
ಸರಗೂರು: ತಾಲ್ಲೂಕಿನ ಎಂ ಸಿ ತಳಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಜಯಲಕ್ಷ್ಮೀಪುರ ರಂಜಿತಾ ವೆಂಕಟರಾಮು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷ ಲಕ್ಷಿಮಾದಪ್ಪ ನವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಗೆ ರಂಜಿತಾ ವೆಂಕಟರಾಮು ಮಾತ್ರ ನಾಮ ಪತ್ರ ಸಲ್ಲಿಸಿದ್ದರು. ಬೇರೆ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ಚುನಾವಣಾಧಿಕಾರಿ ಉಪವಿಭಾಗ ಕಬಿನಿ ನೀರಾವರಿ ಇಲಾಖೆ ಅಧಿಕಾರಿ ಕೆ ಉಷಾ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಅವಿರೋಧ ಆಯ್ಕೆ ಪ್ರಕಟಿಸಿ ರಂಜಿತಾ ವೆಂಕಟರಾಮು ಗೆ ಅಧಿಕಾರ ವಹಿಸಿಕೊಟ್ಟರು.
12 ಮಂದಿ ಸದಸ್ಯರು ಹಾಜರಿದ್ದರು. ಮಾಜಿ ಅಧ್ಯಕ್ಷೆ ಲಕ್ಷಿ ಮಾದಪ್ಪ ಗೈರು ಹಾಜರಾಗಿದ್ದರು.

ನೂತನ ಅಧ್ಯಕ್ಷೆ ರಂಜಿತಾ ವೆಂಕಟರಾಮು ಮಾತನಾಡಿ, ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತೇನೆ. ಪಕ್ಷಾತೀತ ನೆಲೆಯಲ್ಲಿ ಅಭೀವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಚುನಾವಣಾಧಿಕಾರಿ ಕೆ ಉಷಾ ಮಾತನಾಡಿ, ಸದಸ್ಯರು ಮತ್ತು ಅಧ್ಯಕ್ಷರು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಿದರೆ ಸಾಕಷ್ಟು ಅಭಿವೃದ್ಧಿ ಸಾಧಿಸಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ರೂಪಿಸಬಹುದು. ಅಭಿವೃದ್ಧಿ ವಿಚಾರಗಳಿಗೆ ರಾಜಕೀಯವನ್ನು ಬೆರೆಸಬಾರದು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮೀ ಕುಮಾರ್, ಸದಸ್ಯರು ಅಂಬಿಕಾ,ಚಿಕ್ಕಕ್ಯಾತ,ಕೆಂಡನಾಯಕ, ರಾಜಕುಮಾರ್, ಪ್ರಕಾಶ್ ಚಂದ್ರ, ನಿಂಗಮ್ಮ, ಭಾಗ್ಯಮ್ಮ, ನಾಗಮ್ಮ, ರಮೇಶ್, ಮುಖಂಡರು ಸಮಾಜ ಸೇವಕ ಜಯಲಕ್ಷ್ಮೀಪುರ ರಾಜು, ನಾಗೇಂದ್ರ,ಬೋವಿ ಸಮಾಜದ ಯಜಮಾನರು ಸಿದ್ದರಾಜು, ನಾಗೇಶ್, ವೆಂಕಟಸ್ವಾಮಿ, ನಿಂಗಪ್ಪ, ನಾಗೇಂದ್ರ, ಭವನೇಶ್,ಬರಗಿ ಮಹದೇವ,ರವಿ, ರೇವಣ್ಣ, ಬಸವಣ್ಣ,ಕೃಷ್ಣಭೋವಿ,ಸೋಮಣ್ಣ,ರಾಮಬೋವಿ,ಬರಗಿ ಚಂದ್ರ, ಮಲ್ಲಪ್ಪ, ಪ್ರತಾಪ್,ಸಕಲೇಶ್ ದೊಡ್ಡಬೋವಿ, ಲೋಕೇಶ್, ನಾಗರಾಜು, ನಿಜಪ್ಪ,ಗ್ರಾಪಂ ಅಭಿವೃದ್ಧಿ ಅಧಿಕಾರಿ ಪರಮೇಶ್, ಗಜೇಂದ್ರ,ಮತ್ತಿತರರು ಹಾಜರಿದ್ದರು.
ಬೆಂಬಲಿಗರು ಅಧ್ಯಕ್ಷೆ ಆಯ್ಕೆಯಾದ ಹಿನ್ನೆಲೆಯಲ್ಲಿ ಪಂಚಾಯಿತಿ ಮುಂಬಾಗದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ವರದಿ : ಹಾದನೂರು ಚಂದ್ರ tv8kannada