ಕಲಬುರಗಿ(kalburgi): ಮಕ್ಕಳು ಆಗಲಿಲ್ಲ ಅಂತಾ ಅದೇಷ್ಟೋ ಜನರು ಕಂಡ ಕಂಡ ದೇವರಿಗೆ ಹರಕೆ ಕಟ್ಟತ್ತಾರೆ. ಆದ್ರೆ ಆ ಕುಟುಂಬದಲ್ಲಿ ಮಕ್ಕಳ ಚಿಂತೆಯಿರಲಿಲ್ಲ , ಬದಲಾಗಿ ಗಂಡು ಮಗುವೇ(couple wanted son )ಬೇಕೆಂಬ ಹಠವಿತ್ತು. ಗಂಡು ಮಗು ಆಗುತ್ತೆ ಅಂತಾ ಅಂದುಕೊಂಡು ಐದು ಮಕ್ಕಳಿಗೆ ಜನ್ಮ (ಕೊಟ್ಟಿದ್ದರು. ಆದ್ರೆ ಪ್ರತಿ ಬಾರಿಯು ಕೂಡ ಹೆಣ್ಣು ಮಗು (5 daughter) ಆಗ್ತಿರೋದ್ರಿಂದ ಆ ಕುಟುಂಬದಲ್ಲಿ ಗಂಡು ಮಗುವಿನ ಚಿಂತೆ ಕಾರೋಕೆ ಮುಂದಾಗಿತ್ತು. ಗಂಡು ಮಗು ಹುಟ್ಟಲಿಲ್ಲ ಎಂಬ ಹತಾಷೆಯಲ್ಲಿ ಆ ತಾಯಿ ದುಡುಕಿನ ನಿರ್ಧಾರ ಬಂದು ಏನು ಅರಿಯ ಎರಡು ಕಂದಮ್ಮಗಳ ಜೊತೆಗೆ ತಾನು ಬಾರದ ಲೋಕಕ್ಕೆ ತೆರಳಿದ್ದಾಳೆ.
ಗಂಡು ಮಗು ಬೇಕೆಂದವರಿಗೆ ಹುಟ್ಟಿದ್ದು 5 ಹೆಣ್ಣು
ಮಗಳು ಮತ್ತು ಮೊಮ್ಮಕಳನ್ನ ಕಳೆದುಕೊಂಡು ಕಣ್ಣಿರು ಹಾಕುತ್ತಿರುವ ವೃದ್ಧ ಜೀವಗಳು. ಹೆಂಡತಿ-ಮಕ್ಕಳ ಸಾವಿನ ಸುದ್ದಿ ಅರಗಿಸಿಕೊಳ್ಳೊಕೆ ಆಗದೆ ಮೂರ್ಚೆ ಹೋಗಿರುವ ಪತಿ , ಇಂತಹ ದುಡುಕಿನ ನಿರ್ಧಾರಕ್ಕೆ ಕೈ ಹಾಕಬಾರದಿತ್ತು ಅಂತಾ ಮಾತಾಡಿಕೊಳ್ಳುತ್ತಿರುವ ಗ್ರಾಮಸ್ಥರು. ಇಂತಹದೊಂದು ಮನಕಲಕುವ ದೃಶ್ಯ ಕಂಡು ಬಂದಿರೋದು ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮ. ಮಾಡಿಯಾಳ ಗ್ರಾಮದ ಲಕ್ಷ್ಮಿ ಎಂಬುವರನ್ನು 14 ವರ್ಷಗಳ ಹಿಂದೆ ಅವರ ಸೋದರಮಾವ ಹಣಮಂತನಿಗೆ ಕೊಟ್ಟು ಮದುವೆ ಮಾಡಿದ್ದರು. ಮದುವೆಯಾದ ಬಳಿಕ ಲಕ್ಷ್ಮಿ ಮತ್ತು ಹಣಮಂತ ದಂಪತಿಗೆ ಒಂದರ ಹಿಂದೊಂದರಂತೆ ಐದು ಜನ ಹೆಣ್ಣು ಮಕ್ಕಳೇ ಆಗಿದ್ದವು. ಅದ್ರಲ್ಲಿ ಎರಡು ಮಕ್ಕಳು ಸಾವನ್ನಪ್ಪಿದ್ರೆ ಇನ್ನೂ ಮೂರು ಜನ ಹೆಣ್ಣು ಮಕ್ಕಳು ಬದುಕಿದ್ದವು. ಆದ್ರೆ ಲಕ್ಷ್ಮಿ ಮತ್ತು ಹಣಮಂತ ಇಬ್ಬರು ಕೂಡ ಗಂಡು ಮಗುವಿನ ನೀರಿಕ್ಷೆಯಲ್ಲಿದರು. ಹೆಣ್ಣು ಮಕ್ಕಳೆ ಆಗ್ತಿರೋದ್ರಿಂದ ಮಾನಸಿಕವಾಗಿ ಲಕ್ಷ್ಮಿ ಕುಗ್ಗಿ ಹೋಗಿದ್ದಳು.
ಕೊನೆ ಘಳಿಗೆಯಲ್ಲಿ ಒಂದು ಮಗು ಬಚಾವ್
ಇನ್ನೂ ಗಂಡು ಮಗುವಿನ ಕೊರಗಿನಲ್ಲಿದ್ದ ಲಕ್ಷ್ಮಿ ಬೆಳಗ್ಗೆ ತನ್ನ ಮೂರು ಜನ ಹೆಣ್ಣು ಮಕ್ಕಳಾದ ಈಶ್ವರಿ , ಸ್ವಾತಿ , ಕೀರ್ತಿ ಅನ್ನೋ ಮೂರು ಮಕ್ಕಳೊಂದಿಗೆ ಬಾವಿಗೆ ಹಾರಿದ್ದಾಳೆ. ಲಕ್ಷ್ಮಿ ಮೂರು ಮಕ್ಕಳೊಂದಿಗೆ ಬಾವಿಗೆ ಹಾರಿರೋದನ್ನ ಕಂಡು ಅಕ್ಕ ಪಕ್ಕದವ್ರು ತಕ್ಷಣವೇ ಬಾವಿಗೆ ಹಾರಿ ಪ್ರಾಣ ಉಳಿಸೋದಕ್ಕೆ ಮುಂದಾಗಿದ್ದಾರೆ. ಈಶ್ವರಿ ಅನ್ನೋ ಮಗುವನ್ನ ರಕ್ಷಣೆ ಮಾಡುವಷ್ಟರಲ್ಲಿ ತಾಯಿ ಲಕ್ಷ್ಮಿ , ಇನ್ನಿಬ್ಬರು ಮಕ್ಕಳಾದ ಸ್ವಾತಿ, ಕೀರ್ತಿ ಬಾವಿಯಲ್ಲೇ ಸಾವನ್ನಪ್ಪಿದ್ದಾರೆ.