
ಸರಗೂರು ನ 07 : ನೂತನ ತಾಲೂಕು ಆಗಿ 10 ವರ್ಷಗಳ ಕಾಲ ಕಳೆದು ಬರುತ್ತಿದ್ದೆ. ಜನಸಂಖ್ಯೆ ಆಧಾರದ ಮೇಲೆ ಅನುಗುಣವಾಗಿ ಪಟ್ಟಣ ಪಂಚಾಯಿತಿಯಿಂದ ಸರಗೂರು ಪುರಸಭೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಎಂದು ಕಾಂಗ್ರೆಸ್ ಪಕ್ಷದ ಟೌನ್ ಅಧ್ಯಕ್ಷ ಎಸ್ ಎನ್ ನಾಗರಾಜು ಒತ್ತಾಯಿಸಿದರು.
ನಮ್ಮ ಜಿಲ್ಲಾವಾರು ಮುಖ್ಯಮಂತ್ರಿ ಸಿದ್ದರಾಮಯ್ಯ.ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಎಚ್ ಸಿ ಮಹದೇವಪ್ಪ ರವರು ನಿಮ್ಮ ಅವಧಿಯಲ್ಲಿ ತಾಲೂಕು ಘೋಷಣೆ ಮಾಡಿದ್ದಿರಿ. ಅದರಂತೆ ಇವಾಗಲು ಸರಗೂರು ಪುರಸಭೆ ಎಂದು ಘೋಷಣೆ ಮಾಡಿ, ಕಾಂಗ್ರೇಸ್ ಸರ್ಕಾರ ಹೆಸರು ಹಾಗೂ ನಿಮ್ಮ ಹೆಸರು ಎಲ್ಲರೂ ಮನಸ್ಸಿನಲ್ಲಿ ಇರುತ್ತದೆ ಎಂದರು.
ಈ ವಿಚಾರದ ಬಗ್ಗೆ ಶಾಸಕರಾದ ಅನೀಲ್ ಚಿಕ್ಕಮಾದು ರವರು ಚಳಿಗಾಲ ಅಧಿವೇಶನದಲ್ಲಿ ಮಾತನಾಡುತ್ತಾರೆ ಎಂದು ವಿಶ್ವಾಸ ಮತ್ತು ನಂಬಿಕೆ ಇದೆ ಎಂದರು.
ಪಟ್ಟಣ ಪಂಚಾಯಿತಿಯಲ್ಲಿ 12 ವಾರ್ಡ್ ಗಳು ಇದ್ದು.ಪಟ್ಟಣ ಜನಸಂಖ್ಯೆ 15 ರಿಂದ 20 ಸಾವಿರ ಜನಸಂಖ್ಯೆ ಹೊಂದಿದ್ದು.ಅದರೆ ಇತ್ತೀಚೆಗೆ ದಿನಗಳಲ್ಲಿ ಪಟ್ಟಣ ಅಂಗಡಿ ಮುಂಗಟ್ಟುಗಳ ಹಾಗೂ ಜನಸಂಖ್ಯೆ ಹೆಚ್ಚಳವಾಗುತ್ತಿದೆ.ಪಟ್ಟಣ ಪಕ್ಕದಲ್ಲೇ ಕೋತ್ತೇಗಾಲ.ಹಂಚೀಪುರ.ಗ್ರಾಮ ಪಂಚಾಯಿತಿ ಗಳು ಇದ್ದು ಅ ಗ್ರಾಮಗಳನ್ನು ಪಟ್ಟಣ ಪಂಚಾಯಿತಿ ಗೆ ಒಳಗೊಂಡರೆ ಪುರಸಭೆ ಮಾಡಬಾಹುದು ಎಂದರು.
ಕಳೆದ 8 ವರ್ಷ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ದಿ ಮಾಜಿ ಸಂಸದ ಆರ್ ಧ್ರುವನಾರಾಯಣ್.ದಿ ಮಾಜಿ ಶಾಸಕ ಎಸ್ ಚಿಕ್ಕಮಾದು ರವರು 2015 ರಿಂದ 2016 ಸಾಲಿನಲ್ಲಿ ನೂತನ ತಾಲೂಕು ಎಂದು ಘೋಷಣೆ ಮಾಡಿದ್ದರು.ಪಟ್ಟಣ ಅಭಿವೃದ್ಧಿ ಜೊತೆಯಲ್ಲಿ ದೊಡ್ಡದಾಗಿ ಬೆಳೆಯುವುದರಿಂದ ಶಾಸಕ ಅನಿಲ್ ಚಿಕ್ಕಮಾದು ರವರು ಸರಗೂರು ತಾಲೂಕಿನ ಬಗ್ಗೆ ಹೆಚ್ಚು ಗಮನ ಕೊಡುವುದರಿಂದ ಎಲ್ಲಾ ಕಚೇರಿಗಳು ಒಂದು ಒಂದಾಗಿ ಪಟ್ಟಣಕ್ಕೆ ಬರುತ್ತಿದ್ದೇವೆ.ಪಟ್ಟಣ ಪಂಚಾಯಿತಿ ದೊಡ್ಡದಾಗಿ ಬೆಳೆಯುವುತ್ತಾ ಬರುತ್ತಿದೆ.ಸುಮಾರು ವರ್ಷಗಳಿಂದ ಗ್ರಾಮ ಪಂಚಾಯಿತಿ ಯಾಗಿ ಬರುತ್ತಿದ್ದು.ನಂತರ ಮತ್ತೆ ಪಟ್ಟಣ ಪಂಚಾಯಿತಿ ಯಾಗಿ ಕಾರ್ಯನಿರ್ವಹಿಸುತ್ತದೆ.ಇನ್ನೂ ಅಭಿವೃದ್ಧಿ ಕೆಲಸವನ್ನು ಶಾಸಕರು ಮಾಡಿಕೊಂಡು ಬರುತ್ತಿದ್ದಾರೆ.ತಾಲೂಕಿನ ಬಗ್ಗೆ ಕಡೆಗೆ ಗಮನ ಕೊಟ್ಟು ಪಟ್ಟಣ ಪಂಚಾಯಿತಿಯಿಂದ ಪುರಸಭೆಯನ್ನು ಮಾಡುತ್ತಾರೆ ಎಂದು ಭರವಸೆ ಹಿಟ್ಟು ಕೊಂಡಿದ್ದೇವೆ ಎಂದು ತಾಲೂಕಿನ ಪ್ರಗತಿಪರ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳು ಒತ್ತಾಯಿಸಿದರು.
ವರದಿ : ಹಾದನೂರು ಚಂದ್ರ.tv8kannada