Maski: ಸರ್ಕಾರಿ ಕಾಮಗಾರಿಗೆ ಅಡ್ಡಿ: ವ್ಯಕ್ತಿ ಜೈಲುಪಾಲು

ಮಸ್ಕಿ : ಸರ್ಕಾರಿ ಸಿಸಿ ರಸ್ತೆ ಕಾಮಗಾರಿ ವೀಕ್ಷಣೆ ಮಾಡಲು ಹೋದ ಇಂಜಿನಿಯರ್ ವೊಬ್ಬರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯೋರ್ವ ಜೈಲುಪಾಲಾಗಿರುವ ಘಟನೆ ಫೆ. 14ರ ಶುಕ್ರವಾರ ಯರದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಶ್ರೀನಿವಾಸ (40) ಬಂಧಿತ ವ್ಯಕ್ತಿ.
ಶ್ರೀನಿವಾಸ ಎಂಬಾತ ಇಂಜಿನಿಯರ್ ಸಂತೋಷ ಕುಮಾರ ಅವರ ಮೇಲೆ ಹಲ್ಲೆ ನಡೆಸಿದ್ದರು.
ತಾಲೂಕಿನ ಯರದೊಡ್ಡಿ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಸಿಸಿ ರಸ್ತೆ ನಿರ್ಮಾಣವಾಗುತ್ತಿದ್ದು, ಕಾಮಗಾರಿ ವೀಕ್ಷಣೆಗೆ ಹೋದ ಇಲಾಖೆಯ ಇಂಜಿನಿಯರ್ ಮೇಲೆ ಯರದೊಡ್ಡಿ ತಾಂಡಾದ ನಿವಾಸಿ ಶ್ರೀನಿವಾಸ, ಜೆಇ ಸಂತೋಷ ಕುಮಾರ ಅವರು ಅಧಿಕಾರಿ ಎಂಬುದನ್ನು ಲೆಕ್ಕಿಸದೇ ನಾವು ಹೇಳಿದ ಹಾಗೆ ಕಾಮಗಾರಿ ಮಾಡಬೇಕೆಂದು ನಿರ್ಮಿತಿ ಕೇಂದ್ರದಲ್ಲಿ ಸಂತೋಷ ಅವರ ಕೈ ಹಿಡಿದು ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದು, ಅಲ್ಲದೇ ಜೀವ ಬೆದರಿಕೆ ಹಾಕಿದ್ದರು.
ಈ ಕುರಿತು ಜೆಇ ದೂರು ನೀಡಿದ ಅನ್ವಯ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕುರಿತು ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ1