ಬಿಗ್ ಬಾಸ್ ಮನ್ತೆಯಲ್ಲಿ ತಮಗೆ ತಾವೇಪೂಜೆ ಮಾಡಿಕೊಂಡು, ಟ್ರೋಲ್ ಆದ ಚೈತ್ರಾ ಕುಂದಾಪುರ!

ಪೂಜೆ ಮಾಡಿಕೊಂಡು, ಟ್ರೋಲ್ ಆದ ಚೈತ್ರಾ ಕುಂದಾಪುರ!
ಬಿಜೆಪಿ, ಹಿಂದೂ ಪರ ಫೈರ್ ಬ್ರಾಂಡ್ ಭಾಷಣ- ಕಾರ್ತಿ ಚೈತ್ರಾ ಕುಂದಾಪುರ ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಸ್ಪರ್ಧಿಸುತ್ತಿದ್ದಾರೆ. ‘ಬಿಗ್ ಬಾಸ್’ ಮನೆಯಲ್ಲಿ ಆಗಾಗ ಧ್ಯಾನ, ಪೂಜೆ ಮಾಡುವ ಚೈತ್ರಾ ಕುಂದಾಪುರ ಬುಧವಾರದ ಸಂಚಿಕೆಯಲ್ಲಿ (ನವೆಂಬರ್ 6) ಎಲ್ಲರ ಕಣ್ಣರಳಿಸಿದ್ದಾರೆ.
‘ಬಿಗ್ ಬಾಸ್’ ಮನೆಯಲ್ಲಿರುವ ದೇವಿಯ ಪಕ್ಕದಲ್ಲಿ ನಿಂತು, ಕನ್ನಡಿ ನೋಡಿಕೊಂಡು, ಗಂಟೆ ಬಾರಿಸುತ್ತಾ, ತಮಗೆ ತಾವೇ ಊದುಬತ್ತಿ ಬೆಳಗಿಕೊಂಡು ಪೂಜೆ ಮಾಡಿಕೊಂಡಿದ್ದಾರೆ ಚೈತ್ರಾ ಕುಂದಾಪುರ. ಇದನ್ನ ಕಂಡ ಶಿಶಿರ್ ಶಾಸ್ತ್ರಿ ಅಕ್ಷರಶಃ ನಿಬ್ಬೆರಗಾಗಿದ್ದಾರೆ.
ಶಿಶಿರ್ ಶಾಸ್ತ್ರಿ ಮಾತ್ರವಲ್ಲ.. ಚೈತ್ರಾ ಕುಂದಾಪುರ ತಮಗೆ ತಾವೇ ಪೂಜೆ ಮಾಡಿಕೊಂಡಿದ್ದನ್ನ ಕಂಡು ನೆಟ್ಟಿಗರಿಗೂ ಆಶ್ಚರ್ಯವಾಗಿದೆ. “ಇದು ಯಾವ ರೀತಿಯ ಪೂಜೆ?”, “ರಿಯಲ್ ಸ್ಟಾರ್ ಉಪೇಂದ್ರ ಅವರಿಂದ ಚೈತ್ರಾ ಕುಂದಾಪುರ ಸ್ಫೂರ್ತಿ ಪಡೆದ್ರಾ?”, “ಐ ಆಮ್ ಗಾಡ್, ಗಾಡ್ ಈಸ್ ಗ್ರೇಟ್”, “ಲೇಡಿ ಉಪೇಂದ್ರ” ಅಂತೆಲ್ಲಾ ನೆಟ್ಟಿಗರು ಚೈತ್ರಾ ಕುಂದಾಪುರ ಅವರನ್ನ ಟ್ರೋಲ್ ಮಾಡುತ್ತಿದ್ದಾರೆ.
ದೇವಿ ಮೇಲೆ ಅಪಾರವಾದ ನಂಬಿಕೆ ಇದೆ
ಚೈತ್ರಾ ಕುಂದಾಪುರ ದೈವ ಭಕ್ತಿ. ಅದರಲ್ಲೂ ದೇವಿ ಮೇಲೆ ಚೈತ್ರಾ ಕುಂದಾಪುರಗೆ ಅತೀವ ನಂಬಿಕೆ ಇದೆ. ಅಸಲಿಗೆ, ‘ಬಿಗ್ ಬಾಸ್’ ಕಡೆಯಿಂದ ತಮಗೆ ಕರೆ ಬಂದಾಗ.. ತಮ್ಮ ಮನೆಯಲ್ಲಿನ ದೇವಿ ಮೇಲೆ ಬೆಳಕು ಬಿತ್ತಂತೆ. ಅದನ್ನ ಕಂಡು ದೇವಿಯೇ ಸೂಚನೆ ಕೊಟ್ಟಿದ್ದಾಳೆ ಅಂತೇಳಿ ‘ಬಿಗ್ ಬಾಸ್’ ಕಾರ್ಯಕ್ರಮಕ್ಕೆ ಬರಲು ಚೈತ್ರಾ ಕುಂದಾಪುರ ಒಪ್ಪಿಕೊಂಡರಂತೆ.
ಇನ್ನೂ ನವರಾತ್ರಿ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಉಪವಾಸ ಮಾಡುತ್ತಿದ್ದರಂತೆ. ಆದರೆ, ಕಳೆದ ವರ್ಷ ಬಿಜೆಪಿ
ಟಿಕೆಟ್ ವಂಚನೆ ಪ್ರಕರಣದಲ್ಲಿ ಸಿಲುಕಿದ್ದ ಚೈತ್ರಾ ಕುಂದಾಪುರ ಜೈಲು ಸೇರಿದ್ದರು. ಆಗ, ಉಪವಾಸ ಮಾಡಲಾಗದೆ ‘ನಾನು ಎಲ್ಲವನ್ನೂ ಕಳ್ಕೊಂಡೆ. ನಾನು ನಿಜವಾಗಿಯೂ ತಪ್ಪು ಮಾಡಿಲ್ಲ ಅಂತ ನಿನಗೆ ಗೊತ್ತಿದ್ದರೆ, ಮತ್ತೆ ನನಗೆ ವೇದಿಕೆ ಬೇಕು’ ಅಂತ ದೇವಿ ಬಳಿ ಚೈತ್ರಾ ಕುಂದಾಪುರ ಪ್ರಾರ್ಥಿಸಿದ್ದರಂತೆ.
ಇದಾದ ಒಂದು ವರ್ಷಕ್ಕೆ.. ಅಂದ್ರೆ ಈ ವರ್ಷದ ನವರಾತ್ರಿ ಹಬ್ಬವನ್ನ ‘ಬಿಗ್ ಬಾಸ್’ ಮನೆಯಲ್ಲಿ ಚೈತ್ರಾ ಕುಂದಾಪುರ ಆಚಿ- ‘ರಿಸಿದರು. “ನಾನು ಅಂದುಕೊಂಡಿದ್ದು ಒಂದೈನೂರು – ಸಾವಿರ ಜನರ ಮುಂದೆ ಭಾಷಣ ಮಾಡಬಹುದು ಅಂತ. ಆದರೆ, ತಾಯಿ ಇಷ್ಟುದೊಡ್ಡ ವೇದಿಕೆ ಕೊಡ್ತಾಳೆ ಅಂತ ಅಂದುಕೊಂಡಿರಲಿಲ್ಲ” ಎಂದು ತಾವು ‘ಬಿಗ್ ಬಾಸ್’ ಮನೆಗೆ ಬಂದಿದ್ದರ ಬಗ್ಗೆ ಚೈತ್ರಾ ಕುಂದಾಪುರ ಈ ಹಿಂದೆ ಸಂತಸ ವ್ಯಕ್ತಪಡಿಸಿದ್ದರು.
ಕ್ಯಾಪ್ಟನ್ ರೇಸ್ನಿಂದ ಹೊರಬಂದ ಚೈತ್ರಾ ಕುಂದಾಪುರ ಈ ವಾರ ಕ್ಯಾಪ್ಟನ್ ರೇಸ್ನಿಂದ ಚೈತ್ರಾ ಕುಂದಾಪುರ ಹೊರಗೆ ಬಂದಿದ್ದಾರೆ. ಕ್ಯಾಪ್ಟನ್ ಹನುಮಂತ ಲಮಾಣಿ ನಿರ್ಧಾರದ ಪರಿಣಾಮ, ಕ್ಯಾಪ್ಟನ್ ರೇಸ್ನಿಂದ ಚೈತ್ರಾ ಕುಂದಾಪುರ ಹೊರಗುಳಿದಿದ್ದಾರೆ. ಈ ವಾರ ಯಾರು ಕ್ಯಾಪ್ಟನ್ ಆಗ್ತಾರೆ ಅನ್ನೋದು ಸದ್ಯಕ್ಕೆ ಕುತೂಹಲ.
ವರದಿ : ಪುಣ್ಯ ಗೌಡ ಫಿಲಂ ಬ್ಯೂರೋ ಬೆಂಗಳೂರು