ನಾಡಿದ್ದು ಕರ್ನಾಟಕ ಬಂದ್ ಪಕ್ಕಾ: ಏನಿರುತ್ತೆ, ಏನಿರಲ್ಲ? ಕೆಎಸ್ಆರ್ಟಿಸಿ ಬಸ್ ಇರುತ್ತಾ?

ಬೆಂಗಳೂರು: ಮಹಾರಾಷ್ಟ್ರದಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಬಸ್ಗಳಿಗೆ ಮಸಿ ಬಳಿದು ಪುಂಡಾಟಿಕೆ ಮೆರೆದಿರುವುದನ್ನು ಖಂಡಿಸಿ ಇದೇ ಮಾರ್ಚ್ 22ರಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿವೆ.
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಾರ್ಚ್.22ರಂದು ಅಖಂಡ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ.
ಹೀಗಾಗಿ ಅಂದು ರಾಜ್ಯದಲ್ಲಿ ಏನಿರುತ್ತೆ-ಏನಿರಲ್ಲ? ಎಂಬುದರ ವಿವರ ಈ ಕೆಳಕಂಡಂತಿದೆ.
ಕರ್ನಾಟಕ ಬಂದ್ಗೆ ಓಲಾ, ಊಬರ್, ಆಟೋ ಸಂಘಗಳು ಕೂಡ ಬೆಂಬಲ ನೀಡಿವೆ. ಹೀಗಾಗಿ ಅಂದು ಓಲಾ, ಊಬರ್ ಹಾಗೂ ಆಟೋಗಳು ರಸ್ತೆಗಳಿಯುವುದಿಲ್ಲ. ಅದೇ ರೀತಿಯಾಗಿ ಕಾರ್ಮಿಕ ಪರಿಷತ್ ಸಂಪೂರ್ಣ ಬೆಂಬಲ ನೀಡಿದೆ.
ಇನ್ನು ಹೋಟೆಲ್ ಅಸೋಸಿಯೇಷನ್ನಿಂದ ನೈತಿಕ ಬೆಂಬಲ ನೀಡಿದ್ದು, ಬಂದ್ ದಿನ ಎಂದಿನಂತೆ ಹೋಟೆಲ್ಗಳು ತೆರೆದಿರುತ್ತವೆ.
ಇನ್ನು ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳು ಎಂದಿನಂತೆ ಸಂಚರಿಸಲಿದ್ದು, ದೂರದ ಊರಿಗೆ ಪ್ರಯಾಣ ಬೆಳೆಸುವ ಜನರು ಯಾವುದೇ ಆತಂಕವಿಲ್ಲದೇ ಪ್ರಯಾಣ ಮಾಡಬಹುದಾಗಿದೆ.
ಅಂದಿನ ದಿನ ಆಸ್ಪತ್ರೆ, ಮೆಡಿಕಲ್, ಹಾಲು, ಅಗತ್ಯವಸ್ತುಗಳು, ಮೆಟ್ರೋ, ಕೆಎಸ್ಆರ್ಟಿಸಿ ಬಸ್ಗಳು ಇರುತ್ತವೆ. ಬಂದ್ ದಿನ ಓಲಾ, ಊಬರ್, ಆಟೋ ರಸ್ತೆಗಳಿಯಲ್ಲ.
ವರದಿ: B ಆಶ್ರಿತ tv8kannada ಬೆಂಗಳೂರು