ರಾಜ್ಯ

ಇನ್ನೇನು ಕೆಲವೇ ದಿನದಲ್ಲಿ ಸಿಕ್ಕಾಪಟ್ಟೆ ಜಾಸ್ತಿಯಾಗಲಿದೆ ಈರುಳ್ಳಿ ಬೆಲೆ..!

Onion Price: ಪ್ರತಿದಿನ ಮನೆಯಲ್ಲಿ ಈರುಳ್ಳಿ ಬಳಸುವಾಗ ಕಣ್ಣಲ್ಲಿ ನೀರು ಸುರಿಯೋದು ತಪ್ಪುವುದಿಲ್ಲ. ಆದ್ರೆ ಈಗಾಗಲೇ ಹೆಚ್ಚಾಗಿರುವ ಈರುಳ್ಳಿಯ ಬೆಲೆಗಳು ಮತ್ತಷ್ಟು ಹೆಚ್ಚಾಗಿ ಆ ಮೂಲಕ ಜನರ ಕಣ್ಣಲ್ಲಿ ನಿಜವಾದ ಕಣ್ಣೀರನ್ನೇ ತರಿಸಲು ಸಜ್ಜಾಗಿದೆ. ಮಾರುಕಟ್ಟೆ ತಜ್ಞರು ಹೇಳುವ ಪ್ರಕಾರ ಈರುಳ್ಳಿಯ ಬೆಲೆಯೇರಿಕೆ ಇನ್ನೂ ಮುಂದುವರೆಯಲಿದೆಯಂತೆ. ಹಾಗಿದ್ದರೆ ಯಾವಾಗ ಎಷ್ಟು ಬೆಲೆ ಹೆಚ್ಚಾಗುತ್ತದೆ? ಕಾರಣವೇನು? ವಿವರ ಇಲ್ಲಿದೆ.

Onion Price Tension: ಈಗಾಗಲೇ ಈರುಳ್ಳಿ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಬೆಲೆಗಳು ಮತ್ತಷ್ಟು ಹೆಚ್ಚಾಗುತ್ತೆ ಎನ್ನಲಾಗುತ್ತಿದೆ. ಇದೆಲ್ಲಾ ಕೇವಲ ಊಹಾಪೋಹಗಳಾ ಅಥವಾ ಸತ್ಯವಾ? ಈರುಳ್ಳಿಯ ಧಾರಣೆಯ ಬಗ್ಗೆ ಮಾಹಿತಿ ತಿಳಿಯೋಣ

ಜುಲೈ ಮತ್ತು ಆಗಸ್ಟ್ ತಿಂಗಳಿಗೆ ಹೋಲಿಸಿದ್ರೆ ಈರುಳ್ಳಿಯ ಬೆಲೆಗಳು ಈಗ ಹೆಚ್ಚಾಗಿವೆ. ಮುಂದಿನ ದಿನಗಳಲ್ಲಿ ಈ ಬೆಲೆಗಳು ಡಬಲ್ ಅಂದರೆ ದುಪ್ಪಟ್ಟಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನುತ್ತದೆ ಕ್ರಿಸಿಲ್ ಎನ್ನುವ ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆ. ಅತೀ ಹೆಚ್ಚು ಈರುಳ್ಳಿ ಬೆಳೆಯುವ ಮಹಾರಾಷ್ಟ್ರ ರಾಜ್ಯದಲ್ಲೇ ಈ ಬೆಲೆ ಹೆಚ್ಚಾಗಿದೆಯಂತೆ.

Related Articles

Leave a Reply

Your email address will not be published. Required fields are marked *

Back to top button