ಇತ್ತೀಚಿನ ಸುದ್ದಿ

ಶ್ರೀ ಗುರುಕುಲ ಪಬ್ಲಿಕ್ ಸ್ಕೂಲ್ ಮತ್ತು ಸಮೂಹ ಸಂಸ್ಥೆಯ ಸಂಕ್ರಾಂತಿ ಸಿರಿ ಸಂಭ್ರಮ ಆಚರಣೆ.

ಕೊಟ್ಟೂರು : ದೇವಾಲಯದಲ್ಲಿ ಇರುವ ಗಂಟೆಗಿಂತ ಶಾಲೆಯಲ್ಲಿನ ಗಂಟೆಯ ಶಬ್ದ ಹೆಚ್ಚಾಗಿ ಬರುತ್ತದೆ ಆ ದೇಶ ಉದ್ದಾರ ಮಾಡಬಲ್ಲದು ಎಂದು ಮರಿಸ್ವಾಮಿ ಡಿ ಎಸ್ ಎಸ್ ಜಿಲ್ಲಾಧ್ಯಕ್ಷರು ಹೇಳಿದರು.ಪಟ್ಟಣದ ಶ್ರೀ ಗುರುಕುಲ ಪಬ್ಲಿಕ್ ಸ್ಕೂಲ್ ,ಇಂಟರ್ ನ್ಯಾಷನಲ್ ಸ್ಕೂಲ್ , ಜ್ಞಾನಾವೃತ ಪಬ್ಲಿಕ್ ಸ್ಕೂಲ್ ಉಜ್ಜಯಿನಿ ಇವರ ಸಹಯೋಗದಲ್ಲಿ ಸಂಕ್ರಾಂತಿ ಸಿರಿ ವೈಭವ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ಬೆಳೆಸಬೇಕು ಎಂದರು. ವಿಥ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಉದ್ಯೋಗ ಪಡೆಯಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ ಎಂದರು.ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗಳುಒಂದುಗೂಡಿ ಕೊಂಡು ಸಂಕ್ರಾಂತಿ ಸಿರಿ ಆಚರಣೆ ಮಾಡಿ ಎಂದು ಕರೆ ನೀಡಿದರು.ವಿದ್ಯಾರ್ಥಿಗಳು ಸದೃಢ ಆರೋಗ್ಯಕ್ಕೆ ಆಟಗಳ ಜೋತೆಗೆ ಗ್ರಂಥಾಲಯ ಪುಸ್ತಕಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ವಹಿಸಬೇಕು ಎಂದು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಮೈದೂರು ಶಶಿಧರ ಹೇಳಿದರು.

ಮೋಬೈಲ್ ಗೀಳು ಹೆಚ್ಚು ವಿದ್ಯಾರ್ಥಿಗಳು ದಾಸರಾಗದೆ ಗುರುವಿನ ಗರಡಿಯಲ್ಲಿ ಪಳಗಿ ಉತ್ತಮ ನಾಗರಿಕರಾಗಿ ಎಂದು ಗಂಗಮ್ಮ ನಳ್ಳಿ ಸಿದ್ಧಯ್ಯ ಪ ಪಂ ಉಪಾಧ್ಯಕ್ಷರು ಹೇಳಿದರು.ಕೊಟ್ಟೂರು ಎಲ್ಲಾ ಕ್ಷೇತ್ರಗಳಲ್ಲೂ ಪ್ರಮುಖ ಆಕರ್ಷಣೆ ಇದೆ‌ . ಕನ್ನಡ ಭವನ , ರಂಗಮಂದಿರ ನಿರ್ಮಾಣ ಪಟ್ಟಣದಲ್ಲಿ ಖಾಲಿ ನಿವೇಶನ ನೀಡಬೇಕು ಎಂದು ಚಿಗಟೇರಿ ಕೊಟ್ರೇಶಿ ಪ ಪಂ ಉಪಾಧ್ಯಕ್ಷರಿಗೆ ವತ್ತಹಿಸಿದರು.

ಬೇರೆ ಊರಿಗೆ ಹೋಗಿ ವಿದ್ಯಾಭ್ಯಾಸ ಮಾಡುವ ಬದಲಾಗಿ ನಮ್ಮ ಶಾಲೆಯಲ್ಲಿ ದೊರೆಯುವಂತೆಮಾಡುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸಲಾಗಿದೆ ಎಂದು ಜಿ ಕೆ ಕೊಟ್ರೇಶ್ ರಾಜ್ಯ ಅಧ್ಯಕ್ಷರು ರೂಪ್ಸೆ ಕರ್ನಾಟಕ ಇವರು ಹೇಳಿದರು.ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಭರತನಾಟ್ಯ, ಜಾನಪದ, ಕಲೆ ಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿತು. ಪೋಷಕರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದರು.ಸಂಪತ್ ಕಾರ್ಯಕ್ರಮ ನಿರೂಪಿಸಿದರು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು.ಸಿ ಕೊಟ್ರೇಶ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶ್ರೀ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಎಸ್ ಜಿಕೆ ಸಮೂಹ ವಿದ್ಯಾಸಂಸ್ಥೆ ಶಾಲೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ : C ಕೊಟ್ರೇಶ್ tv8kannada ಬಳ್ಳಾರಿ

Related Articles

Leave a Reply

Your email address will not be published. Required fields are marked *

Back to top button