾಪನೆ ಮಾಡುವುದು. ಹಾಗೂ ಕೆಎಸ್ಸಾರ್ಟಿಸಿ ಇಲಾಖೆಯಿಂದ ಕಳೆದ ವರ್ಷ 100 ಬಸ್ ವ್ಯವಸ್ಥೆ ಮಾಡಲಾಗಿದೆ.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಿಕ್ಕವೀರನಾಯಕ ಈ ಬಾರಿ ಗ್ಯಾರಂಟಿ ವ್ಯವಸ್ಥೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ ಎಂದು ಮನವಿ ಮಾಡಿಕೊಂಡಾಗ, ಕೆಎಸ್ಸಾರ್ಟಿಸಿ ಅಧಿಕಾರಿಗಳು ಈ ಬಾರಿ 70 ರಿಂದ 100 ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.ದೇವಸ್ಥಾನಕ್ಕೆ ಸುಣ್ಣ, ಬಣ್ಣ ಬಳಿಯುವುದು. ರಸ್ತೆ ಕಾಮಗಾರಿ ಕೆಲಸ,
ದೇವಸ್ಥಾನಕ್ಕೆ ದೀಪಾಲಂಕಾರ, ಸೌಂಡ್ಸ್, ಶಾಮಿಯಾನ, ಪಲ್ಲಕ್ಕಿ ಬೋರ್ಡ್, ಜನರೇಟರ್ ವ್ಯವಸ್ಥೆ, ದೇವರ ಮಂಟಪ ಬಿಡುವುದು. ಪೂಜಾಗೆ ಹಣ್ಣು, ಕಾಯಿ ಇತರೆ ಸಾಮಗ್ರಿಗಳನ್ನು ಮಾರಾಟಕ್ಕೆ ಅವಕಾಶ, ಸೋಮವಾರ ೧೧.೩೦ಕ್ಕೆ ಹಾಲರವೆ ಸೇವೆ, ಕೊಂಡ ಮಹೋತ್ಸವ ಕಲಾತಂಡ, ವಾದ್ಯಗೋಷ್ಠಿ, ಕೋಲಾಟ, ನಗಾರಿ ವೀರಗಾಸೆ ಸೇರಿದಂತೆ ಕಲಾತಂಡಗಳ ಅವಕಾಶಕ್ಕೆ ಅನುಮತಿ ಭಕ್ತಾಧಿಗಳಿಗೆ ಅಗತ್ಯ ಮಾಡಬೇಕು ಎಂದು ಸಮಿತಿ ಸದಸ್ಯರು ಕೇಳಿಸಿಕೊಂಡಾಗ, ಶಾಸಕರು ಮಾತನಾಡಿ, ಜಾತ್ರೆ ನಡೆಸುವ ವಿಚಾರದಲ್ಲಿ ಅರಣ್ಯ ಇಲಾಖೆ, ಸ್ಥಳೀಯ ಜನರ ನಡುವೆ ಕೆಲವು ಬಾಂಧವ್ಯ ಮಾಡಿಕೊಂಡು ಅರಣ್ಯ ಇಲಾಖೆ ಮೇಲ್ಪಟ್ಟ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ ಅವಕಾಶ ಮಾಡಲಾಗುವುದು ಎಂದರು. ಜನರು ಅರಣ್ಯ ರಕ್ಷಣೆಯೊಂದಿಗೆ ಇಲಾಖೆಯ ಕಾನೂನುಗಳನ್ನು ಗೌರವಿಸಬೇಕಿದೆ. ಅದೇ ರೀತಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಾಮಾನ್ಯ ಜನರ ಭಾವನೆಗಳ ಜೊತೆ ಆಟವಾಡಬಾರದು. ಈ ಭಾಗದಲ್ಲಿ ಹೀಗಾಗಿ ಅವರು ಧಾರ್ಮಿಕ ಭಾವನೆಗಳಿಗೆ ದಕ್ಕೆ ತರಬಾರದು ಎಂದು ತಿಳಿಸಿದರು.
ಜಾತ್ರೆ ಮಾಮೂಲಿಯಂತೆ ನಡೆಸಲು ಅವಕಾಶ ಕಲ್ಪಿಸಬೇಕು. ಬಸ್ ವ್ಯವಸ್ಥೆ ನಂಜನಗೂಡು ಮತ್ತು ಗುಂಡ್ಲುಪೇಟೆ ಹಾಗೂ ಹುಣಸೂರು, ಎಚ್ ಡಿ ಕೋಟೆ ಮತ್ತು ಸರಗೂರು ತಾಲ್ಲೂಕಿನಿಂದ ಎಲ್ಲಾ ಕಡೆಯಿಂದ ಜಾತ್ರಾ ನಡೆಯಲಿರುವ ದೇವಸ್ಥಾನದ ಬಳಿಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.ಅಕ್ಕಪಕ್ಕದ ಗ್ರಾಮಗಳ ಮುಖಂಡರು ಎಲ್ಲಾ ಸಮಸ್ಯೆಗಳನ್ನೂ ಹೇಳಿಕೊಂಡು.ಅ ಸಮಸ್ಯೆಗಳನ್ನು ಬಗೆಹರಿಸಿಕೊಟ್ಟರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮೋಹನಕುಮಾರಿ ,ಇಓ ಪ್ರೇಮ್ ಕುಮಾರ್,ಎಸಿಎಫ್ ಸತೀಶ್, ಸರ್ಕಲ್ ಇನ್ಸ್ಪೆಕ್ಟರ್ ಲಕ್ಷ್ಮೀಕಾಂತ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಪಿ ರವಿ, ಸಿಂಡಿಕೇಟ್ ಬ್ಯಾಂಕ್ ಸದಸ್ಯ ಕ್ಯಾತನಹಳ್ಳಿ ನಾಗರಾಜು,ಆರ್‌ಎಫ್‌ಓ ವಿವೇಕ್, ಅಮೃತ, ಮುಜರಾಯಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ರಘು, ರಾಕೇಶ್,
ಸಮಿತಿ ಅಧ್ಯಕ ನಿಂಗರಾಜು,ಮುಖಂಡರಾದ ಶಂಭುಲಿoಗನಾಯಕ, ರಾಮೇಲಿಂಗೌಡ,ಲಿಂಗರಾಜು, ಮಹದೇವಸ್ವಾಮಿ, ಮಹಾದೇವಯ್ಯ, ಪುಟ್ಟಸ್ವಾಮಿ , ಶಿವಮೂರ್ತಿ, ರಾಜೇಶ್, ಶಿವರಾಜು, ಶಿವಕುಮಾರ್, ಕೆಂಡಗಣ್ಣಸ್ವಾಮಿ,ಪ್ರಕಾಶ್, ಲಿಂಗರಾಜು, ನಾಗರಾಜು,ಮಹದೇವಯ್ಯ, ಸಿದ್ದರಾಜು, ನಟರಾಜು, ಪಾಲುಪತ್ತೇದಾರು ಮಹದೇವಸ್ವಾಮಿ, ನಾಗೇಂದ್ರ, ಸಂಜಯ್, ಶೇಖರ್, ಬಸವಣ್ಣ, ರವಿ ನಂಜುಂಡಿ ಪಾಪಣ್ಣ ಸೇರಿದಂತೆ ಭಕ್ತಾಧಿಗಳು ಹಾಜರಿದ್ದರು.
ವರದಿ : ಹಾದನೂರು ಚಂದ್ರ tv8kannada