
ಹೊಸಕೋಟೆ : ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಸಂಭ್ರಮ ಆಯುಧ ಪೂಜೆ ಸಂಭ್ರಮಕ್ಕೆ ರೈತರಿಗೆ ಭರ್ಜರಿ ಕೊಡುಗೆ ನೀಡಿದ ಪೊಲೀಸರು.
ತಿರುಮಲಶೆಟ್ಟಿಹಳ್ಳಿ ಠಾಣೆಯ ಸಿಪಿಐ ಸುಂದರ್ ಆವರ ಕಾರ್ಯ ಮೆಚ್ಚಿ ಶಾಸಕರಿಂದ ಪ್ರಶಂಸೆ ಹಾಗೂ ಗೃಹ ಸಚಿವರಿಂದ ಗೌರವ ದೊರಕಿಸಿ ಕೊಡುವ ಭರವಸೆ.
ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಆಯುಧ ಪೂಜೆ ಸಂದರ್ಭದಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ರೈತರ ಮೋಟಾರ್ ಗಳನ್ನು ವಿತರಣೆ ಮಾಡಿದರು. ಸುಮಾರು 40ಕ್ಕೂ ಅಧಿಕ ರೈತರ ತೋಟಗಳಲ್ಲಿ ಮೋಟಾರ್ ಕಳವು ಮಾಡಿದ್ದು ಈ ಸಂಭಂದ ಕಳವಾಗಿದ್ದ ಮೋಟಾರ್ ಗಳನ್ನು ಹುಡುಕಿ ರೈತರಿಗೆ ಬದಲಿ ಹೊಸ ಮೋಟಾರ್ ಗಳನ್ನು ವಿತರಣೆ ಮಾಡಿದ್ದಾರೆ.
ಇದೆ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ ಅವರು, ಸಾರ್ವಜನಿಕರು ಪೊಲೀಸ್ ಠಾಣೆ ಎಂದರೆ ಕೇವಲ ದೂರು ಧಾಖಲು ಮಾಡುವ ಎಂದು ಭಾವಿಸಿರುವ ಕಾಲವನ್ನು ಬದಲಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಿ ನ್ಯಾಯ ಕೊಡಿಸುವ ಠಾಣೆ ಎಂದು ಇಲ್ಲಿನ ಸಿಬ್ಬಂದಿಗಳು ಇಂದು ಸಂಭ್ರಮದಿಂದ ಪೂಜೆ ಮಾಡಿದ್ದಾರೆ. ಇಂದು ಪೊಲೀಸರಿಗೆ ರಕ್ಷಣೆಗಾಗಿ ಹೆಲ್ಮೆಟ್ ಹಾಗೂ ರೈತರ ಕಳವಾಗಿದ್ದ ಮೋಟಾರ್ ವಿತರಣೆ ಮಾಡಿ ಉತ್ತಮ ಸಾಧನೆ ಮಾಡಿದ್ದಾರೆ. ಈ ಭಾಗದಲ್ಲಿ ಒಂದು ಪೊಲೀಸ್ ವಸತಿ ಗೃಹದ ಅವಶ್ಯಕತೆ ಇದ್ದು ಕೂಡಲೇ ಗೃಹ ಮಂತ್ರಿಗಳೊಂದಿಗೆ ಚರ್ಚಿಸಿ ಇದಕ್ಕೂ ಚಾಲನೆ ನೀಡಲು ತೀರ್ಮಾನಿಸಲಾಗುವುದು ಎಂದರು.