ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

ಮೈಸೂರು: (ನಂಜನಗೂಡು ) ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಾರ್ಯ ಶ್ರೀ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತಿದೆ.
ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಹೋಬಳಿ ವ್ಯಾಪ್ತಿಯ ಕಾರ್ಯ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಯವರ ಪಲ್ಲಕ್ಕಿ ಉತ್ಸವಕ್ಕೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ವಾಟಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಚಾಲನೆ ನೀಡಿದರು.
ಮಧ್ಯಾಹ್ನ ಜರುಗುವ ಐತಿಹಾಸಿಕ ರಥೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷರಾದ ಕಾ.ಪು ಸಿದ್ದವೀರಪ್ಪ, ಗ್ರಾಪಂ ಸದಸ್ಯರಾದ ರಾಜೇಶ್ವರಿ ಗುರುಸ್ವಾಮಿ, ಸರೋಜಮ್ಮ ಸಿದ್ದಯ್ಯಸ್ವಾಮಿ, ಪಾರ್ವತಮ್ಮ,
ಜೋಗನಾಯಕ, ಶೋಭಾ, ಮಹದೇವಮ್ಮ ಗ್ರಾಮದ ಯಜಮಾನರಾದ ಪಟೇಲ್ ಸಿದ್ದರಾಜು, ಕುಮಾರ್, ಶಿವಲಿಂಗಯ್ಯ, ಮರಿಸ್ವಾಮಿನಾಯಕ, ರವಿಕುಮಾರ್, ಸಿದ್ದನಾಯಕ, ಮುಖಂಡರಾದ ಸಿದ್ದಯ್ಯಸ್ವಾಮಿ, ಜಯಶಂಕರ್, ಮಾದೇಗೌಡ, ಕಾರ್ಯ ಬಸವಣ್ಣ, ಗುರುಸ್ವಾಮಿ , ಯೋಗೇಂದ್ರ, ಚೇತು, ಸೋಮಣ್ಣ ನಾಯಕ, ಕೆಂಪರಾಜು, ಪುಟ್ಟಬುದ್ದಿ, ಚಿನ್ನಸ್ವಾಮಿ, ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.