ಶರನ್ನವರಾತ್ರಿ ವಿಜಯ ದುರ್ಗಾದೇವಿ ಮಹಾ ಮಂಗಲೋತ್ಸವ

ಯಲಬುರ್ಗಾ: ಶರನ್ನವರಾತ್ರಿ ಅಂಗವಾಗಿ ನಡೆದ ದುರ್ಗಾದೇವಿ ಪುರಾಣ ಮಹೋತ್ಸವವು ಪ್ರತಿ ದಿನ ನಡೆಯುವ ಮೂಲಕ ಅ. 3 ರಿಂದ ಪ್ರಾರಂಭಗೊಂಡು ಅ. 15 ವರೆಗೂ ಪುರಾಣ ನಡೆಯಿತು.
ಮಹಾ ಮಂಗಲೋತ್ಸವ ಪಟ್ಟಣದ ವಿಜಯ ದುರ್ಗಾದೇವಿ ದೇವಸ್ಥಾನದಲ್ಲಿ ಪುರಾಣ ಮಹಾ ಮಂಗಲೋತ್ಸವವು ಮಂಗಳವಾರ ವಿಜೃಂಭಣೆಯಿಂದ ಸಡಗರ ಸಂಭ್ರಮದಿಂದ ಜರುಗಿತು.
ಬೆಳಿಗ್ಗೆ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಟ್ರ್ಯಾಕ್ಟರ್ ಮುಖಾಂತರ ತಾಯಿ ವಿಜಯ ದುರ್ಗಾದೇವಿ ಮೂರ್ತಿಗೆ ಪೂಜೆ ಸಲ್ಲಿಸಿ ಹಾಗೂ ಮುತ್ತೈದೆಯರಿಂದ ಕುಂಭ ಮೆರವಣಿಗೆ ನಡೆಯಿತು.
ಮೈಸರೂಲ್ಲಿ ಚಾಂಮುಡೇಶ್ವರಿ ತಾಯಿಗೆ ಯಾವ ರೀತಿ ವೈಭವ ನಡೆ ಯುತ್ತದೆ ಅದೆ ರೀತಿ ಯಲಬುರ್ಗಾ ದಲ್ಲಿ ಶ್ರೀ ವಿಜಯ ದುರ್ಗಾ ದೇವಿಯಾ ದಸರಾ ದೇವಿಯಾ ಹಿತ್ತಾಳೆ ಕಂಚಿನ ಮೂರ್ತಿ ಅಂಬಾರಿ ಒಳಗೆ ಕುಳ್ಳಿರಿಸಿ. ಸುತ್ತಮುತ್ತಲಿನ ಕಲಾವಿದರು ಪಾಲ್ಗೊಳ್ಳುವ ಮೂಲಕ ಶ್ರೀದೇವಿ ಬೇಡಿದ ವರವನ್ನ ಕೊಡುತ್ತಾಳೆ ಅಂತಾರೆ ಭಕ್ತರು.
ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಾದ ಮುಧೋಳ, ಹಿರೇಮ್ಯಾಗೇರಿ, ಕರಮುಡಿ ಹೊಸೂರು ಸಂಕನೂರು ಸಂಗನಾಳ, ಚಿಕ್ಕೊಪ್ಪ ಹೊಸಳ್ಳಿ, ಕಲ್ಲೂರು, ರಾಜೂರು, ಗೆದಗೇರಿ, ಚಿಕ್ಕಮ್ಯಾಗೇರಿ ಗ್ರಾಮದಿಂದ ಬರುವ ಭಕ್ತರು ಆಗಮಿಸಿ, ದೇವಿ ದರ್ಶನ ಪಡೆದರು. ನಂತರ ವಿವಿಧ ವಾದ್ಯ ಮೇಳದೊಂದಿಗೆ ದುರ್ಗಾದೇವಿಯ ಮೆರವಣಿಗೆ ಹಾಗೂ ಕುಂಭ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿತು.
ಪ್ರತಿದಿನ ಅನ್ನಸಂತರ್ಪಣೆ: ಕಳೆದ ವಾರದಿಂದ ಸಾಗಿ ಬಂದ ವಿಜಯ ದುರ್ಗಾದೇವಿಯ ಪುರಾಣ ಮಂಗಳವಾರ ಮಹಾ ಮಂಗಲೋತ್ಸವವು ವಿಜೃಂಭಣೆಯಿಂದ ನಡೆಯಿತು. ನಂತರ ಇಲ್ಲಿಯ ಬಯಲು ರಂಗ ಮಂದಿರದ ಮುಂದೆ ಭಕ್ತರಿಗೆ ದುರ್ಗಾ ದೇವಿಯ ದೇವಸ್ಥಾನ ಕಮೀಟಿ ವತಿಯಿಂದ ಬಿಸಿಬಿಸಿ ಹೋಳಿಗೆ, ವಿವಿಧ ಖಾದ್ಯ, ಕಡಕ ರೊಟ್ಟಿ, ಅನ್ನಸಂತರ್ಪಣೆ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಪಟ್ಟಣದ ಮುಖಂಡರಾದ ದುರ್ಗಾ ದೇವಿ ಕಮಿಟಿ ಅಧ್ಯಕ್ಷರು ಸಿದ್ದರಾಮೇಶ್ ಬೆಲೆರಿ, ಬಸವರಾಜ್ ಉಳಗಡ್ಡಿ, ಬಸಲಿಂಗಪ್ಪ ಭೂತೆ, ಅಂದನಗೌಡ ಉಳಗಡ್ಡಿ. ಅರವಿಂದ್ ಗೌಡ ಪಾಟೀಲ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂದಾನಯ್ಯ ಕಳ್ಳಿ ಮಠ, ಸುರೇಶ್ ಗೌಡ ಶಿವನಗೌಡ, ಸಂಗಪ್ಪ ಹಳ್ಳಿ, ಡಾನ್ ಗೌಡರ್ ತೊಂಡಿಹಾಳ, ಶರಣಪ್ಪ ದಾನ ಕೈ, ಸಂಗಪ್ಪ ಕೊಪ್ಪಳ, ಕೊಟ್ರಪ್ಪ ಚೌಡಿ ಇನ್ನೂ ಹಲವಾರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನಿಂದ ಬಂದ ಭಕ್ತರು ಆಗಮಿಸಿ, ದೇವಿ ದರ್ಶನ ಪಡೆದುಕೊಂಡು ಹೋಳಿಗೆ ಭೋಜನ ಸವಿದರು.
ವರದಿ: ದೊಡ್ಡಬಸಪ್ಪ ಹಕಾರಿ, tv8 ಕನ್ನಡ, ಯಲಬುರ್ಗಾ