ಕ್ರೈಂ

ನಾಳೆ ನಟ ದರ್ಶನ್ ಅರ್ಜಿ ವಿಚಾರಣೆ ಸಿಗುತ್ತಾ ಜಾಮೀನು?

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ ಮೂರು ತಿಂಗಳಿನಿಂದ ಜೈಲು ಸೆರೆವಾಸ ಅನುಭವಿಸುತ್ತಿರುವ ಕನ್ನಡ ಚಿತ್ರರಂಗದ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆದಿದೆ.

ಇನ್ನು ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಅವರು ನ್ಯಾಯ ಮಂಡಿಸಿದ್ದು, ಆರೋಪಿ ದರ್ಶನ್ ಅವರಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ತಕ್ಷಣ ಅವರಿಗೆ ತುರ್ತು ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ ಹಾಗಾಗಿ ದರ್ಶನ್ ಅವರಿಗೆ ಜಾಮೀನು ಮಂಜೂರು ಮಾಡಿ ಎಂದು ವಾದ ಮಂಡಿಸಿದ್ದಾರೆ.

ಆದರೆ ಎಸ್‌ಪಿಪಿ ಅವರು ದರ್ಶನ್ ಜಾಮೀನು ಅರ್ಜಿಗೆ ಕೆಲ ತಕರಾರುಗಳನ್ನು ಎತ್ತಿದ್ದಾರೆ. ಇಬ್ಬರ ವಾದವನ್ನು ಆಲಿಸಿದ ಹೈಕೋರ್ಟ್ ನ್ಯಾಯಾಧೀಶರು ಆದೇಶವನ್ನು ಅ. 30 ಕ್ಕೆ ಕಾಯ್ದಿರಿಸಿದ್ದಾರೆ.

ಕೆಲವು ಹಳೆಯ ಪ್ರಕರಣಗಳು ಹಾಗೂ ಸುಪ್ರೀಂಕೋರ್ಟ್‌ ಕೆಲ ಆದೇಶಗಳನ್ನು ಸಹ ಉಲ್ಲೇಖ ಮಾಡಿದ ಸಿವಿ ನಾಗೇಶ್ ಅವರು, ‘ಆರೋಗ್ಯ ಪ್ರತಿಯೊಬ್ಬರ ಹಕ್ಕು. ಅವರು ಎಂಥಹಾ ಕಠಿಣ ಪ್ರಕರಣದಲ್ಲಿ ಸಿಲುಕಿದ್ದರೂ ಸಹ ಮೆರಿಟ್ ಗಳನ್ನು ನೋಡದೆ ಜಾಮೀನು ನೀಡಬೇಕಾಗುತ್ತದೆ. ಈ ಹಿಂದೆ ಇಂಥಹಾ ಹಲವು ಪ್ರಕರಣಗಳಲ್ಲಿ ಜಾಮೀನು ನೀಡಲಾಗಿದೆ ಎಂದರು.
ಕೊನೆಗೂ ಬಯಲಾಯಿತು ಜೈಲಲ್ಲಿ ದರ್ಶನ್ ಗೆ ಫೋನ್ ಕೊಟ್ಟವರು ಯಾರೆಂದು!

ಆದರೆ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ ಎಸ್‌ ಪಿಪಿ ಪ್ರಸನ್ನ ಕುಮಾರ್, ‘ರೋಗಿಯ (ದರ್ಶನ್) ತಪಾಸಣೆ ಮಾಡಿರುವ ವೈದ್ಯರು ಮುಂದೊಮ್ಮೆ ಸಮಸ್ಯೆ ಆಗಬಹುದು ಎಂದಿದ್ದಾರೆ, ಅಲ್ಲದೆ ಹಿಂದಿನ ವರದಿಯಲ್ಲಿ ಅಷ್ಟೇನೂ ಸಮಸ್ಯೆ ಇಲ್ಲ ಎಂದಿದ್ದರು, ಈ ಹಿಂದೆ ಹಿಪ್ ಜಾಯಿಂಟ್ ಸಮಸ್ಯೆ ಇತ್ತು ಅದನ್ನು ಸರಿಪಡಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ’

ಕೊನೆಗೂ ಬಯಲಾಯಿತು ಜೈಲಲ್ಲಿ ದರ್ಶನ್ ಗೆ ಫೋನ್ ಕೊಟ್ಟವರು ಯಾರೆಂದು!

ಆದರೆ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ ಎಸ್ ಪಿಪಿ ಪ್ರಸನ್ನ ಕುಮಾ‌ರ್, ‘ರೋಗಿಯ (ದರ್ಶನ್) ತಪಾಸಣೆ ಮಾಡಿರುವ ವೈದ್ಯರು ಮುಂದೊಮ್ಮೆ ಸಮಸ್ಯೆ ಆಗಬಹುದು ಎಂದಿದ್ದಾರೆ, ಅಲ್ಲದೆ ಹಿಂದಿನ ವರದಿಯಲ್ಲಿ ಅಷ್ಟೇನೂ ಸಮಸ್ಯೆ ಇಲ್ಲ ಎಂದಿದ್ದರು, ಈ ಹಿಂದೆ ಹಿಪ್ ಜಾಯಿಂಟ್ ಸಮಸ್ಯೆ ಇತ್ತು ಅದನ್ನು ಸರಿಪಡಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ’ ಎಂದರು. ಆದರೆ ಅದಕ್ಕೆ ಸ್ವತಃ ಜಡ್ಜ್ ಪ್ರಶ್ನೆ ಕೇಳಿ, ‘ಮುಂದೆ ಆದಾಗ ಅದನ್ನು ಸರಿ ಮಾಡಬಹುದೇ?, ವಿಚಾರಣಾಧೀನ ಖೈದಿಗೂ ಉತ್ತಮ ಆರೋಗ್ಯದ ಹಕ್ಕಿದೆ’ ಎಂದರು. ‘ಈ ಹಿಂದಿನ ವರದಿಯಲ್ಲಿ ಹಾಗಿದೆ, ಆದರೆ ಜೈಲು ಸೇರಿದ ಮೇಲಿನ ವರದಿಯಲ್ಲಿ ಅನಾರೋಗ್ಯ ಎಂದಿದೆಯಲ್ಲ. ಈಗಿನ ವರದಿಯನ್ನು ಪರಿಗಣಿಸಬೇಕು ತಾನೆ? ಎಂದು ಜಡ್ಜ್ ಎಸ್‌ಪಿಪಿ ಪ್ರಸನ್ನ ಅವರನ್ನು ಪ್ರಶ್ನೆ ಮಾಡಿದರು.

ಇಬ್ಬರ ನ್ಯಾಯಾಧೀಶರ ವಾದ ಪ್ರತಿವಾದ ಆಲಿಸಿದ ಜಡ್ಜ್ ಇದೀಗ ತೀರ್ಪನ್ನು ನಾಳೆ ಅಂದರೆ ಅಕ್ಟೋಬ‌ರ್ 30ಕ್ಕೆ ಮುಂದೂಡಲಾಗಿದ್ದು ನಾಳೆ ದರ್ಶನ್ ಅವರಿಗೆ ಜೈಲು ಮಂಜೂರಾಗುತ್ತಾ ಅಥವಾ ಇನ್ನೂ ಜೈಲು ಸೆರೆವಾಸನೆ ಮುಂದುವರಿಯುತ್ತಾ ಎಂದು ಕಾದು ನೋಡಬೇಕಿದೆ.

ವರದಿ : C. ಕೊಟ್ರೇಶ್ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button