ಸುದ್ದಿ
ಜಮೀನಿನಲ್ಲಿ ಬೃಹತ್ ಬಂಡೆ ಉರುಳಿ ಮಕ್ಕಳು ಸೇರಿ ಮೂವರ ದಾರುಣ ಸಾವು

ರಾಯಚೂರು: ಬೃಹತ್ ಬಂಡೆಗಲ್ಲು ಉರುಳಿ ಬಿದ್ದು ಇಬ್ಬರು ಬಾಲಕರು, ಮತ್ತೊಬ್ಬ ಯುವಕ ಮೃತಪಟ್ಟ ಧಾರುಣ ಘಟನೆ ಜಿಲ್ಲೆಯ ಹಟ್ಟಿ ಸಮೀಪದ ಗೌಡೂರು ತಾಂಡಾದಲ್ಲಿ ಮಂಗಳವಾರ (ಅ.15) ಜರುಗಿದೆ.
ಮೂರನೇ ತರಗತಿ ವಿದ್ಯಾರ್ಥಿಗಳಾದ ಮಂಜುನಾಥ, ವೈಶಾಲಿ ಸ್ಥಳದಲ್ಲಿ ಮೃತಪಟ್ಟಿದ್ದು, ರಘು (23) ಲಿಂಗಸಗೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಶಾಲೆ ರಜೆ ಇರುವ ಹಿನ್ನೆಲೆಯಲ್ಲಿ ಪೋಷಕರ ಜೊತೆಗೆ ಮಕ್ಕಳು ಜಮೀನಿಗೆ ಹೋಗಿದ್ದರು. ಜಮೀನು ಬದಿಯಲ್ಲಿ ಹಾಕಿದ ಕಲ್ಲು ಬಂಡೆಗಳ ಸುತ್ತಮುತ್ತ ಆಟವಾಡುತ್ತಿದ್ದರು. ಈ ವೇಳೆ ಕಲ್ಲು ಬಡೆ ಜಾರಿ ಬಿದ್ದಿದೆ.
ಮಳೆಯಿಂದ ನೆನೆದು ಮಣ್ಣು ಕುಸಿತಗೊಂಡು ಬಂಡೆ ಉರುಳಿದೆ ಎಂದು ಹೇಳಲಾಗುತ್ತಿದೆ. ಮಕ್ಕಳ ನರಳಾಟ ಕೇಳಿ ಪಾಲಕರು ಓಡಿಬಂದಿದ್ದಾರೆ. ಆದರೆ, ಬೃಹತ್ ಬಂಡೆ ಸರಿಸಲಾಗದೆ ಮಕ್ಕಳು ಜೀವ ಕಳೆದುಕೊಂಡಿದ್ದಾರೆ. ಜಮೀನಿನಲ್ಲಿ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.
ವರದಿ: ಮುಸ್ತಾಫಾ ಲಿಂಗಸುಗೂರು