ಅದು ಕ್ರೈಮ್ ನಲ್ಲಿ(Crime) ಮಿನಿ ಬಾಂಬೆ ಎಂದೇ ಖ್ಯಾತಿ ಗಳಿಸಿದ ಪ್ರದೇಶ. ಆ ಪ್ರದೇಶದಲ್ಲಿ ಅಪರಾಧ ಕೃತ್ಯ, ಕೊಲೆ ಸುಲಿಗೆ ಕಳ್ಳತನ ಮಾಮೂಲು. ಆದ್ರೆ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಬೇಕಾದ ಪೊಲೀಸ್ ಸಿಬ್ಬಂದಿ ಸಂಖ್ಯೆ ಮಾತ್ರ. ಹೀಗಾಗಿ ಇಲ್ಲಿನ ಪೊಲೀಸರಿಗೆ ಕೆಲಸದೊತ್ತಡ ಇತರೆ ಕಡೆಗಳಿಂತ ಹೆಚ್ಚಾಗಿದೆ. ಕೆಲಸದ ಒತ್ತಡದ ಕಾರಣದಿಂದ ಇತ್ತೀಚೆಗೆ ಹೆಡ್ ಕಾನ್ಸೆಟೇಬಲ್(Head Constable) ಒಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೆ ತೀರಿಕೊಂಡಿದ್ದಾರೆ.
ಹೌದು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸಟೇಬಲ್ ದಿನೇಶ್ , ಕೆಲಸ ನಿರ್ವಹಿಸುತ್ತಿದ್ದ ವೇಳೆಯೇ ಅಸುನೀಗಿದ್ದಾರೆ. 112 ವಾಹನದಲ್ಲಿ( ತುರ್ತು ಸೇವೆ ವಾಹನ) ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಘಾತವಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಮೃತಪಟ್ಟಿದ್ದಾರೆ.
ಮೊನ್ನೆಯಷ್ಟೇ 49ವರ್ಷ ಮುಗಿಸಿ 50 ವರ್ಷಕ್ಕೆ ಕಾಲಿಟ್ಟು ಬರ್ಥ್ ಡೇ ಆಚರಿಸಿಕೊಂಡಿದ್ದ ದಿನೇಶ್ ಕುಟುಂಬದ ಜೊತೆ ಖುಷಿಯಾಗಿದ್ರು. ಕೊರೊನಾ ಕಾಲದಲ್ಲೂ ಆ್ಟಕ್ಟೀವ್ ಆಗಿ ಕೆಲಸ ಮಾಡಿಕೊಂಡಿದ್ದ ದಿನೇಶ್ ರವರಿಗೆ ಹೃದಯಘಾತ ಸಂಭವಿಸಿರೋದು ಕುಟುಂಬಸ್ಥರಿಗೆ ದಿಕ್ಕೇ ತೋಚದಂತಾಗಿದೆ. ಆರೋಗ್ಯವಾಗಿದ್ದ ದಿನೇಶ್ ಸಾವು ಕುಟುಂಬದವರಲ್ಲಿ ಪರೋಕ್ಷವಾಗಿ ಸತತ 24 ಗಂಟೆಗಳ ಶಿಫ್ಟ್ ಮಾಡಿದ್ದ ದಿನೇಶ್ ಕೆಲಸದ ಒತ್ತಡದಿಂದಾಗಿ ಈ ರೀತಿ ಆಯ್ತಾ ಅಂತ ಪ್ರಶ್ನೆ ಮೂಡಿದೆ.