ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಮಹಾಕಾಳಿ ವಿಗ್ರಹ ಲೋಕಾರ್ಪಣೆ

ಹೊಸಕೋಟೆ
ಹೊಸಕೋಟೆ ತಾಲ್ಲೂಕಿನ ನಗರೇನಹಳ್ಳಿ ಗ್ರಾಮದ ಶ್ರೀ ಚಕ್ರಚೌಡೇಶ್ವರಿ ದೇವಸ್ಥಾನದಲ್ಲಿ 3 ದಿನಗಳ ಕಾಲ ರಾಜಗೋಪುರ ಹಾಗೂ 31 ಅಡಿ ಮಹಾಕಾಳಿ ವಿಗ್ರಹ ಲೋಕಾರ್ಪಣೆ ನಡೆಯಲಿದೆ. ದೇವಾಲಯದ ಶ್ರೀ ಮಹಾಗಣಪತಿ, ನಾಗದೇವತೆಗಳ ಮತ್ತು ಶ್ರೀ ಚಕ್ರಚೌಡೇಶ್ವರಿ ಹಾಗೂ ಶ್ರೀ ಮುನೇಶ್ವರಸ್ವಾಮಿ ಸಮೇತ ಮಹೇಶ್ವರಮ್ಮ, ಮಾರಮ್ಮ, ಕರಗದಮ್ಮ, ಸಪ್ತಮಾತೃಕ ದೇವಾಲಯದ ರಾಜಗೋಪುರ ಮತ್ತು 31 ಅಡಿಯ ಮಹಾಕಾಳಿ ವಿಗ್ರಹ ಪ್ರತಿಷ್ಠಾಪನ ಮಹಾ ಕುಂಬಾಭಿಕ್ಷೇಕ ಮಹೋತ್ಸವವು ದಿನಾಂಕ 08-11-2024ನೇ ಶುಕ್ರವಾರದಿಂದ ದಿನಾಂಕ 10-11-2024ನೇ ಭಾನುವಾರದವರೆಗೆ 3 ದಿನಗಳ ಕಾಲ ನಡೆಯಲಿದೆ. ವಿಶೇಷವಾಗಿ 10-11-2024ನೇ ಭಾನುವಾರ ಬೆಳಿಗ್ಗೆ 8 ಗಂಟೆಗೆ ಉಚಿತ ಸಾಮೂಹಿಕ ವಿವಾಹಗಳು ನಡೆಯಲಿದೆ.
ಈ ಕಾರ‍್ಯಕ್ರಮಕ್ಕೆ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದಣಾಥ ಸ್ವಾಮೀಜಿ, ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ, ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ಸ್ವಾಮೀಜಿ, ಪ್ರತ್ಯಂಗಿರಾ ದೇವಿಯ ಆರಾಧಕರಾದ ಡಾ|| ಮಹರ್ಷಿ ಗುರೂಜಿ ಅವರು ದಿವ್ಯ ಸಾನಿಧ್ಯವಹಿಸಲಿದ್ದಾರೆ.https://youtu.be/sWuWtzNkqUY?si=3ZndWOT8kTV4qQWV
3 ದಿನಗಳ ದೇವಾಲಯದಲ್ಲಿ ಭಕ್ತಾಧಿಗಳ ಸಮ್ಮುಖದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು ಎಲ್ಲಾ ಭಕ್ತಾಧಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ದೇವಾಲಯದ ಪ್ರಧಾನ ಅರ್ಚಕರಾದ ವಿಜಯ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.