ಲೋಕಕಲ್ಯಾಣಾರ್ಥವಾಗಿ ಅಭಯ ಸೇವಾ ಫೌಂಡೇಷನ್ ವತಿಯಿಂದ ಸೇವಾ ಸಂಕಲ್ಪ

ಬೆಂಗಳೂರು: ಅಭಯ ಸೇವಾ ಫೌಂಡೇಷನ್ (ರಿ)ವತಿಯಿಂದ ಲೋಕಕಲ್ಯಾಣಾರ್ಥಕ್ಕಾಗಿ ಸೇವಾ ಸಂಕಲ್ಪ ಬನ್ನಿ ಭರವಸೆಯ ನಾಳೆಗೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ದಿನಾಂಕ 20-10-2024ರ ಭಾನುವಾರ ಬೆಳಗ್ಗೆ 6-30 ರಿಂದ ರಾತ್ರಿ 10-30ರವರಗೆ ರಾಜಾಜಿನಗರ ಶ್ರೀರಾಮಮಂದಿರ ಆಟದ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಗಣಪತಿ ಪೂಜೆ, ನೆತ್ತರ ನೆರವು, ರಕ್ತದಾನ ಶಿಬಿರ, ಸಂಕಲ್ಪ ಜಾಥ ಹಾಗೂ ಸೇವಾ ಸಂಕಲ್ಪ ಉದ್ಘಾಟನೆ, ಮಕ್ಕಳಿಗೆ ಕಲಿಕಾ ಸಾಮಾಗ್ರಿ ಮತ್ತು ಫಲಾನುಭವಿಗಳಿಗೆ ಬೇಡ್ ಶಿಟ್ ನೆರವು, ಹುಲಿವೇಷ ಕುಣಿತ, ಪ್ರಖ್ಯಾತ ಗಾಯಕರಿಂದ ಗಾನ ಗಾಯನ, ವಿವಿಧ ತಂಡಗಳಿಂದ ಭಜನೆ ಸುಮಗಂಲಿಯರಿಂದ ದೀಪ ನಮಸ್ಕಾರ, ಶ್ರೀ ಮೆಕ್ಕೆಕಟ್ಟು ಮೇಳದವರಿಂದ ಚಕ್ರಚಂಡಿಕೆ ಯಕ್ಷಗಾನ , ಉಚಿತ ಆರೋಗ್ಯ ತಪಾಸಣೆ ಶಿಬಿರ, ಸಿಂಹವಾಹಿನಿ ನೃತ್ಯರೂಪಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ವೇಳೆ ಮಾತನಾಡಿದ ಅಭಯ ಸೇವಾ ಫೌಂಡೇಷನ್ ಸಂಸ್ಥಾಪಕರಾದ ಉಮೇಶ್ ಶೆಟ್ಟಿ ಎಂ.ಬಿ.ರವರು ಬಡವರಾಗಿ ಹುಟ್ಟಿರಬಹುದು ಆದರೆ ಬಡವರಾಗಿ ಜೀವನ ಸಾಗಿಸಬಾರದು, ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೆ ಸಹಾಯ ಸಿಗಬೇಕು ಎಂಬ ಆಶಯದಿಂದ ಅಭಯ ಸೇವಾ ಫೌಂಡೇಷನ್ ಅನ್ನು ಆರಂಭಿಸಲಾಗಿದೆ.
ಭಾನುವಾರ ಶ್ರೀರಾಮಮಂದಿರ ಆಟದ ಮೈದಾನದಲ್ಲಿ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ಪರಮಪೂಜ್ಯ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿರವರ ದಿವ್ಯಸಾನಿಧ್ಯದೊಂದಿಗೆ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ಎಂ.ಬಿ.ಉಮೇಶ್ ಶೆಟ್ಟಿ ಅವರು ಅಧ್ಯಕ್ಷತೆ, ಮುಖ್ಯ ಅತಿಥಿಗಳಾಗಿ ಡಾ||ಪದ್ಮನಿ ಪ್ರಸಾದ್, ಶ್ರೀ ಕೈಲಾಸ ವೈಕುಂಠ ಮಹಾಕ್ಷೇತ್ರ ಅಧ್ಯಕ್ಷರಾದ ಆರ್.ವಿ.ಹರೀಶ್, ಹಿರಿಯ ವೈದ್ಯರಾದ ಡಾ.ಅಂಜನಪ್ಪರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.

ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದೆ. ಅವಧೂತ ಶ್ರೀ ಶ್ರೀ ಶ್ರೀ ವಿನಯ್ ಗುರೂಜಿರವರ ದಿವ್ಯ ಉಪಸ್ಥಿತಿ, ಎಂ.ಆರ್.ಜಿ.ಗ್ರೂಪ್ ಸಂಸ್ಥಾಪಕ ಪ್ರಕಾಶ್ ಶೆಟ್ಟಿ, ಚಲನಚಿತ್ರ ನಟ ಉಪೇಂದ್ರ, ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರುಗಳಾದ ಎಸ್.ಸುರೇಶ್ ಕುಮಾರ್, ಗುರುರಾಜ್ ಗಂಟಿಹೊಳೆ, ಯುನಿವರ್ಸಲ್ ಗ್ರೂಪ್ ಆಫ್ ಇನ್ಸ್ ಟ್ಯೂಷನ್ ವ್ಯವಸ್ಥಾಪಕ ನಿರ್ದೇಶಕ ಆರ್.ಉಪೇಂದ್ರಶೆಟ್ಟಿ, ಡಿ.ಸಿ.ಪಿ ಸೈಮುಲ್ಲಾ ಅದಾಲತ್, ಸಾಮಾಜಿಕ ಕಾರ್ಯಕರ್ತೆ ತೇಜಸ್ವಿನಿ ಅನಂತ್ ಕುಮಾರ್, ನಿವೃತ್ತ ಕರ್ನಲ್ ಪಿ.ವಿ.ಹರಿ, ವಿಶ್ವ ಹಿಂದೂ ಪರಿಷತ್ತು ಪ್ರಾಂತ್ಯ ಕಾರ್ಯದರ್ಶಿಗಳಾದ ಜಗನ್ನಾಥ ಶಾಸ್ತ್ರಿರವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಮಾಜದಲ್ಲಿ ಸಾಧನೆ ಮಾಡಿದ ಸಾಂಸ್ಕೃತಿಕ ಚಿಂತಕರಾದ ಡಾ||ದೀಪಕ್ ಶೆಟ್ಟಿ ಬಾರ್ಕೂರು, ರಿಪಬ್ಲಿಕ್ ಕನ್ನಡ ಉಪಸಂಪಾದಕರಾದ ಜಯಪ್ರಕಾಶ್ ಶೆಟ್ಟಿ ಉಪ್ಪಳ ಮತ್ತು ಸಮಾಜ ಸೇವಕರಾದ ರವಿ ಕಟಪಾಡಿರವರಿಗೆ ಸನ್ಮಾನಿಸಲಾಗುವುದು.
ಸಮಾಜ ನನಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು. ಆದ್ದರಿಂದ ಅಭಯ ಸೇವಾ ಫೌಂಡೇಷನ್ ವತಿಯಿಂದ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ವರದಿ : ಪೂರ್ಣಿಮಾ ಪವಾರ್, tv8 ನ್ಯೂಸ್ ಕನ್ನಡ, ಬೆಂಗಳೂರು