ಇತ್ತೀಚಿನ ಸುದ್ದಿ

Sahitya sammelana : ಸಮ್ಮೇಳನದ ಭೋಜನವಿದು ವಿಚಿತ್ರ ಭಕ್ಷ್ಯಗಳಿವು – ಕನ್ನಡ ಸಾಹಿತ್ಯ ಸಮ್ಮೇಳನದ ಮೆನು ಹೇಗಿದೆ ಗೊತ್ತಾ?

ಇಂದಿನಿಂದ ಮೂರು ದಿನಗಳ ನಡೆಯುತ್ತಿರುವ ಕಾಲ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ ಸಿಕ್ಕಿದ್ದು, 1974 ಮತ್ತು 1994ರಲ್ಲಿ ಯಶಸ್ವಿಯಾಗಿ ಸಮ್ಮೇಳನವನ್ನು ನಡೆಸಿಕೊಟ್ಟ ‘ಸಕ್ಕರೆ ನಗರ’ ಈಗ ಮೂರನೇ ಬಾರಿಗೆ ನುಡಿಜಾತ್ರೆ ನಡೆಸುತ್ತಿದೆ.

ಮಂಡ್ಯದಲ್ಲಿ ಡಿ.20ರಿಂದ 22ರವರೆಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯದ ಹಲವೆಡೆಯಿಂದ ಕನ್ನಡಾಭಿಮಾನಿಗಳು ಆಗಮಿಸುತ್ತಿದ್ದು, ಬಾಡೂಟ ಕುರಿತ ಪರ-ವಿರೋಧದ ಚರ್ಚೆಗಳ ನಡುವೆಯೇ, ಮೂರು ದಿನ ಭರ್ಜರಿ ಊಟದ ಮೆನು ಸಿದ್ಧವಾಗಿದೆ. ಈ ಬಾರಿಯ ಸಮ್ಮೇಳನಕ್ಕೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಮಂಡ್ಯ ಶೈಲಿಯ ಭೋಜನಕ್ಕೆ ಒತ್ತು ನೀಡಲಾಗಿದೆ. ಸಮ್ಮೇಳನಕ್ಕೆ ಬರುವ ಕನ್ನಡಾಭಿಮಾನಿಗಳಿಗೆ ಶುಚಿ ರುಚಿಯಾದ ಪುಷ್ಕಳ ಭೋಜನ ಉಣಬಡಿಸಲು ಸಿದ್ಧತೆ ನಡೆದಿದೆ. ಒಂದು ದಿನಕ್ಕೆ ಒಂದು ಲಕ್ಷ ಜನರಿಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಮತ್ತು ರಾತ್ರಿ ಭೋಜನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈಗಾಗಲೇ ನಗರ ಹೊರವಲಯದ ಶ್ರೀನಿವಾಸಪುರ ಬಳಿ ನಿರ್ಮಾಣವಾಗುತ್ತಿರುವ ವೇದಿಕೆ ಸಮೀಪವೇ ಊಟ ವಿತರಣೆಗೂ ಕೌಂಟರ್‌ಗಳನ್ನು ನಿರ್ಮಿಸಲಾಗುತ್ತಿದೆ.ಮೂರು ದಿನಗಳ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಮೂರು ಹೊತ್ತಿಗೂ ಮೂರು ರೀತಿಯ ಸ್ವೀಟ್ ಗಳನ್ನು ಮಾಡಲಾಗುತ್ತಿದ್ದು, ಬೆಳಗ್ಗೆ ತಿಂಡಿಗೆ ಇಡ್ಲಿ, ವಡೆ, ಚಿತ್ರಾನ್ನ, ಕಡಲೆಬೇಳೆ ಹುಸುಳಿ, ಬಿಸಿಬೇಳೆ ಬಾತ್, ಪಲಾವ್, ಮೈಸೂರು ಪಾಕ್ ನ ವ್ಯವಸ್ಥೆ ಮಾಡಲಾಗಿದೆ.

ಇನ್ನು ಮಧ್ಯಾಹ್ನ ಊಟಕ್ಕೆ ರೊಟ್ಟಿ, ಚಟ್ನಿ ಪುಡಿ, ಪೂರಿ ಸಾಗು, ಅನ್ನ ಸಾಂಬಾರ್, ಸೇರಿದಂತೆ ಸೌತ್ ಇಂಡಿಯನ್ನ ಎಲ್ಲಾ ತರಹದ ವೈರೈಟಿಗಳಲ್ಲಿ ಮಾಡಲಾಗುತ್ತದೆ. ಇನ್ನು ರಾತ್ರಿಗೆ ಪೂರಿ, ಚಪಾತಿ, ಅಕ್ಕಿ ರೊಟ್ಟಿ, ಜೋಳದ ರೊಟ್ಟಿ, ವ್ಯವಸ್ಥೆ ಮಾಡಲಾಗುತ್ತದೆ.

ಸುಮಾರು 700 ಕ್ಕೂ ಹೆಚ್ಚು ಜನ ಅಡುಗೆ ಸಿಬ್ಬಂದಿಗಳಿದ್ದು, ಒಂದು ದಿನಕ್ಕೆ ಒಂದು ಲಕ್ಷ ಕಾಯಿ ಹೋಳಿಗೆ, ಒಂದು ಲಕ್ಷ ಬರ್ಫಿ, ಒಂದು ಲಕ್ಷ ಲಾಡು, ಒಂದು ಲಕ್ಷ ಗುಲಾಬ್ ಜಾಮೂನ್, ಒಂದು ಲಕ್ಷ ಮೈಸೂರು ಪಾಕ್, ಕ್ಯಾರೆಟ್‌ ಹಲ್ವ ಸೇರಿದಂತೆ ಇನ್ನಿತರ ಸ್ವೀಟ್ ಗಳ ವ್ಯವಸ್ಥೆ ಮಾಡಲಾಗಿದೆ.

ಈ ಬಾರಿ ಶುದ್ಧ ಸಸ್ಯಹಾರಕ್ಕೆ ಒತ್ತು ನೀಡಿದ್ದು, ಕೊನೆಯ ದಿನ ಅಂದರೆ ಡಿ.22 ರಂದು ಸುಮಾರು ಒಂದುವರೆ ಲಕ್ಷ ಜನರಿಗೆ ಮಂಡ್ಯದ ಫೇಮಸ್ ರಾಗಿ ಮುದ್ದೆ ಬಸ್ಸಾರು ವ್ಯವಸ್ಥೆ ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button