ಕ್ರೀಡೆ

ದುಬೈನಲ್ಲಿ ನಡೆದೇ ಹೋಯ್ತಾ ಸಾನಿಯಾ-ಶಮಿ ಮದುವೆ!? ವೈರಲ್​ ಫೋಟೋ ಹಿಂದಿನ ಅಸಲಿ ಸತ್ಯ ಬಯಲು | Mohammed Shami – Sania Mirza

ದೇಶ ಕಂಡ ಅತ್ಯುತ್ತಮ ಕ್ರೀಡಾಪಟುಗಳ ಪೈಕಿ ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಕೂಡ ಸೇರಿದ್ದಾರೆ. ಶಮಿ 2023ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ಗೆ ಟೀಮ್​ ಇಂಡಿಯಾವನ್ನು ಮುನ್ನಡೆಸಿದ ಚಾಂಪಿಯನ್ ಬೌಲರ್. ಸಾನಿಯಾ, ಭಾರತದ ಅತ್ಯುತ್ತಮ ಮಹಿಳಾ ಟೆನಿಸ್ ಆಟಗಾರ್ತಿ.

ಇಬ್ಬರು ತಮ್ಮ ಜೀವನ ಸಂಗಾತಿಯಿಂದ ದೂರಾಗಿದ್ದಾರೆ. ಹೀಗಾಗಿ ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಆಗಾಗ ಕೇಳಿಬರುತ್ತಿದೆ. ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯಿಬ್ ಮಲಿಕ್ ವಿಚ್ಛೇದನ ಪಡೆದಿರುವುದು ಗೊತ್ತೇ ಇದೆ. ಅವರಂತೆಯೇ, ಶಮಿ ಮತ್ತು ಅವರ ಪತ್ನಿ ಹಸಿನ್ ಜಹಾನ್ ಸಹ ಬೇರ್ಪಟ್ಟಿದ್ದಾರೆ. ಹೀಗಾಗಿ ಇಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಆಗಾಗಾ ಹರಿದಾಡುತ್ತಲೇ ಇರುತ್ತದೆ. ಆದರೆ, ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಶಮಿ ಮತ್ತು ಸಾನಿಯಾಗೆ ಮದುವೆ ಮಾಡಿಸಿಬಿಟ್ಟಿದ್ದಾರೆ. ಇಬ್ಬರು ಮದುವೆ ಆಗಿದ್ದಾರೆ ಎಂದು ಹೇಳಿ ಕೆಲ ಫೋಟೋಗಳನ್ನು ಹರಿಬಿಡಲಾಗಿದೆ. ಆ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಆದರೆ, ಆ ಫೋಟೋಗಳು ಸ್ಪಷ್ಟವಾಗಿ ನಕಲಿ ಎಂಬುದು ಬಯಲಾಗಿದೆ.

ಕೆಲವರು AI ತಂತ್ರಜ್ಞಾನದ ಸಹಾಯದಿಂದ ಶಮಿ ಮತ್ತು ಸಾನಿಯಾಗೆ ಮದುವೆ ಮಾಡಿಸಿದ್ದಾರೆ. ಪುಂಡ ಪೋಕರಿಗಳು ಎಐ ತಂತ್ರಜ್ಞಾನ ಬಳಸಿ ಮದುವೆ ಫೋಟೋಗಳನ್ನು ಕ್ರಿಯೇಟ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಈ ರೀತಿ ನಕಲಿ ಫೋಟೋಗಳನ್ನು ಹರಿಬಿಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಶಮಿ ಮತ್ತು ಸಾನಿಯಾ ಅಭಿಮಾನಿಗಳು ಆಗ್ರಹಿಸಿದ್ದಾರೆ.

ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನ ಪಡೆದ ನಂತರ ಸಾನಿಯಾ ಮಿರ್ಜಾ ತನ್ನ ಮಗನೊಂದಿಗೆ ದುಬೈನಲ್ಲಿ ವಾಸಿಸುತ್ತಿದ್ದಾರೆ. ತನ್ನ ಸ್ನೇಹಿತರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಸಹ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡುತ್ತಲೇ ಇರುತ್ತಾರೆ.

ಮತ್ತೊಂದೆಡೆ ಶಮಿ ಕೂಡ ಪತ್ನಿ ಹಸಿನ್ ಜಹಾನ್ ಗೆ ವಿಚ್ಛೇದನ ನೀಡಿ ಒಂಟಿ ಜೀವನ ನಡೆಸುತ್ತಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಶಮಿ ಇತ್ತೀಚೆಗೆ ದೇಶಿ ಟೂರ್ನಿಗಳಲ್ಲಿ ಆಡಿದ್ದಾರೆ. ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗದ ಕಾರಣ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಶಮಿ ಆಯ್ಕೆಯಾಗಿಲ್ಲ. ಸದ್ಯ ಭಾರತದಲ್ಲೇ ಉಳಿದಿದ್ದಾರೆ. ಇದರ ನಡುವೆ ದುಬೈಗೆ ಹೋಗಿ ಸಾನಿಯಾ ಜೊತೆ ಮದುವೆಯಾಗಿದ್ದಾರೆಂದು ನಕಲಿ ಫೋಟೋಗಳನ್ನು ಸೃಷ್ಟಿಸಿ ಹರಿಬಿಡಲಾಗಿದೆ.ಅಂದಹಾಗೆ ಇಂತಹ ಸುದ್ದಿ ಹೊರಬೀಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಸುದ್ದಿ ವೈರಲ್ ಆಗಿತ್ತು. ಆಗ ಸಾನಿಯಾ ಮಿರ್ಜಾ ತಂದೆ ಇಮ್ರಾನ್ ಮಿರ್ಜಾ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ಅದೆಲ್ಲ ವದಂತಿ ಎಂದು ತಳ್ಳಿ ಹಾಕಿದ್ದರು. ಈ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ವಾಸ್ತವವಾಗಿ, ಸಾನಿಯಾ ಮಿರ್ಜಾ ಒಮ್ಮೆಯೂ ಶಮಿಯನ್ನು ಭೇಟಿ ಮಾಡಿಲ್ಲ. ಇಂತಹ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.ಮೊಹಮ್ಮದ್ ಶಮಿ ಕೂಡ ಈ ಹಿಂದೆ ಸಾನಿಯಾ ಜೊತೆಗಿನ ವಿವಾಹದ ಸುದ್ದಿಗೆ ಪ್ರತಿಕ್ರಿಯಿಸಿ, ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಇಂತಹ ವಿಷಯಗಳನ್ನು ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. ಯಾವುದೇ ಸುದ್ದಿಯನ್ನು ಹಂಚಿಕೊಳ್ಳುವ ಮುನ್ನ ಅದರಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದ್ದರು.

✒️ಬರಹ ಹಾಗು ಸಾಮಾಜಿಕ ಜಾಲತಾಣ ಸಂಗ್ರಹ: ಮೊಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8newskannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button