ಚೆನ್ನೈ ನಲ್ಲಿ ಪ್ರತಿಭಟನಾ ನಿರತ ರೈತರ ಬಂಧನ: ಹಲವೆಡೆ ರೈಲ್ವೆ, ರಸ್ತೆ ತಡೆ

ನವದೆಹಲಿ : ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು ದೇಶದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವೆಡೆ ಪ್ರತಿಭಟನಾಕಾರರು ರಸ್ತೆ ತಡೆ, ರೈಲುಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ರೈತ ಸಂಘಟನೆಗಳು ಕರೆ ನೀಡಿದ ಭಾರತ್ ಬಂದ್ ಗೆ ಬೆಂಬಲವಾಗಿ ಚೆನ್ನೈನ ಅಣ್ಣಾ ಸಲೈ ಪ್ರದೇಶದಲ್ಲಿ ಪೊಲೀಸ್ ಬ್ಯಾರಿಕೇಡ್ ಮುರಿದಿದ್ದಾರೆ. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಂಬಾಲಾ ಮತ್ತು ಫಿರೋಜ್ ಪುರ ವಿಭಾಗಗಳಲ್ಲಿ ಸುಮಾರು 25 ರೈಲುಗಳು ಬಾಧಿತವಾಗಿವೆ ಎಂದು ಉತ್ತರ ರೈಲ್ವೆ ತಿಳಿಸಿದೆ. ‘ಜನರು ರೈಲ್ವೆ ಹಳಿಗಳ ಮೇಲೆ ಕುಳಿತಿರುವುದರಿಂದ ದೆಹಲಿ, ಅಂಬಾಲಾ ಮತ್ತು ಫಿರೋಜ್ ಪುರ ವಿಭಾಗಗಳಲ್ಲಿ ರೈಲು ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದೆ.
ದೆಹಲಿ ವಿಭಾಗದಲ್ಲಿ 20ಕ್ಕೂ ಹೆಚ್ಚು ಸ್ಥಳಗಳನ್ನು ನಿರ್ಬಂಧಿಸಲಾಗುತ್ತಿದೆ. ಅಂಬಾಲಾ ಮತ್ತು ಫಿರೋಜ್ ಪುರ ವಿಭಾಗಗಳಲ್ಲಿ ಸುಮಾರು 25ರೈಲುಗಳು ಬಾಧಿತವಾಗಿವೆ’ ಎಂದು ಉತ್ತರ ರೈಲ್ವೆ ತಿಳಿಸಿದೆ.