T20 Worldcup 2021 ಆರಂಭಗೊಂಡಿದ್ದು, ಕ್ರಿಕೆ ಟ್ ಪ್ರೇಮಿಗಳು ಟಿವಿ ಎದುರು ಹಾಜರಿರುವಂತೆ ಮಾಡಿದೆ. ಅದರಂತೆ ಇದೇ 24 ರಂದು ಇಂಡಿಯಾ ಮತ್ತು ಪಾಕ್ (Ind vs Pak) ನಡುವೆ ಕಾದಾಟ ನಡೆಲಿದೆ. ಹಾಗಾಗಿ ಈ ಪಂದ್ಯವನ್ನು ವೀಕ್ಷಿಸಲು ಭಾರತೀಯರು ಕಾದು ಕುಳಿತಿದ್ದಾರೆ. ಹೀಗಿರುವಾಗ DTH ಪೂರೈಕೆದಾರ ಡಿಸ್ಟಿವಿ (Dish Tv) ತನ್ನ ಬಳಕೆದಾರರ ಅತ್ಯುತ್ತಮ ಚಾನೆಲ್ ಪ್ಯಾಕ್ ಒದಗಿಸುತ್ತಿದೆ. ಗ್ರಾಹಕರಿಗೆಂದೇ ಎರಡು ಚಾನೆಲ್ ಪ್ಯಾಕ್ಗಳನ್ನು ನೀಡುತ್ತಿದೆ.
ನೂತನ ಚಾನೆಲ್ ಪ್ಯಾಕ್ ರೀಚಾರ್ಜ್ (Reacharge) ಮಾಡುವ ಮೂಲಕ ಕೇವಲ 19 ರೂಗಳಷ್ಟು ಕಡಿಮೆ ಹಣವನ್ನು ಪಾವತಿ ಮಾಡುವ ಮೂಲಕ ಕ್ರಿಕೆಟ್ (Cricket) ಪಂದ್ಯವನ್ನು ಲೈವ್ (Live)ಆಗಿ ವೀಕ್ಷಿಸಬಹುದಾಗಿದೆ.
ಸ್ಟಾರ್ ಸ್ಪೋರ್ಟ್ (Star Sports) ಮೂಲಕ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಉಪಯೋಗವಾಗಲೆಂದು 19 ರೂ.ವಿನ ಪ್ಯಾಕ್ ಘೋಷಿಸಿದೆ. ಅಂದಹಾಗೆಯೇ 19 ರೂ.ವಿನ 2 ಚಾನೆಲ್ ಪ್ಯಾಂಕ್ ಅನ್ನು ಘೋಷಿಸಿದೆ. ಅದರಲ್ಲಿ ಸ್ಟಾರ್ ಸ್ಪೋರ್ಟ್ 1 ಮತ್ತು ಸ್ಟಾರ್ ಸ್ಪೋರ್ಟ್ 1 ಎಚ್ಡಿ ಸೇರಿದೆ.