ರಾಜ್ಯಸುದ್ದಿ

ಸಂಡೂರು ಉಪಚುನಾವಣೆ: ಜನಾರ್ದನ ರೆಡ್ಡಿ ಗಣಿಗಾರಿಕೆ ಪ್ರಕರಣ ಈಗ ಕಾಂಗ್ರೆಸ್ ಪಕ್ಷಕ್ಕೆ ಟ್ರಂಪ್ ಕಾರ್ಡ್‌!

ಸಂಡೂರು ಉಪಚುನಾವಣೆ: ಜನಾರ್ದನ ರೆಡ್ಡಿ ಗಣಿಗಾರಿಕೆ ಪ್ರಕರಣ ಈಗ ಕಾಂಗ್ರೆಸ್ ಪಕ್ಷಕ್ಕೆ ಟ್ರಂಪ್ ಕಾರ್ಡ್‌!

ಬಳ್ಳಾರಿ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ವಿಶೇಷವಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದರು ಹೀಗಾಗಿ ಹಲವು ವರ್ಷಗಳ ಕಾಲ ಬಳ್ಳಾರಿ ಜಿಲ್ಲೆ ಪ್ರವೇಶಿಸದಂತೆ ಕೋರ್ಟ್ ನಿಬರ್ಂಧ ವಿಧಿಸಿತ್ತು. ಈ ವಿಷಯವನ್ನೇ ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರದ ಸರಕಾಗಿ ಬಳಸಿಕೊಳ್ಳುತ್ತಿದೆ.

ಸಂಡೂರು ಉಪಚುನಾವಣೆಯ ಪ್ರಚಾರದ ವೇಳೆ ಪರಿಶಿಷ್ಟ ಪಂಗಡ ಕಲ್ಯಾಣ ಮಂಡಳಿ ನಿಧಿ ಹಣ ವರ್ಗಾವಣೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ. ಕಾಂಗ್ರೆಸ್ ಕೂಡ ಕೌಂಟರ್ ಕೊಡುತ್ತಿದ್ದು ಅಕ್ರಮ ಗಣಿಗಾರಿಕೆ ಪ್ರಕರಣವನ್ನು ತನ್ನ ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳುತ್ತಿದೆ. ಜನಾರ್ದನ ರೆಡ್ಡಿ ಬಿಜೆಪಿಗೆ ಸೇರ್ಪಡೆಯಾಗಿರುವುದು ಕೇಸರಿ ಪಕ್ಷವು ಭ್ರಷ್ಟರ ವಿರುದ್ಧ ಹೇಗೆ ಸಹಿಷ್ಣುತೆ ಹೊಂದಿದೆ ಎಂಬುದನ್ನು ತೋರಿ ಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪ್ರಚಾರದ ವೇಳೆ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರೂ, ಜನಾರ್ದನ ರೆಡ್ಡಿ ಬಿಜೆಪಿಗೆ ಮರಳಲು ಪಕ್ಷ ಅವಕಾಶ ಮಾಡಿಕೊಟ್ಟಿತು. ಸಂಡೂರು ಗಣಿಗಾರಿಕೆ ಪ್ರದೇಶದ ಮೇಲೆ ರೆಡ್ಡಿ ಮತ್ತೆ ಕಣ್ಣಿಟ್ಟಿದ್ದಾರೆ.

ಸಂಡೂರನ್ನು ರಕ್ಷಿಸಲು ಇಲ್ಲಿನ ಜನರು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಗೆಲ್ಲಿಸಬೇಕು ಎಂದರು.

ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ರೆಡ್ಡಿ ಸಂಡೂರಿನಲ್ಲಿ ಗಣಿಗಾರಿಕೆಯಲ್ಲಿ ಮಾತ್ರ ಆಸಕ್ತಿ ಹೊಂದಿದ್ದಾರೆಯೇ ಹೊರತು ಅದರ ಜನರ ಹಿತಾಸಕ್ತಿ ಕಾಪಾಡಲು ಅವರಿಗೆ ಆಸಕ್ತಿಯಿಲ್ಲ. ಸಂಡೂರು ಕಾಂಗ್ರೆಸ್‌ನ ಭದ್ರ ಕೋಟೆಯಾಗಿದ್ದು, ಲೋಕಸಭೆಗೆ ಆಯ್ಕೆಯಾಗಿರುವ ಇ ತುಕಾರಾಂ ಅವರ ಪತ್ನಿ ಅನ್ನಪೂರ್ಣ ತುಕಾರಾಂ ಅವರು ಗೆಲ್ಲುವುದು ಖಚಿತ ಎಂದರು. ಎಸ್‌ಟಿ ಬೋರ್ಡ್ ಹಗರಣದ ವಿಷಯವನ್ನು ಪ್ರಸ್ತಾಪಿಸುತ್ತಿರವುದ ರಿಂದ ಕಾಂಗ್ರೆಸ್ ಪಕ್ಷ ರೆಡ್ಡಿ ಮೇಲೆ ದಾಳಿ ನಡೆಸುತ್ತಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ವರದಿ : C ಕೊಟ್ರೇಶ್ tv8kannada ಬಳ್ಳಾರಿ

Related Articles

Leave a Reply

Your email address will not be published. Required fields are marked *

Back to top button