ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನೋಡೋ ಅಭ್ಯಾಸ ಇದ್ಯಾ!? ಹಾಗಾದ್ರೆ ಅಪಾಯ ತಪ್ಪಿದ್ದಲ್ಲ,

ನಿಮಗೂ ದಿನವೂ ಬೆಳಗ್ಗೆ ಎದ್ದ ಕೂಡಲೆ ಮೊಬೈಲ್ ನೋಡುವ ಅಭ್ಯಾಸ ಇದೆಯಾ? ಹಾಸಿಗೆಯಲ್ಲಿ ಉರುಳಿಕೊಂಡು ಮೊಬೈಲ್ ನೋಡುತ್ತಾ ಟೈಂ ಪಾಸ್ ಮಾಡುತ್ತೀರಾ? ಹಾಗಿದ್ದರೆ ಆ ಅಭ್ಯಾಸವನ್ನು ಬಿಟ್ಟುಬಿಡಿ. ಬೆಳಗ್ಗೆ ಎದ್ದಕೂಡಲೆ ಮೊಬೈಲ್ ನೋಡುವುದರಿಂದ ಆರೋಗ್ಯಕ್ಕೆ ಬಹಳಷ್ಟು ಸಮಸ್ಯೆಗಳು ಎದುರಾಗುತ್ತವೆ.
ಹಾಗಾಗಿ, ಮಲಗುವಾಗ ನಿಮ್ಮ ಮೊಬೈಲನ್ನು ದೂರವಿಟ್ಟು ಮಲಗಿದರೆ ಉತ್ತಮ.

ಕೆಲವರು ಬೆಳಿಗ್ಗೆ ಎದ್ದ ತಕ್ಷಣ ಬೇರೆ ಕೆಲಸ ಮಾಡುವ ಮೊದಲು ಫೋನ್ ನೋಡುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಆದರೆ ಇದು ಅವರ ಕಣ್ಣುಗಳಿಗೆ ಹಾನಿಕಾರಕವಾಗಿದೆ. ಇದರಿಂದಾಗಿ ಅನೇಕ ರೀತಿಯ ಕಣ್ಣಿನ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಲು ಪ್ರಾರಂಭಿಸುತ್ತವೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಐಡಿಸಿ ರಿಸರ್ಚ್ ವರದಿಯ ಪ್ರಕಾರ, ಶೇಕಡಾ 80 ರಷ್ಟು ಸ್ಮಾರ್ಟ್ ಫೋನ್ ಬಳಕೆದಾರರು ಎಚ್ಚರವಾಗಿ 15 ನಿಮಿಷಗಳಲ್ಲಿ ತಮ್ಮ ಮೊಬೈಲ್ ಫೋನ್ಗಳನ್ನು ಪರಿಶೀಲಿಸುತ್ತಾರೆ. ಇದು ನಿಮ್ಮ ಕಣ್ಣುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಬೆಳಿಗ್ಗೆ ಎದ್ದು ಫೋನ್ ಬಳಸುವ ಅಭ್ಯಾಸವು ನಿಮಗೆ ಎಷ್ಟು ಹಾನಿಕಾರಕ ಎಂಬುದನ್ನು ತಿಳಿದುಕೊಳ್ಳಿ.
ಜರ್ನಲ್ ಆಫ್ ನ್ಯೂರಲ್ ಟ್ರಾನ್ಸ್ಮಿಷನ್ನಲ್ಲಿ 2007 ರ ವರದಿಯ ಪ್ರಕಾರ, ನೀವು ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುವುದು ಅವುಗಳ ಬೆಳಕಿಗೆ ಒಡ್ಡಿಕೊಳ್ಳುವುದು ದೇಹದಲ್ಲಿ ಮೆಲಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ನಿದ್ರೆಯ ಚಕ್ರವನ್ನು ನಿಯಂತ್ರಿಸುವ ಹಾರ್ಮೋನ್ ಆಗಿದ್ದು ದೇಹದಲ್ಲಿ ಈ ಹಾರ್ಮೋನ್ ಮಟ್ಟವು ಹೆಚ್ಚಾಗುವುದರಿಂದ, ವ್ಯಕ್ತಿಯು ಹೆಚ್ಚು ನಿದ್ರೆ ಮಾಡಲು ಪ್ರಾರಂಭಿಸುತ್ತಾನೆ, ಇದರಿಂದ ದೇಹಕ್ಕೆ ಆಲಸ್ಯ ಹೆಚ್ಚಾಗಲು ಪ್ರಾರಂಭಿಸುತ್ತದೆ.
ನಿದ್ರೆಯ ತೊಂದರೆಗಳು: ಸಂಶೋಧನೆಯ ಪ್ರಕಾರ, ನೀವು ಮಲಗುವ ಮೊದಲು ಅಥವಾ ಬೆಳಿಗ್ಗೆ ಎಚ್ಚರಗೊಂಡ ಬಳಿಕ ಯಾವುದೇ ರೀತಿಯ ಗ್ಯಾಜೆಟ್ ಅನ್ನು ಬಳಸಿದರೆ, ಅದು ನಿಮ್ಮ ಜೈವಿಕ ಗಡಿಯಾರವನ್ನು ಸಂಕೀರ್ಣಗೊಳಿಸುತ್ತದೆ. ವಾಸ್ತವದಲ್ಲಿ ನೀಲಿ ಬೆಳಕು ರೆಟಿನಾದ ಫೋಟೋರೆಸೆಪ್ಟಿವ್ ಕೋಶಗಳನ್ನು ಹೀರಿಕೊಳ್ಳುತ್ತವೆ. ಇದರಿಂದಾಗಿ ವ್ಯಕ್ತಿಯು ಸಂಪೂರ್ಣವಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ ಇದರಿಂದ ನಿದ್ರೆ ಸರಿಯಾಗಿ ಆಗುವುದಿಲ್ಲ.
ಹೆಚ್ಚಿದ ಒತ್ತಡ: ನೀವು ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಫೋನ್ ಅನ್ನು ಪರಿಶೀಲಿಸಲು ಪ್ರಾರಂಭಿಸಿದರೆ, ಅದು ನಿಮಗೆ ಒತ್ತಡ ಮತ್ತು ಆತಂಕವನ್ನು ಉಂಟು ಮಾಡಲು ಪ್ರಾರಂಭಿಸುತ್ತದೆ. ವಾಸ್ತವದಲ್ಲಿ ಒಂದೇ ಸಮಯದಲ್ಲಿ ಅನೇಕ ಸಂದೇಶಗಳು, ಇ- ಮೇಲ್ ಗಳು ಮತ್ತು ವಿವಿಧ ರೀತಿಯ ನೋಟಿಫಿಕೇಶನ್ ನಿಮಗೆ ಕಳವಳಕ್ಕೆ ಕಾರಣವಾಗಬಹುದು. ನೀವು ಮಾನಸಿಕ ಒತ್ತಡದಿಂದ ದಿನವನ್ನು ಪ್ರಾರಂಭಿಸಿದರೆ, ದಿನವಿಡೀ ಒತ್ತಡದಲ್ಲಿರಬೇಕಾಗುತ್ತದೆ. ಒಂದೆಡೆ, ಮೊಬೈಲ್ ನಿಂದ ಹೊರಬರುವ ನೀಲಿ ಬೆಳಕು ನಿಮ್ಮ ರೆಟಿನಾವನ್ನು ಹಾನಿಗೊಳಿಸುತ್ತದೆ ಮತ್ತೊಂದೆಡೆ, ಆತಂಕವು ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ಕಣ್ಣುಗಳಲ್ಲಿ ಶುಷ್ಕತೆ: ಮೊಬೈಲ್ ಫೋನ್ ನ ಪರದೆಯನ್ನು ನೋಡುವ ಮೂಲಕ ದಿನವನ್ನು ಪ್ರಾರಂಭಿಸುವುದರಿಂದ ಕಣ್ಣುಗಳಲ್ಲಿ ಶುಷ್ಕತೆ ಹೆಚ್ಚಾಗುತ್ತದೆ. ಇದಲ್ಲದೆ, ಕಣ್ಣಿನ ದೃಷ್ಟಿಯ ಮೇಲೂ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಅಲ್ಲದೆ ಕಣ್ಣುಗಳಲ್ಲಿ ಮಾಕ್ಯುಲರ್ ಕ್ಷೀಣತೆಯ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ವಯಸ್ಸು ಹೆಚ್ಚಾದಂತೆ ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ.
ಮಹಮ್ಮದ್ ಶಫಿ ಸ್ಪೆಶಲ್ ಡೆಸ್ಕ್ tv8kannada ಬೆಂಗಳೂರು