ವಿದೇಶ

ಸ್ಟೇಜ್ ಬಿಟ್ಟು ಓಡಿ ಹೋದ ನಿಕ್, ಪ್ರಿಯಾಂಕಾ ಚೋಪ್ರಾ ಪತಿ ಜೀವಕ್ಕೆ ಅಪಾಯ?


ಪ್ರೇಗ್ : ಈಗ ಹಾಲಿವುಡ್​ನಲ್ಲಿ ನೆಲೆಸಿರುವ ಖ್ಯಾತ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಹಾಲಿವುಡ್​ನ ಜನಪ್ರಿಯ ಪಾಪ್ ಗಾಯಕ. ನಿಕ್ ಜೋನಸ್ ಹಾಗೂ ಅವರ ಸಹೋದರರು ಸೇರಿ ನಡೆಸುವ ಜೋನಸ್ ಬ್ರದರ್ಸ್ ಕಾನ್ಸರ್ಟ್​ಗಳಿಗೆ ಲಕ್ಷಾಂತರ ಮಂದಿ ಅಭಿಮಾನಿಗಳು ಆಗಮಸುತ್ತಾರೆ.

ಇತ್ತೀಚೆಗೆ ನಡೆದ ಇಂಥಹುದೇ ಒಂದು ಕಾನ್​ಸರ್ಟ್​ನಲ್ಲಿ ನಿಕ್ ಜೋನಸ್ ವೇದಿಕೆ ಮೇಲೆ ಪ್ರದರ್ಶನ ನೀಡುವ ಸಮಯದಲ್ಲಿ ಒಮ್ಮಿಂದೊಮ್ಮೆಲೆ ಸ್ಟೇಜ್​ ಬಿಟ್ಟು ಓಡಿ ಹೋಗಿದ್ದಾರೆ. ಇದು ನಿಕ್​ರ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಆದರೆ ಹೀಗೆ ಹಠಾತ್ತನೆ ಸ್ಟೇಜ್ ಬಿಟ್ಟು ಓಡಿ ಹೋಗಿದ್ದಕ್ಕೆ ಕಾರಣವೂ ಇದೆ. ಪೆರುಗ್ವೆನಲ್ಲಿ ನಿಕ್ ಸಹೋದರರು ಲೈವ್ ಕಾನ್ಸರ್ಟ್ ನಡೆಸುತ್ತಿದ್ದರು. ವೇದಿಕೆ ಮೇಲೆ ನಿಕ್ ಜೋನಸ್, ಜೋ ಜೋನಸ್, ಕೆವಿನ್ ಜೋನಸ್ ಮೂವರೂ ಸಹ ಪ್ರದರ್ಶನ ನೀಡುತ್ತಿದ್ದರು. ಸುತ್ತಲೂ ಪ್ರೇಕ್ಷಕರ ಗ್ಯಾಲರಿ ನಿರ್ಮಾಣವಾಗಿತ್ತು. ಭಾರಿ ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿದ್ದರು. ವೇದಿಕೆ ಮೇಲಿದ್ದ ನಿಕ್ ತಮ್ಮ ಹಿಂದೆ ಗ್ಯಾಲರಿಯಲ್ಲಿ ನಿಂತಿದ್ದ ಜನರನ್ನು ನೋಡುತ್ತಲೇ ವೇದಿಕೆ ಇಳಿದು ತನ್ನ ಭದ್ರತೆಯವರಿಗೆ ಕೈ ಸಂಜ್ಞೆ ಮಾಡುತ್ತಾ ವೇದಿಕೆಯಿಂದ ಇಳಿದು ಓಡಿದರು. ಇದು ನೆರೆದಿದ್ದವರಿಗೆ ಆಶ್ಚರ್ಯ ತಂದಿತು. ಅಸಲಿಗೆ ನಡೆದಿದ್ದೇನೆಂದರೆ ನಿಕ್​ ಮೇಲೆ ಯಾರೋ ಲೇಸರ್ ಬೆಳಕು ಬಿಟ್ಟರು. ಕೆಂಪು ಬಣ್ಣದ ಆ ಬೆಳಕು ರೈಫರ್ ಬಂದೂಕುಗಳಲ್ಲಿಯೂ ಬಳಲಸಾಗುತ್ತದೆ. ಅಲ್ಲದೆ ಕೆಂಪು ಬಣ್ಣದ ಬೆಳಕನ್ನು ಅಪಾಯನ ಸೂಚಕವಾಗಿಯೂ ಬಳಸಲಾಗುತ್ತದೆ. ಅದೇ ಕಾರಣಕ್ಕೆ ನಿಕ್ ಜೋನಸ್ ತಮ್ಮ ಮೇಲೆ ಕೆಂಪು ಲೇಸರ್ ಬೀಳುತ್ತಿದ್ದಂತೆ ಅಲ್ಲಿಂದ ದೂರ ಓಡಿ ಬಚ್ಚಿಟ್ಟುಕೊಂಡಿದ್ದಾರೆ. ಅವರ ಭದ್ರತೆಯರು ಕೂಡಲೇ ಪರಿಶೀಲನೆ ನಡೆಸಿ ಲೇಸರ್ ಬಿಡುತ್ತಿದ್ದ ವ್ಯಕ್ತಿಯನ್ನು ಕಂಡು ಹಿಡಿದು ಆತನನ್ನು ಹೊರಗಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button