ಕ್ಷಯ ರೋಗ ವಿಜೇತ ತರಬೇತಿ ಕಾರ್ಯಕ್ರಮ

ಸರಗೂರು: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕ್ಷಯ ರೋಗದಿಂದ ಗುಣ ಮುಖ ಹೊಂದಿರುವವರಿಗೆ ಕ್ಷಯ ರೋಗ ವಿಜೇತ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ದಿನ ಸರಗೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹೆಚ್.ಡಿ.ಕೋಟೆ ಮತ್ತು KHPT ಸಂಸ್ಥೆ ವತಿಯಿಂದ ಕ್ಷಯ ರೋಗದಿಂದ ಗುಣ ಮುಖ ಹೊಂದಿರುವವರಿಗೆ ಕ್ಷಯ ರೋಗ ವಿಜೇತ ತರಬೇತಿ ಯನ್ನು ಆಯೋಜಿಸಿಲಾಗಿತ್ತು. ಈ ಕಾರ್ಯ ಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ ರವಿಕುಮಾರ್ ರವರು ಅಧ್ಯಕ್ಷತೆಯನ್ನು
ವಹಿಸಿ, ದೀಪ ಬೆಳಗುವುದರ ಮೂಲಕ ಉದ್ಘಾಟಿಸಿರು.
ನಂತರ ತಾಲ್ಲೂಕು ಆರೋಗ್ಯಾಧಿಕಾರಿಗಳು ಮಾತನಾಡಿ, ಈ ಕಾರ್ಯಕ್ರಮದ ಮುಖ್ಯವಾದ ಉದ್ದೇಶವೆನೆಂದರೆ ಕ್ಷಯ ಮುಕ್ತ ಗ್ರಾಮ ಹಾಗೂ ಕ್ಷಯ ಮುಕ್ತ ಪಂಚಾಯಿತಿಯನ್ನಾಗಿ ಮಾಡುವುದು ಈ ಕಾರ್ಯಕ್ರಮದ ಉದೇಶವಾಗಿದೆ. ಕ್ಷಯ ವಿಜೇತ ವ್ಯಕ್ತಿಗಳು ಗ್ರಾಮದಲ್ಲಿ ಹೊಸದಾಗಿ ಕ್ಷಯ ರೋಗಿಗೆ ಹಾಗೂ ಗ್ರಾಮದ ಜನರಿಗೆ ಕ್ಷಯ ರೋಗದ ಬಗ್ಗೆ ಅರಿವುವನ್ನು ಮೂಡಿಸಬೇಕು ಎಂದರು. ಕ್ಷಯರೋಗ ಚಿಕಿತ್ಸೆ ಪಡೆಯುತ್ತಿರುವ ಪ್ರತಿ ರೋಗಿಗೂ ಮಾಸಿಕ 500 ಗಳಂತೆ ಆರು ತಿಂಗಳು ಒಟ್ಟು ರೂ.3,000ಗಳನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದರು. ಹಾಗೂ ಈ ಕಾರ್ಯ ಕ್ರಮದಲ್ಲಿ ಒಟ್ಟು 40 ಮಂದಿ ಕ್ಷಯ ರೋಗ ವಿಜೇತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ ಪಾರ್ಥ ಸಾರಥಿ KHPT ರಾಜ್ಯ ಸಂಯೋಜಕರಾದ ಪ್ರಕಾಶ್, ಜಿಲ್ಲಾ ಸಂಯೋಜಕರಾದ ಪ್ರಕಾಶ್ ಪೂಜಾರಿ, ಮಹದೇವ್, ಸರೋಗ ಮೇಲ್ವಿಚಾರಕರಾದ ನಾಗರಾಜು, ಉಮೇಶ್, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು, ಕ್ಷಯ ರೋಗ ವಿಜೇತರು ಇನ್ನಿತರರು ಹಾಜರಿದ್ದರು.
ವರದಿ : ಮಲಾರ ಮಹದೇವಸ್ವಾಮಿ