ಇತ್ತೀಚಿನ ಸುದ್ದಿ

ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆಗೆ ಶಾಸಕ ಶರತ್ ಬಚ್ಚೇಗೌಡ ಚಾಲನೆ

ಹೊಸಕೋಟೆ ; ಯಲ್ಲಿ 100 ಕೋಟಿ ವೆಚ್ಚದ ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆಗೆ ಶಾಸಕ ಶರತ್ ಬಚ್ಚೇಗೌಡ ಚಾಲನೆ ನೀಡಿದ್ದಾರೆ.

ನಂತರ ಮಾತನಾಡಿದ ಅವರು, ನಗರದಲ್ಲಿ ವಿದ್ಯುತ್ ಅವಘಡ ಹಾಗೂ ತಂತಿಗಳ ಕಿರಿಕಿರಿ ತಪ್ಪಿಸಲು 100 ಕೋಟಿ ವೆಚ್ಚದಲ್ಲಿ ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆಗೆ ರಾಜ್ಯದಲ್ಲಿಯೇ ಮೊದಲ ತಾಲ್ಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ಇಂಧನ ಸಚಿವರಿಗೆ ನೀಡಿದ ಮನವಿ ಮೇರೆಗೆ ನಮ್ಮ ತಾಲೂಕಿಗೆ ಈ ಯೋಜನೆ ಕಲ್ಪಿಸಿದ್ದಾರೆ ಎಂದರು.

ಇನ್ನೂ ವಿರೋಧ ಪಕ್ಷಗಳು ಬರಿ ಟೀಕೆ ಟಿಪ್ಪಣಿಗಳು ಮಾಡೋದು ಕೆಲಸವಾಗಿದೆ. ನಾವು ರಾಜ್ಯದಲ್ಲಿರುವ 3 ಕೋಟಿ ಹೆಣ್ಣು ಮಕ್ಕಳಿಗೆ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಆಗ ಹೆಣ್ಣು ಮಕ್ಕಳು ಕೆಟ್ಟು ಹೋಗುತ್ತಾರೆ ಅಂತಾ ಹೇಳ್ತೀರೆ. ವಿರೋಧ ಪಕ್ಷದವರು ಹೇಳಬೇಕು ನಾವು ಉಚಿತವಾಗಿ ಮಾಡಬೇಕೋ ಏನ್ ಮಾಡ್ಬೇಕು ಅಂತಾ. ಸುಮ್ಮನೆ ಟೀಕೆ ಟಿಪ್ಪಣಿಗಳು ಮಾಡ್ತಾರೆ ಅದಕ್ಕೆ ಅರ್ಥವಿಲ್ಲ. ಇಂಧನ ಬೆಲೆಯನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದರೆ. ನಾವು ರಾಜ್ಯದಲ್ಲಿ ಟಿಕೇಟ್ ದರ ಕಡಿಮೆ ಮಾಡಬಹುದು. ಬಸ್ ದರ ಹೆಚ್ಚಿಗೆ ಆಗದೋ ಪರಿಷ್ಕೃತ ಆಗೋದು ಸಹಜ‌ ಎಂದರು.

ಇನ್ನೂ ಸಚಿವ ಪ್ರಿಯಾಂಕ ಖರ್ಗೆ ನಮ್ಮ ಪಕ್ಷದ ದೊಡ್ಡ ನಾಯಕರು , ದೊಡ್ಡ ಧ್ವನಿ ಅವರು. ಆದ್ದರಿಂದ ಅವರ ಧ್ವನಿ ಮೊಟಕುಗೊಳಿಸಲು ವಿರೋಧ ಪಕ್ಷದವರು ಪಿತೂರಿ ಮಾಡ್ತಾ ಇದ್ದಾರೆ. ನಮ್ಮ ಪಕ್ಷದಲ್ಲಿ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಸ್ಪಷ್ಟನೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button