ಧಾರ್ಮಿಕ ಪರಿಷತ್ ರಚನೆ ಮಾಡಿದೆ ನಿರ್ಲಕ್ಷ್ಯ !

ಮಸ್ಕಿ : ರಾಜ್ಯದಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ
ರಾಜ್ಯದ ಉಡುಪಿ ಜಿಲ್ಲಾ , ದಕ್ಷಿಣ ಕನ್ನಡ ಜಿಲ್ಲೆ,ಬೆಂಗಳೂರು ನಗರ ಜಿಲ್ಲೆ ,ಶಿವಮೊಗ್ಗ, ರಾಮನಗರ ಜಿಲ್ಲೆ
ಗಳಲ್ಲಿ ಧಾರ್ಮಿಕ ಪರಿಷತ್ ಸದಸ್ಯರ ಆಯ್ಕೆ ಮಾಡಲಾಗಿದೆ,
ಆಗಿದೆ ಆದರೆ ರಾಯಚೂರು ಜಿಲ್ಲೆಯಲ್ಲಿ ಮಾತ್ರ ಧಾರ್ಮಿಕ ಪರಿಷತ್ತ ರಚನೆ ಮಾಡಿದೆ ಅಧಿಕಾರಿಗಳು ಮೌನವಾಗಿದ್ದಾರೆ.
ಇದರಿಂದಾಗಿ ಜಿಲ್ಲೆಯ ಮುಜರಾಯಿ
ಸಂಬಂಧಪಟ್ಟ ಯೋಜನೆಗಳು, ವ್ಯವಸ್ಥಾಪನಾ ಸಮಿತಿಗಳ ನೇಮಕವಾಗದೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ.
ಮುಜರಾಯಿಗೊಳಪಟ್ಟ ದೇವಸ್ಥಾನದ ಆದಾಯಕ್ಕ
ನುಗುಣವಾಗಿ ಎ.,ಬಿ., ಸಿ., ಗ್ರೇಡ್‌ಗಳಲ್ಲಿ ವಿಂಗಡಿಸಲಾಗಿದೆ. ರಾಜ್ಯ ಧಾರ್ಮಿಕ ಪರಿಷತ್ ಮುಖೇನ ಈ ದೇವಳಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸಿ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ರಮ, ಹೊಸ ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಆದರೆ ಜಿಲ್ಲೆಯಲ್ಲಿ ಕೇಲವು ದೇವಾಲಯಗಳ ವ್ಯವಸ್ಥಾಪನಾ ಸಮಿತಿ ರಚನೆಯಾಗದೆ ಮುಜರಾಯಿ ದೇಗುಲಗಳಲ್ಲಿ ಪ್ರತಿಯೊಂದಕ್ಕೂ ಸಂಕಷ್ಟ ಎದುರಾಗಿದೆ.
ಧಾರ್ಮಿಕ ಪರಿಷತ್ತಿ ರಚನೆ ಮಾಡಿ
ಧಾರ್ಮಿಕ ದತ್ತಿ ಇಲಾಖೆ ನಿಯಮ
ಪ್ರಕಾರ ಎರಡು ತಿಂಗಳಿಗೊಮ್ಮೆ ರಾಜ್ಯ ಧಾರ್ಮಿಕ ಪರಿಷತ್ ಸಭೆ ಕರೆದು, ರಾಜ್ಯ ದೇವಳ ಅಭಿವೃದ್ಧಿ ಹಾಗೂ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸಬೇಕು. ಒಂದು ವೇಳೆ ಅನಿವಾರ್ಯವಾದರೆ ಮಧ್ಯೆ ತುರ್ತು ಸಭೆ ಕರೆಯಬಹುದೆಂಬ ನಿಯಮವಿದೆ. ಆದರೆ ಮುಜರಾಯಿ ಇಲಾಖೆ ಇದೆಲ್ಲವನ್ನೂ ಗಾಳಿಗೆ ತೂರಿದೆ ಎಂಬ ಅಪಾದನೆಗಳು ಕೇಳಿ ಬರುತ್ತಿವೆ.
ರಂಗರಾಜನ್ ರಾಜ್ಯ ಮುಜರಾಯಿ ಅರ್ಚಕರ ಗ್ರೂಪ್ ಅಡ್ಮಿನ್, ಸಂಘಟನಾ ಕಾರ್ಯದರ್ಶಿ, ಯವರು
ಹೇಳಿಕೆ.
ಜಿಲ್ಲಾ ಮುಜರಾಯಿ ಇಲಾಖೆಯ ಅಧಿಕಾರಿಗಳು, ವ್ಯವಸ್ಥಾಪನಾ ಸಮಿತಿಯನ್ನು ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ತು ರಚಿಸಿದೆ ಹಿನ್ನೆಲೆಯಲ್ಲಿ ದೇವಸ್ಥಾನದ ಪ್ರಗತಿಗೆ ಹಿನ್ನಡೆಯಾಗಿದೆ , ಸ್ಥಳೀಯ ಅಧಿಕಾರಿಗಳು ಗಮನ ಕೊಟ್ಟಿಲ್ಲ, ಮುಜರಾಯಿ ಸಚಿವರಿಗೆ, ಹಾಗೂ ಧಾರ್ಮಿಕ ದತ್ತಿ ಆಯುಕ್ತರು ರವರಿಗೆ ಸದಸ್ಯರ ನೇಮಕ ಮಾಡಲು ವರದಿ ಸಲ್ಲಿಸಬೇಕು, ಅದು ಮಾಡಿಲ್ಲ, ಆದುದರಿಂದ ವಿಳಂಬ ಧೋರಣೆ ಆಗಿದೆ, ತಕ್ಷಣ ಕ್ರಮ ಕೈಗೊಳ್ಳಬೇಕು, ರಾಯಚೂರು ಜಿಲ್ಲೆ ಧಾರ್ಮಿಕ ಪರಿಷತ್ ಸದಸ್ಯರ ಆಯ್ಕೆ ಮಾಡಬೇಕು.
– ರಂಗರಾಜನ್ ರಾಜ್ಯ ಮುಜರಾಯಿ ಅರ್ಚಕರ ಗ್ರೂಪ್ ಅಡ್ಮಿನ್, ಸಂಘಟನಾ ಕಾರ್ಯದರ್ಶಿ, ಯವರು.
ವರದಿ : ಸಿದ್ದಯ್ಯ ಹೆಸರೂರು tv8kannada ಮಸ್ಕಿ