ದೇಶ
ಇಂದಿನಿಂದ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಆರಂಭ

ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಇಂದಿನಿಂದ ಆರಂಭವಾಗಲಿದೆ. ಹೌದು, ಇಂದು ಮಂಡಲ ಪೂಜೆ ಆರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಯಿಂದ ಭಕ್ತರು ಪಂಪಾ ನದಿ ಬಳಿಯಿಂದ ಶಬರಿಮಲೆಗೆ ಯಾತ್ರೆ ಆರಂಭಿಸಲಿದ್ದಾರೆ.
ಇಂದಿನಿಂದ ಡಿಸೆಂಬರ್ 25ರವರೆಗೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ 18 ಗಂಟೆಗಳ ಕಾಲ ದರ್ಶನಕ್ಕೆ ಅವಕಶವಿದ್ದು, ನಿತ್ಯವೂ 70,000 ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ.

ಸ್ಥಳದಲ್ಲಿಯೇ ಬುಕಿಂಗ್ ವ್ಯವಸ್ಥೆ ಕೂಡ ಮಾಡಲಾಗುವುದು. ಪಂಪಾ, ಎರುಮೇಲಿ, ವಂಡಿಪೆರಿಯಾರ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹಲವಾರು ಕೌಂಟರ್ ತೆರೆಯಲಾಗಿದೆ. ಸ್ಪಾಟ್ ಬುಕಿಂಗ್ ಮಾಡುವ ಭಕ್ತರು ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯವಾಗಿದೆ.
ಇನ್ನು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶಬರಿಮಲೆಗೆ ಪ್ರಯಾಣಿಕರಿಗೆ ಆನ್ ಲೈನ್ ಟಿಇಕೆಟ್ ಬುಕಿಂಗ್ ಕಲ್ಪಿಸಿದೆ.
ವರದಿ : C ಕೊಟ್ರೇಶ್ ಸ್ಪೆಶಲ್ ಡೆಸ್ಕ್ ಬೆಂಗಳೂರು