ನ.19 ರಂದು ಮೊದಲನೇ ವರ್ಷದ ಬಿ.ಫಾರ್ಮಸಿ ಪ್ರವೇಶ ಕಾರ್ಯಕ್ರಮ

ಚಾಮರಾಜನಗರ ನ್ಯೂಸ್ನ.19 : ರಂದು ಮೊದಲನೇ ವರ್ಷದ ಬಿ.ಫಾರ್ಮಸಿ ಪ್ರವೇಶ ಕಾರ್ಯಕ್ರಮ: ಡಾ.ಮಂಜುನಾಥ್.ಎಂ
ನ.19 ರಂದು ಮೊದಲನೇ ವರ್ಷದ ಬಿ. ಫಾರ್ಮಸಿ ಪ್ರವೇಶ ಕಾರ್ಯಕ್ರಮವು ಮನೋನಿಧಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಚಾಮರಾಜನಗರ ತಾಲೂಕಿನ ಈರನಕಟ್ಟೆ, ಮಾದಾಪುರದಲ್ಲಿ ನಡೆಯಲಿದೆ ಎಂದು ಮನೋ ನಿಧಿ ಕಾಲೇಜ್ ಆಫ್ ಫಾರ್ಮಸಿ ಸಂಸ್ಥೆಯ ಪ್ರಾಂಶುಪಾಲ ಡಾ.ಮಂಜುನಾಥ್.ಎಂ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಟ್ರಸ್ಟ್ ವತಿಯಿಂದ ಮೊದಲನೇ ವರ್ಷದ ಬಿ.ಫಾರ್ಮಸಿ ವಿದ್ಯಾರ್ಥಿಗಳಿಗೆ ಕಾರ್ಯಕ್ರಮವನ್ನು ಜಿಲ್ಲಾ ಔಷಧ ನಿಯಂತ್ರಣ ಇಲಾಖೆಯ ಹರೀಶ್ ಎಆರ್ ಉದ್ಘಾಟಿಸುವರು. ಗೌರವ ಅತಿಥಿಗಳಾಗಿ ಡಾ. ಸುನಿಲ್ ಎಸ್ ಚಿಪ್ಲೂಂಕರ್ ಆಗಮಿಸುವರು. ಪ್ರವೇಶ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಕಾಲೇಜಿನ ದ್ಯೇಯೋದ್ದೇಶಗಳು, ಸಂಪನ್ಮೂಲಗಳು ಮತ್ತು ಪರಿಸರ ಬಗ್ಗೆ ಪರಿಚಯಿಸುತ್ತದೆ ಅಲ್ಲದೆ ಈ ಕಾಲೇಜು ಚಾಮರಾಜನಗರದಲ್ಲೇ ಮೊದಲ ಬಾರಿಗೆ ಪ್ರಾರಂಭವಾಗುತ್ತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಸಿಬಿನ್ ಸಿ.ವರ್ಗಿಸ್ ಇತರರು ಉಪಸ್ಥಿತರಿದ್ದರು.
ವರದಿ: ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ