
ಚಾಮರಾಜನಗರ: ಮಕ್ಕಳು ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರೂ ರವರ ಆದರ್ಶ ಮೈಗೂಡಿಸಿಕೊಳ್ಳುವುದು ಪ ಮುಖ್ಯ ಎಂದು ಕನ್ನಡ ಹೋರಾಟಗಾರ ಚಾ.ರಂ.ಶ್ರೀನಿವಾಸ್ ಗೌಡ ಅವರು ತಿಳಿಸಿದರು.
ತಾಲೂಕಿನ ಉತ್ತುವಳ್ಳಿಯ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ.ಎಸ್.ಪಿ ಬಾಲಸುಬ್ರಹ್ಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ಹಾಗೂ ಜಿಲ್ಲಾ ಯುವ ರೆಡ್ ಸಂಸ್ಥೆ ವತಿಯಿಂದ ನಡೆದ ಮಕ್ಕಳ ದಿನಾಚರಣೆಯನ್ನು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆಚರಿಸಲಾಯಿತು.
ನಂತರ ಮಾತನಾಡಿದ ಅವರು ಪಂಡಿತ್ ಜವಾಹರ್ ಲಾಲ್ ನೆಹರು ರವರಿಗೆ ಮಕ್ಕಳನ್ನು ಕಂಡರೆ ಅಪಾರವಾದ ಪ್ರೀತಿ ಆದ್ದರಿಂದ ಅವರ ಹುಟ್ಟು ಹಬ್ಬದ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ.
ನೆಹರು ರವರು ಅನೇಕ ಯೋಜನೆಗಳನ್ನು ನೀಡಿದ್ದಾರೆ. ದೇಶದ ಸ್ವಾತಂತ್ರ್ಯ ತರುವಲ್ಲಿ ಶ್ರಮಿಸಿದ್ದಾರೆ.ಅದೇ ರೀತಿ ಕರ್ನಾಟಕ ಸರ್ಕಾರ ಕರ್ನಾಟಕ ಉದಯವಾದ 50 ವರ್ಷಗಳ ನೆನಪಿಗಾಗಿ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದೆ ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಕನ್ನಡ ಬೆಳೆಸಿ ಉಳಿಸಲು ಮುಂದಾಗಬೇಕು.ಮಕ್ಕಳು ತಂದೆ-ತಾಯಿ ಹಾಗೂ ಗುರುಗಳನ್ನು ಗೌರವಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಪಿ.ಬಾಲಸುಬ್ರಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾವೇದಿಕೆಯ ಜಿಲ್ಲಾ ಅಧ್ಯಕ್ಷ ಎಚ್.ಎಂ.ಶಿವಣ್ಣ ಮಂಗಲ ಹೊಸೂರು, ಕನ್ನಡ ಹೋರಾಟಗಾರ ಪಣ್ಯದುಂಡಿ ರಾಜು, ಜಿಲ್ಲಾ ಯುವ ರೆಡ್ ಸಂಸ್ಥೆಯ ಎಲ್.ಸುರೇಶ್, ಎಸ್ ಡಿ.ಎಂ.ಸಿ ಅಧ್ಯಕ್ಷ ಶಿವಕುಮಾರ್, ಮುಖ್ಯ ಶಿಕ್ಷಕ ಹೆಚ್ ಎಂ.ನಾಗರಾಜು, ಶಿಕ್ಷಕರಾದ ಮಂಜುಳ.ಕೆ, ಮೋಹನ್ ಕುಮಾರಿ.ಕೆ, ಸವಿತಾ ರಾಣಿ.ಬಿ.ಜೆ, ಶಾಂತಮ್ಮ, ರತ್ನಮ್ಮ.ಎಂ, ಫಾಝಾ೯ನ್ ಯಾಸ್ಮಿನ್, ಮಾದೇವರಾಜು ಸ್ವಾಮಿ ಡಿ.ಸಿ, ದೈಹಿಕ ಶಿಕ್ಷಕಿ ಸುಶೀಲ ಇದ್ದರು.
ವರದಿ: ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ